ಮೊದಲ ಶಂಕಿತ ಕೊರೋನಾ ಕೇಸು: ಗಡಿ ನಗರ ಕೈಸೊಂಗ್ ನಲ್ಲಿ ಲಾಕ್ ಡೌನ್ ಹೇರಿದ ಉತ್ತರ ಕೊರಿಯಾ

ದೇಶದಲ್ಲಿ ಮೊದಲ ಶಂಕಿತ ಕೊರೋನಾ ಸೋಂಕಿನ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಸರ್ಕಾರ ಕೈಸೊಂಗ್ ಗಡಿ ನಗರದಲ್ಲಿ ಲಾಕ್ ಡೌನ್ ಜಾರಿ ಮಾಡಿದೆ.
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್(ಸಂಗ್ರಹ ಚಿತ್ರ)
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್(ಸಂಗ್ರಹ ಚಿತ್ರ)

ಸಿಯೋಲ್(ದಕ್ಷಿಣ ಕೊರಿಯಾ):ದೇಶದಲ್ಲಿ ಮೊದಲ ಶಂಕಿತ ಕೊರೋನಾ ಸೋಂಕಿನ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಸರ್ಕಾರ ಕೈಸೊಂಗ್ ಗಡಿ ನಗರದಲ್ಲಿ ಲಾಕ್ ಡೌನ್ ಜಾರಿ ಮಾಡಿದೆ.

ಇದೇ ಮೊದಲ ಬಾರಿಗೆ ಅಲ್ಲಿ ಶಂಕಿತ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಿನ್ನೆ ತುರ್ತು ಪಾಲಿಟ್ ಬ್ಯೂರೊ ಸಭೆ ಕರೆದು ಅತ್ಯಂತ ಗರಿಷ್ಠ ತುರ್ತು ವ್ಯವಸ್ಥಿತ ಲಾಕ್ ಡೌನ್ ಜಾರಿಗೆ ತಂದು ಮುನ್ನೆಚ್ಚರಿಕೆ ವಹಿಸಬೇಕೆಂದು ಕರೆ ನೀಡಿದ್ದಾರೆ ಎಂದು ಅಲ್ಲಿನ ಕೆಸಿಎನ್ ಎ ಸುದ್ದಿಸಂಸ್ಥೆ ತಿಳಿಸಿದೆ.

ಈ ಶಂಕಿತ ಕೊರೋನಾ ಸೋಂಕು ಖಚಿತವಾದರೆ ಉತ್ತರ ಕೊರಿಯಾದಲ್ಲಿ ಇದು ಮೊದಲ ಅಧಿಕೃತ ಕೊರೋನಾ ಕೇಸು ಆಗಿದ್ದು, ಇಲ್ಲಿ .ಯಾವುದೇ ರೀತಿಯ ಸೋಂಕು ಬಂದರೂ ಅದನ್ನು ಸೂಕ್ತವಾಗಿ ನಿಭಾಯಿಸುವಷ್ಟು ವೈದ್ಯಕೀಯ ಮೂಲಭೂತ ಸೌಕರ್ಯಗಳು ಇಲ್ಲದಾಗಿದೆ.

ಮೂರು ವರ್ಷಗಳ ಹಿಂದೆ ದಕ್ಷಿಣ ಕೊರಿಯಾಕ್ಕೆ ತೆರಳಿದ್ದ ತೆರಳಿದ್ದ ಒಬ್ಬ ಪಕ್ಷಾಂತರಗಾರ ಮೊನ್ನೆ ಜುಲೈ 19 ರಂದು ಅಕ್ರಮವಾಗಿ ಗಡಿ ದಾಟಿ ಉತ್ತರ ಕೊರಿಯಾಕ್ಕೆ ಬಂದಿದ್ದು ಆತನ ಮೂಲಕ ಸೋಂಕು ಹರಡಿರಬಹುದು ಎಂದು ಹೇಳಲಾಗುತ್ತಿದೆ. ಜಗತ್ತಿನಲ್ಲಿ ಸೋಂಕು ಕಾಣಿಸಿಕೊಂಡ ನಂತರ ಉತ್ತರ ಕೊರಿಯಾದಿಂದ ಯಾರು ಸಹ ಹೊರ ಹೋಗಿಲ್ಲ ಎಂದು ಹೇಳಲಾಗುತ್ತಿದೆ.

ನೆರೆಯ ಚೀನಾ ದೇಶದಲ್ಲಿ ಕೊರೋನಾ ವ್ಯಾಪಿಸುತ್ತಿದ್ದಂತೆ ಭದ್ರತೆ, ಆರೋಗ್ಯ ಹಿತದೃಷ್ಟಿಯಿಂದ ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರ ಉತ್ತರ ಕೊರಿಯಾ ತನ್ನ ಗಡಿಯನ್ನು ಮುಚ್ಚಿತ್ತು. ಹೊರಗಿನಿಂದ ಯಾರೂ ದೇಶ ಪ್ರವೇಶಿಸದಂತೆ ತಡೆದಿತ್ತು. ದಕ್ಷಿಣ ಕೊರಿಯಾದಲ್ಲಿ 40ರಿಂದ 60 ಕೊರೋನಾ ಸೋಂಕಿತರ ಸಂಖ್ಯೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com