ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೊರೋನಾ ವೈರಸ್ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯಲ್ಲಿ ರೋಗನಿರೋಧಕತೆ ಹೆಚ್ಚಳ!

ಮಹಾಮಾರಿ ಕೊರೋನಾ ಇಡೀ ಜಗತ್ತನ್ನು ಕಂಗೆಡಿಸಿದ್ದು ಪ್ರತಿಷ್ಠಿತ ಫಾರ್ಮಾ ಕಂಪನಿಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ. ಇದರ ಮಧ್ಯೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸಂಶೋಧಿಸಿರುವ ಕೊರೋನಾವೈರಸ್ ಲಸಿಕೆ ಆರಂಭಿಕ ಪರೀಕ್ಷೆಯಲ್ಲಿ ರೋಗನಿರೋಧಕ ವೃದ್ಧಿಯಾಗಿದೆ ಎಂದು ತಿಳಿಸಿದೆ. 

Published: 21st July 2020 12:57 AM  |   Last Updated: 21st July 2020 12:20 PM   |  A+A-


For representation purpose only

ಸಂಗ್ರಹ ಚಿತ್ರ

Posted By : Vishwanath S
Source : Associated Press

ಲಂಡನ್: ಮಹಾಮಾರಿ ಕೊರೋನಾ ಇಡೀ ಜಗತ್ತನ್ನು ಕಂಗೆಡಿಸಿದ್ದು ಪ್ರತಿಷ್ಠಿತ ಫಾರ್ಮಾ ಕಂಪನಿಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ. ಇದರ ಮಧ್ಯೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಕಂಡುಹಿಡಿದಿರುವ ಕೊರೋನಾವೈರಸ್ ಲಸಿಕೆ ಆರಂಭಿಕ ಪರೀಕ್ಷೆಯಲ್ಲಿ ರೋಗನಿರೋಧಕ ವೃದ್ಧಿಯಾಗಿದೆ ಎಂದು ತಿಳಿಸಿದೆ. 

ನೂರಾರು ಜನರ ಮೇಲೆ ಪ್ರಾಯೋಗಿಕವಾಗಿ ಕೊರೋನಾ ವೈರಸ್ ಲಸಿಕೆಯನ್ನು ಬಳಸಲಾಗಿದ್ದು ಈ ಲಸಿಕೆ ಜನರಲ್ಲಿ ರಕ್ಷಣಾತ್ಮಕ ರೋಗನಿರೋಧಕವನ್ನು ಹೆಚ್ಚಿಸಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ. 

ಕಳೆದ ಏಪ್ರಿಲ್ ನಲ್ಲೇ ಸುಮಾರು 1000 ಮಂದಿ ಮೇಲೆ ಲಸಿಕೆ ಪ್ರಯೋಗ ಪ್ರಾರಂಭಿಸಲಾಗಿತ್ತು. ಈ ಪೈಕಿ ಅರ್ಧದಷ್ಟು ಮಹಿಳೆಯರಿದ್ದು ಅವರಿಗೂ ಆರಂಭಿಕವಾಗಿ ಲಸಿಕೆ ನೀಡಿಲಾಗಿತ್ತು. ಇದರಿಂದ ಸುರಕ್ಷತೆಯನ್ನು ಮೌಲ್ಯಮಾಪನ ಮಾಡಲು ಮತ್ತು ಯಾವ ರೀತಿಯ ರೋಗನಿರೋಧಕ ಪ್ರಕ್ರಿಯೆ ಆರಂಭಿಸುತ್ತದೆ ಎಂಬುದನ್ನು ನೋಡಲು ವಿನ್ಯಾಸಗೊಳಿಸಲಾಗಿತ್ತು. ಆದರೆ ಲಸಿಕೆ ನಿಜವಾಗಿಯೂ ಜನರನ್ನು ರಕ್ಷಿಸುತ್ತದೆಯೇ ಎಂದು ಹೇಳಲು ಸಾಧ್ಯವಿಲ್ಲ.

ಲ್ಯಾನ್ಸೆಟ್ ಜರ್ನಲ್ನಲ್ಲಿ ಸೋಮವಾರ ಪ್ರಕಟವಾದ ವರದಿಯಲ್ಲಿ ವಿಜ್ಞಾನಿಗಳು ತಮ್ಮ ಪ್ರಾಯೋಗಿಕ ಕೋವಿಡ್ 19 ಲಸಿಕೆಯನ್ನು 18 ರಿಂದ 55 ವರ್ಷ ವಯಸ್ಸಿನವರ ಮೇಲೆ ಬಳಸಲಾಗಿದ್ದು ಅವರಲ್ಲಿ ಉಭಯ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡಿದೆ ಎಂದು ಪತ್ತೆಹಚ್ಚಿದ್ದಾರೆ. ಎರಡು ತಿಂಗಳ ಬಳಿಕ ಅವರಲ್ಲಿ ರೋಗನಿರೋಧಕ ಹೆಚ್ಚಳವಾಗಿದೆ.

"ನಾವು ಎಲ್ಲರಲ್ಲೂ ಉತ್ತಮ ರೋಗನಿರೋಧಕ ಶಕ್ತಿ ವೃದ್ಧಿಯಾಗಿರುವುದನ್ನು ನೋಡಿದ್ದೇವೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೆನ್ನರ್ ಸಂಸ್ಥೆಯ ನಿರ್ದೇಶಕ ಡಾ. ಆಡ್ರಿಯನ್ ಹಿಲ್ ಹೇಳಿದ್ದು "ಈ ಲಸಿಕೆ ವಿಶೇಷವಾಗಿ ರೋಗನಿರೋಧಕ ವ್ಯವಸ್ಥೆಯ ಎರಡೂ ಆಯಾಮಗಳನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp