ಟ್ರಂಪ್ ಆಡಳಿತದಿಂದ ಯು-ಟರ್ನ್: ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕಾ ವೀಸಾ ನಿರಾಕರಿಸಿದ್ದ ಆದೇಶ ರದ್ದು!

ಕನಿಷ್ಟ ಒಂದಾದರೂ ಕೋರ್ಸ್ ಗಳಲ್ಲಿ ನೇರವಾಗಿ ತರಗತಿಗಳಿಗೆ ಹಾರಜಾಗದೇ ಇದ್ದ ವಿದೇಶಿ ವಿದ್ಯಾರ್ಥಿಗಳು ಅಮೆರಿಕಾದಲ್ಲಿರುವುದನ್ನು ನಿರ್ಬಂಧಿಸಲು ವೀಸಾ ನಿರಾಕರಿಸಿದ್ದ ಆದೇಶವನ್ನು ಟ್ರಂಪ್ ಸರ್ಕಾರ ವಾಪಸ್ ಪಡೆದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್: ಕನಿಷ್ಟ ಒಂದಾದರೂ ಕೋರ್ಸ್ ಗಳಲ್ಲಿ ನೇರವಾಗಿ ತರಗತಿಗಳಿಗೆ ಹಾರಜಾಗದೇ ಇದ್ದ ವಿದೇಶಿ ವಿದ್ಯಾರ್ಥಿಗಳು ಅಮೆರಿಕಾದಲ್ಲಿರುವುದನ್ನು ನಿರ್ಬಂಧಿಸಲು ವೀಸಾ ನಿರಾಕರಿಸಿದ್ದ ಆದೇಶವನ್ನು ಟ್ರಂಪ್ ಸರ್ಕಾರ ವಾಪಸ್ ಪಡೆದಿದೆ.

ಕೇವಲ ಆನ್ ಲೈನ್ ಗಳಲ್ಲೇ ತರಗತಿಗಳಿಗೆ ಹಾಜರಾಗುವ ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕಾ ವೀಸಾ ರದ್ದುಗೊಳಿಸುವ ಆದೇಶವನ್ನು ಟ್ರಂಪ್ ಸರ್ಕಾರ ಜುಲೈ 6 ರಂದು ಹೊರಡಿಸಿತ್ತು. ಈ ಆದೇಶ ಜಾರಿಗೊಳಿಸುವುದರ ವಿರುದ್ಧ ಹಾರ್ವರ್ಡ್, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದಂಟೆ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಕೋರ್ಟ್ ಮೊರೆ ಹೋಗಿದ್ದವು.

ಫೆಡರಲ್ ಡಿಸ್ಟ್ರಿಕ್ಟ್ ಕೋರ್ಟ್ ನಲ್ಲಿ ಈ ವಿವಾದ ಇತ್ಯರ್ಥಗೊಂಡಿದ್ದು, ಟ್ರಂಪ್ ಸರ್ಕಾರ ವಿದೇಶಿ ವಿದ್ಯಾರ್ಥಿಗಳಿಗೆ ವೀಸಾ ನಿರಾಕರಿಸುವ ಈ ಹಿಂದಿನ ಆದೇಶವನ್ನು ಹಿಂಪಡೆಯಲು ಒಪ್ಪಿರುವುದಾಗಿ ಕೋರ್ಟ್ ತಿಳಿಸಿದೆ. ಅಮೆರಿಕದ ಸರ್ಕಾರ ಜು.6 ರಂದು ಹೊರಡಿಸಿದ್ದರ ಆದೇಶದ ಪ್ರಕಾರ ವಿದೇಶದಿಂದ ಬಂದು ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕನಿಷ್ಟ ಒಂದು ಕೋರ್ಸ್ ನಲ್ಲಿ ನೇರವಾಗಿ ತರಗತಿಗೆ ಹಾಜಾರಾಗಬೇಕಿತ್ತು, ಹಾಗಿಲ್ಲದೇ ಕೇವಲ ಆನ್ ಲೈನ್ ನಲ್ಲಿಯೇ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು ವಾಪಸ್ ತಮ್ಮ ದೇಶಕ್ಕೆ ತೆರಳಬೇಕು, ಅವರಿಗೆ ಅಮೆರಿಕಾದಲ್ಲೇ ಉಳಿದುಕೊಳ್ಳುವುದಕ್ಕೆ ವೀಸಾ ವ್ಯವಸ್ಥೆಯನ್ನು ಮುಂದುವರೆಸಲು ಸಾಧ್ಯವಿರಲಿಲ್ಲ ಎಂಬ ಅಂಶಗಳನ್ನು ಸೇರಿಸಲಾಗಿತ್ತು. ಈ ಆದೇಶಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು.

ಟ್ರಂಪ್ ಸರ್ಕಾರದ ಆದೇಶ ಜಾರಿಗೊಳಿಸುವುದರ ವಿರುದ್ಧ ಅಮೆರಿಕದ 17 ರಾಜ್ಯಗಳು ಹಾಗೂ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ, ಅಮೆರಿಕಾದ ಐಟಿ ಕಂಪನಿಗಳಾದ ಗೂಗಲ್, ಫೇಸ್ ಬುಕ್ ಹಾಗೂ ಮೈಕ್ರೋಸಾಫ್ಟ್, ವಿವಿಗಳಾದ ಎಂಐಟಿ, ಹಾರ್ವರ್ಡ್ ಕೋರ್ಟ್ ಮೊರೆ ಹೋಗಿದ್ದವು.  ಈ ಪ್ರಕರಣದ ವಿಚಾರಣೆ ನಡೆದು, "ಅಮೆರಿಕ ಸರ್ಕಾರ ತನ್ನ ಆದೇಶವನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಿದೆ" ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com