ಸೇನಾ ಹಿಂತೆಗೆತದ ಮುಂದುವರಿಕೆಯಲ್ಲಿ ಚೀನಾ-ಭಾರತ ಸೇನೆ ಪ್ರಗತಿ ಸಾಧಿಸಿವೆ: ಚೀನಾ

ಈಶಾನ್ಯ ಲಡಾಖ್ ನ ಎಲ್ಎಸಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದ ಸುಧಾರಣೆಗಾಗಿ ನಡೆದಿರುವ ಕಮಾಂಡರ್ ಮಟ್ಟದ ನಾಲ್ಕನೇ ಮಾತುಕತೆಯಲ್ಲಿ ಭಾರತ-ಚೀನಾ ಪ್ರಗತಿ ಸಾಧಿಸಿದೆ ಎಂದು ಚೀನಾ ಹೇಳಿದೆ.
ಸೇನಾ ಹಿಂತೆಗೆತದ ಮುಂದುವರಿಕೆಯಲ್ಲಿ ಚೀನಾ-ಭಾರತ ಸೇನೆ ಪ್ರಗತಿ ಸಾಧಿಸಿವೆ: ಚೀನಾ
ಸೇನಾ ಹಿಂತೆಗೆತದ ಮುಂದುವರಿಕೆಯಲ್ಲಿ ಚೀನಾ-ಭಾರತ ಸೇನೆ ಪ್ರಗತಿ ಸಾಧಿಸಿವೆ: ಚೀನಾ

ಬೀಜಿಂಗ್: ಈಶಾನ್ಯ ಲಡಾಖ್ ನ ಎಲ್ಎಸಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದ ಸುಧಾರಣೆಗಾಗಿ ನಡೆದಿರುವ ಕಮಾಂಡರ್ ಮಟ್ಟದ ನಾಲ್ಕನೇ ಮಾತುಕತೆಯಲ್ಲಿ ಭಾರತ-ಚೀನಾ ಪ್ರಗತಿ ಸಾಧಿಸಿದೆ ಎಂದು ಚೀನಾ ಹೇಳಿದೆ.

ಸೇನಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮುಂದುವರೆಸುವ ನಿಟ್ಟಿನಲ್ಲಿ ಭಾರತ-ಚೀನಾ ಪ್ರಗತಿ ಸಾಧಿಸಿದೆ ಎಂದು ಚೀನಾ ಅಧಿಕಾರಿಗಳು ತಿಳಿಸಿದ್ದಾರೆ. 

ಉಭಯ ಪಕ್ಷಗಳ ಹಿರಿಯ ಕಮಾಂಡರ್ ಗಳ ನಡುವಿನ ಸಂಕೀರ್ಣ ಮಾತುಕತೆ ಸುಮಾರು 15 ಗಂಟೆಗಳ ಕಾಲ ನಡೆದಿದ್ದು,  ಭಾರತೀಯ ನಿಯೋಗ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೆ ರೆಡ್ ಲೈನ್ಸ್ ಬಗ್ಗೆ ಮಾಹಿತಿ ನೀಡಿದ್ದು, ಈ ನಿರ್ದಿಷ್ಟ ಪ್ರದೇಶದಲ್ಲಿ ಸಂಪೂರ್ಣ ಪರಿಸ್ಥಿತಿಯ ಸುಧಾರಣೆಯ ಜವಾಬ್ದಾರಿ ಚೀನಾದ ಮೇಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಮಂಗಳವಾರದ ಸೇನಾ ಮಾತುಕತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, ವೆಸ್ಟ್ರನ್ ಸೆಕ್ಟರ್ ನಲ್ಲಿ ಸೇನಾ ಹಿಂತೆಗೆತದ ಮುಂದುವರಿಕೆಗೆ ಸಂಬಂಧಿಸಿದಂತೆ ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಗಡಿ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಒಮ್ಮತದ ನಿರ್ಧಾರವನ್ನು ಜಾರಿಗೆ ತರಲು ಭಾರತ ಚೀನಾ ಜೊತೆಗೆ ಕೆಲಸ ಮಾಡಬಹುದು ಎಂಬ ವಿಶ್ವಾಸವಿದೆ ಎಂದು ವಿದೇಶಾಂಗ ಸಚಿವಾಲದ ವಕ್ತಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com