ನನಗೆ ಭಾರತ, ಚೀನಾ ಜನರೆಂದರೆ ಪ್ರೀತಿ, ಶಾಂತಿ ಸ್ಥಾಪನೆಗೆ ಸಾಧ್ಯವಿರುವ ಎಲ್ಲವನ್ನೂ ಮಾಡುವ ಬಯಕೆ: ಟ್ರಂಪ್

ಭಾರತ, ಚೀನಾ ಜನರಿಗಾಗಿ ಶಾಂತಿ ಸ್ಥಾಪನೆಗಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡಲು ಬಯಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 
ಟ್ರಂಪ್-ಮೋದಿ
ಟ್ರಂಪ್-ಮೋದಿ

ವಾಷಿಂಗ್ ಟನ್: ಭಾರತ, ಚೀನಾ ಜನರಿಗಾಗಿ ಶಾಂತಿ ಸ್ಥಾಪನೆಗಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡಲು ಬಯಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 

ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ಅವರ ವಕ್ತಾರರು ಬಹಿರಂಗಪಡಿಸಿದ್ದು, "ನಾನು ಭಾರತದ ಜನರು, ಚೀನಾ ಜನರನ್ನು ಪ್ರೀತಿಸುತ್ತೇನೆ, ಆ ಜನಗಳಿಗಾಗಿ ಶಾಂತಿ ಕಾಪಾಡಲು ಅಗತ್ಯವಿರುವ ಎಲ್ಲವನ್ನೂ ಮಾಡ ಬಯಸುವುದಾಗಿ ಟ್ರಂಪ್ ಹೇಳಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. 

ಚೀನಾದೊಂದಿಗೆ ಗಡಿ ಸಂಘರ್ಷ ಉಂಟಾದಾಗಿನಿಂದಲೂ ಟ್ರಂಪ್ ಆಡಳಿತ ಭಾರತದ ಬೆಂಬಲಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಟ್ರಂಪ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಲಡಾಖ್ ನಲ್ಲಿ ಚೀನಾ-ಭಾರತದ ನಡುವೆ ಉಂಟಾದ ಸಂಘರ್ಷದ ಬಗ್ಗೆ ಭಾರತಕ್ಕೆ ಟ್ರಂಪ್ ನೀಡಬಯಸುವ ಸಂದೇಶವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಶ್ವೇತ ಭವನದ ವಕ್ತಾರರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ್ದ ಶ್ವೇತ ಭವನದ ಆರ್ಥಿಕ ಸಲಹೆಗಾರ ಭಾರತವನ್ನು ಶ್ರೇಷ್ಠ ಮಿತ್ರ ರಾಷ್ಟ್ರ, ಪ್ರಧಾನಿ ನರೇಂದ್ರ ಮೋದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ರೇಷ್ಠ ಮಿತ್ರ ಎಂದು ಬಣ್ಣಿಸಿದ್ದರು.

ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ (ಸಚಿವ) ಮೈಕ್ ಪೋಂಪಿಯೋ ಸಹ ಭಾರತವನ್ನು ಅಮೆರಿಕಾದ ಅತ್ಯಂತ ಆಪ್ತ ಪಾಲುದಾರ ರಾಷ್ಟ್ರ ಎಂದು ಬಣ್ಣಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com