ಕೊರೋನಾ ವೈರಸ್: ಜಗತ್ತಿನಾದ್ಯಂತ 1.60 ಕೋಟಿಗೇರಿದ ಕೊರೊನಾ ಸೋಂಕಿತರ ಸಂಖ್ಯೆ, 6.4 ಲಕ್ಷ ಸಾವು

ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಜಗತ್ತಿನಾದ್ಯಂತ 1.60 ಕೋಟಿ ಗೇರಿಗದ್ಗು, ಕೋವಿಡ್-19ಗೆ ಬಲಿಯಾದವರ ಸಂಖ್ಯೆ 6.4 ಲಕ್ಷಕ್ಕೇರಿದೆ.
ದೆಹಲಿಯ ರೋಹಿತ್ ದತ್ತ ಕೋವಿಡ್-19 ಸಾಮಾಜಿಕ ಕಳಂಕ ನಿರ್ವಹಿಸಿದ ಪರಿ ನಿಜಕ್ಕೂ ಮಾದರಿ!
ದೆಹಲಿಯ ರೋಹಿತ್ ದತ್ತ ಕೋವಿಡ್-19 ಸಾಮಾಜಿಕ ಕಳಂಕ ನಿರ್ವಹಿಸಿದ ಪರಿ ನಿಜಕ್ಕೂ ಮಾದರಿ!

ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಜಗತ್ತಿನಾದ್ಯಂತ 1.60 ಕೋಟಿ ಗೇರಿಗದ್ಗು, ಕೋವಿಡ್-19ಗೆ ಬಲಿಯಾದವರ ಸಂಖ್ಯೆ 6.4 ಲಕ್ಷಕ್ಕೇರಿದೆ.

ಈ ಬಗ್ಗೆ ಜಾನ್ ಹಾಪ್ಕಿನ್ಸ‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಮಾಹಿತಿ ನೀಡಿದ್ದು, ಜಗತ್ತಿನಾದ್ಯಂತ 1,61,96,445 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 644,000 ಮಂದಿ ಮೃತಪಟ್ಟಿದ್ದಾರೆ. ಅಂತೆಯೇ ಈ ವರೆಗೂ 9.2 ಮಿಲಿಯನ್ ಸೋಂಕಿತರು  ಗುಣಮುಖರಾಗಿದ್ದಾರೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕವೊಂದರಲ್ಲೇ 41,76,416 ಸೋಂಕಿತರಿದ್ದು, ಈ ವರೆಗೆ 1,46,418 ಮಂದಿ ಸಾವಿಗೀಡಾಗಿದ್ದಾರೆ. 2ನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ 23,94,513 ಪ್ರಕರಣಗಳು ದಾಖಲಾಗಿವೆ. ಅಂತೆಯೇ  17,51,922 ಸೋಂಕಿತರು ಗುಣಮುಖರಾಗಿದ್ದಾರೆ. 86,449 ಸೋಂಕಿತರು ಮೃತಪಟ್ಟಿದ್ದಾರೆ. ಇನ್ನು ಭಾರತದಲ್ಲಿ 13,37,024, ರಷ್ಯಾದಲ್ಲಿ 8,05,332, ದಕ್ಷಿಣ ಆಫ್ರಿಕಾದಲ್ಲಿ 4,34,200, ಪೆರುವಿನಲ್ಲಿ 3,75,961, ಚಿಲಿಯಲ್ಲಿ 3,43,592, ಇಂಗ್ಲೆಂಡ್‌ನಲ್ಲಿ 3,00,270, ಸ್ಪೇನ್‌ನಲ್ಲಿ  2,72,421 ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com