ಹಾಲಿವುಡ್ ನಟಿ ನಯ ರಿವೇರಾ ಮೃತದೇಹ ಕ್ಯಾಲಿಫೋರ್ನಿಯಾ ಕಣಿವೆಯಲ್ಲಿ ಪತ್ತೆ

ಕಳೆದ ವಾರ ಕ್ಯಾಲಿಫೋರ್ನಿಯಾ ಕಣಿವೆಯಲ್ಲಿ ಬೋಟ್ ಮಗುಚಿ ನಾಪತ್ತೆಯಾಗಿದ್ದ ಹಾಲಿವುಡ್‌ನ ಖ್ಯಾತ ನಟಿ ನಯ ರಿವೇರಾ ಮೃತದೇಹ ಸೋಮವಾರ ಪತ್ತೆಯಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ನಯ ರಿವೇರಾ
ನಯ ರಿವೇರಾ

ಲಾಸ್ ಏಂಜಲೀಸ್: ಕಳೆದ ವಾರ ಕ್ಯಾಲಿಫೋರ್ನಿಯಾ ಕಣಿವೆಯಲ್ಲಿ ಬೋಟ್ ಮಗುಚಿ ನಾಪತ್ತೆಯಾಗಿದ್ದ ಹಾಲಿವುಡ್‌ನ ಖ್ಯಾತ ನಟಿ ನಯ ರಿವೇರಾ ಮೃತದೇಹ ಸೋಮವಾರ ಪತ್ತೆಯಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ರಿವೇರಾ ಮೃತದೇಹ ಪತ್ತೆಯಾಗಿದೆ. ಇದು ಆತ್ಮಹತ್ಯೆ ಅಲ್ಲ ಎಂಬುದು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಿಂದ ತಿಳಿದು ಬಂದಿದೆ ಎಂದು ವೆಂಚುರಾ ಕಂಟ್ರಿ ಶೆರಿಫ್ ಬಿಲ್ ಅಯುಬ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. 33ರ ಹರೆಯದ ರಿವೇರಾ ಲಾಸ್‌ ಏಂಜಲೀಸ್ ಸುತ್ತಾಡುವುದಕ್ಕಾಗಿ ಬೋಟ್‌ ಒಂದನ್ನು ಒಂದು ಗಂಟೆಗಳ ಅವಧಿಗೆ ಬಾಡಿಗೆಗೆ ಪಡೆದುಕೊಂಡಿದ್ದರು. ಆಕೆಯ ಜತೆ ಕಿರಿಯ ಮಗನೂ ಬೋಟ್‌ನಲ್ಲಿದ್ದನು. ಬುಧವಾರ ಮಧ್ಯಾಹ್ನ ರಿವೇರಾ ಅವರ ಬೋಟ್ ನಾಪತ್ತೆಯಾಗಿತ್ತು. ರಕ್ಷಣಾ ಬೋಟ್‌ಗಳ ಸಹಾಯದಿಂದ ಹುಡುಕಾಟ ನಡೆಸಿದಾಗ ಮುಳುಗಿರುವ ಬೋಟ್ ಮತ್ತು ಆಕೆಯ ಮಗ ಪತ್ತೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com