ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಹಕ್ಕು ಅಕ್ರಮ ಎಂಬ ಅಮೆರಿಕ ಘೋಷಣೆಗೆ ಆಸ್ಟ್ರೇಲಿಯಾ ಬೆಂಬಲ!

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಹಕ್ಕನ್ನು ಅಕ್ರಮ ಎಂಬ ಅಮೆರಿಕಾದ ಅಭಿಪ್ರಾಯಕ್ಕೆ ಆಸ್ಟ್ರೇಲಿಯಾ ಸಹ ಧ್ವನಿಗೂಡಿಸಿದೆ. 
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಹಕ್ಕು ಅಕ್ರಮ ಎಂಬ ಅಮೆರಿಕ ಘೋಷಣೆಗೆ ಆಸ್ಟ್ರೇಲಿಯಾ ಬೆಂಬಲ!
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಹಕ್ಕು ಅಕ್ರಮ ಎಂಬ ಅಮೆರಿಕ ಘೋಷಣೆಗೆ ಆಸ್ಟ್ರೇಲಿಯಾ ಬೆಂಬಲ!

ಸಿಡ್ನಿ: ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಹಕ್ಕನ್ನು ಅಕ್ರಮ ಎಂಬ ಅಮೆರಿಕಾದ ಅಭಿಪ್ರಾಯಕ್ಕೆ ಆಸ್ಟ್ರೇಲಿಯಾ ಸಹ ಧ್ವನಿಗೂಡಿಸಿದೆ. 

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಪ್ರಾದೇಶಿಕ ಮತ್ತು ಕಡಲ ಹಕ್ಕುಗಳನ್ನು ಆಸ್ಟ್ರೇಲಿಯಾ ವಿಶ್ವಸಂಸ್ಥೆಗೆ ತಲುಪಿಸಲಾದ ಹೇಳಿಕೆಯಲ್ಲಿ ತಿರಸ್ಕರಿಸಿದೆ.

ಗುರುವಾರ ಸಲ್ಲಿಸಲಾದ ಹೇಳಿಕೆಯಲ್ಲಿ, ದಕ್ಷಿಣ ಚೀನಾ ಸಮುದ್ರ, ಕೃತಕ ದ್ವೀಪಗಳ ನಿರ್ಮಾಣ ಸೇರಿದಂತೆ ಚೀನಾದ ಹಲವು ವಿವಾದಿತ ಹಕ್ಕು ಪ್ರತಿಪಾದನೆಗಳಿಗೆ ಕಾನೂನಿನ ಆಧಾರವಿಲ್ಲ ಎಂದು ಆಸ್ಟ್ರೇಲಿಯಾ ಹೇಳಿದೆ. 

ಅಮೆರಿಕದ ಸಚಿವ ಮೈಕ್ ಪೋಂಪಿಯೋ ದಕ್ಷಿಣ ಚೀನಾ ಮೇಲಿನ ಚೀನಾ ಹಕ್ಕನ್ನು ಕಾನೂನು ಬಾಹಿರ ಎಂದು ಘೋಷಿಸಿದ್ದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.  ಚೀನಾ-ಅಮೆರಿಕಾ ನಡುವೆ ಈಗಾಗಲೇ ಶೀತಲ ಸಮರ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಉಭಯ ರಾಷ್ಟ್ರಗಳ ನಡುವೆ ದೂತವಾಸ ಕಚೇರಿ ಸಂಬಂಧ ಸಂಘರ್ಷ ಏರ್ಪಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com