ಚೀನಾದ ಟಿಕ್ ಟಾಕ್ ಗೆ ಪಾಕ್ ಎಚ್ಚರಿಕೆ, ಬಿಗೊ ಲೈವ್ ಆ್ಯಪ್ ನಿಷೇಧ

ಪಾಕಿಸ್ತಾನ ತನ್ನ ಮಿತ್ರ ದೇಶ ಚೀನಾದ ಟಿಕ್‌ ಟಾಕ್‌ ಆ್ಯಪ್ ಅನ್ನು ತನ್ನ ದೇಶದಲ್ಲಿ ನಿಷೇಧಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ. ಅಲ್ಲದೆ ಸಿಂಗಾಪೂರ್ ಮೂಲದ ಬಿಗೊ ಲೈವ್ ಆ್ಯಪ್ ಅನ್ನು ನಿಷೇಧಿಸಿದೆ.
ಟಿಕ್‌ಟಾಕ್‌
ಟಿಕ್‌ಟಾಕ್‌

ಇಸ್ಲಾಮಾಬಾದ್‌: ಪಾಕಿಸ್ತಾನ ತನ್ನ ಮಿತ್ರ ದೇಶ ಚೀನಾದ ಟಿಕ್‌ ಟಾಕ್‌ ಆ್ಯಪ್ ಅನ್ನು ತನ್ನ ದೇಶದಲ್ಲಿ ನಿಷೇಧಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ. ಅಲ್ಲದೆ ಸಿಂಗಾಪೂರ್ ಮೂಲದ ಬಿಗೊ ಲೈವ್ ಆ್ಯಪ್ ಅನ್ನು ನಿಷೇಧಿಸಿದೆ.

ಅಶ್ಲೀಲತೆ ಮತ್ತು ಅನೈತಿಕತೆ ಪ್ರತಿಬಿಂಬಿಸುವ ವಿಡಿಯೋಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಟಿಕ್‌ ಟಾಕ್‌ ಗೆ ನಿಷೇಧಿಸುವ ಎಚ್ಚರಿಕೆ ನೀಡಿದೆ ಮತ್ತು ಇದೇ ಕಾರಣದಿಂದ ಬಿಗೊ ಆ್ಯಪ್ ಅನ್ನು ನಿಷೇಧಿಸಿದೆ.

ಈ ಎರಡು ಆ್ಯಪ್ ಗಳಲ್ಲಿನ ವಿಷಯವು ಸಾಮಾನ್ಯವಾಗಿ ಸಮಾಜದ ಮೇಲೆ ಮತ್ತು ವಿಶೇಷವಾಗಿ ಯುವಕರ ಮೇಲೆ ಅತ್ಯಂತ ಕೆಟ್ಟ ಪರಿಣಾಮಗಳನ್ನು ಬೀರಬಹುದಾಗಿದೆ ಎಂದು ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಎರಡು ಕಂಪನಿಗಳಿಗೆ ದೂರು ನೀಡಲಾಗಿದೆ.  ಆದರೆ ಈ ಕಂಪನಿಗಳ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ ಎಂದು ಪಾಕ್ ದೂರ ಸಂಪರ್ಕ ಪ್ರಾಧಿಕಾರ ಸೋಮವಾರ ಟ್ವೀಟ್ ಮಾಡಿತ್ತು.

ಬೀಜಿಂಗ್ ಟೆಕ್ ದೈತ್ಯ ಬೈಟ್ ಡ್ಯಾನ್ಸ್ ಒಡೆತನದ ಟಿಕ್ ಟಾಕ್ ಮತ್ತು ಸಿಂಗಾಪುರ್ ಕಂಪನಿಯ ಒಡೆತನದ ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಬಿಗೊ ಲೈವ್ ಎರಡೂ ಪಾಕಿಸ್ತಾನದ ಹದಿಹರೆಯದವರು ಮತ್ತು ಯುವಕರಲ್ಲಿ ಅತ್ಯಂತ ಜನಪ್ರಿಯವಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com