ಮುಂದಿನ ವರ್ಷದ ಆರಂಭದವರೆಗೆ ಕೋವಿಡ್-19 ಲಸಿಕೆ ನಿರೀಕ್ಷಿಸಬೇಡಿ: ಡಬ್ಲ್ಯೂಎಚ್ ಒ

ಕೊನೆಯ ಹಂತದ ಪ್ರಯೋಗದೊಂದಿಗೆ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ದದ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಂಶೋಧಕರು ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಆದರೆ, ಮುಂದಿನ ವರ್ಷದ ಆರಂಭದವರೆಗೂನಿರೀಕ್ಷಿಸಲಾಗದು ಎಂದು ಡಬ್ಲುೂಎಚ್ ಒ ತಜ್ಞರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಕೊನೆಯ ಹಂತದ ಪ್ರಯೋಗದೊಂದಿಗೆ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ದದ ಮೊದಲ ಲಸಿಕೆಯನ್ನು
ಅಭಿವೃದ್ಧಿಪಡಿಸುವಲ್ಲಿ ಸಂಶೋಧಕರು ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಆದರೆ, ಮುಂದಿನ ವರ್ಷದ ಆರಂಭದವರೆಗೂ
ನಿರೀಕ್ಷಿಸಲಾಗದು ಎಂದು ಡಬ್ಲುೂಎಚ್ ಒ ತಜ್ಞರು ಹೇಳಿದ್ದಾರೆ.

ನ್ಯಾಯಯುತ ಲಸಿಕೆ ವಿತರಣೆ ಖಾತ್ರಿ ನಿಟ್ಟಿನಲ್ಲಿ ಡಬ್ಯೂಎಚ್ ಒ ಕಾರ್ಯನಿರ್ವಹಿಸುತ್ತಿದೆ. ಈ ಮಧ್ಯೆ ಜಗತ್ತಿನಾದ್ಯಂತ ದಿನನಿತ್ಯ 
ಸೋಂಕು ಪ್ರಕರಣಗಳು  ದಾಖಲೆ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ವೈರಸ್ ಹರಡುವಿಕೆ ನಿಗ್ರಹ ಪ್ರಮುಖವಾಗಿದೆ ಎಂದು ಡಬ್ಲುಎಚ್ ಒ
 ತುರ್ತು ಕಾರ್ಯಕ್ರಮಗಳ ಮುಖ್ಯಸ್ಥ ಮೈಕ್ ರಯಾನ್ ತಿಳಿಸಿದ್ದಾರೆ.

ಅನೇಕ ಲಸಿಕಗಳು ಇದೀಗ ಮೂರನೇ ಪ್ರಾಯೋಗಿಕ ಹಂತದಲ್ಲಿದ್ದು, ಯಾವುದು ಕೂಡಾ ವಿಫಲವಾಗಿಲ್ಲ, ಈವರೆಗೂ ಸುರಕ್ಷತೆ ಮತ್ತು 
ರೋಗ ನಿರೋಧಕ ಶಕ್ತಿಯನ್ನು ಉತ್ಪಾಧಿಸುವ ಸಾಮರ್ಥ್ಯ ಹೊಂದಿದ್ದು, ಸಂಶೋಧಕರು ಉತ್ತಮ ಪ್ರಗತಿ ಸಾಧಿಸಿದ್ದಾರೆ ಎಂದು ರಯಾನ್ ಹೇಳಿದ್ದಾರೆ.

ವಾಸ್ತವವಾಗಿ ಜನರು ಚಿಕಿತ್ಸೆ ಪಡೆಯಬೇಕಾಗದರೆ ಮುಂದಿನ ವರ್ಷದ ಆರಂಭವದವರೆಗೂ ಕಾಯಲೇಬೇಕಾಗುತ್ತದೆ.  ಸಂಭಾವ್ಯ
ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಹಾಗೂ ಎಲ್ಲಾ ಕಡೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ  ಡಬ್ಲ್ಯೂಎಚ್ ಒ ಕಾರ್ಯನಿರ್ವಹಿಸುತ್ತಿದೆ.ಇದು ಜಾಗತಿಕ ವಸ್ತುವಾಗಿದ್ದು, ನ್ಯಾಯಯುತವಾಗಿ ಹಂಚಿಕೆ ಮಾಡಬೇಕಾದದ್ದು ಅಗತ್ಯವಾಗಿದೆ. ಈ ಲಸಿಕೆಗಳು ಕೇವಲ ಶ್ರೀಮಂತರು ಅಥವಾ ಬಡವರಿಗಲ್ಲಾ, ಪ್ರತಿಯೊಬ್ಬರಿಗೂ ದೊರೆಯುವಂತಾಗಿದೆ ಎಂದು
ರಯಾನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com