ಕೋವಿಡ್ 19 ಮುಚ್ಚಿಡಲಾಗಿದೆ, ಸಾಕ್ಷ್ಯವೇ ಸಿಗದಂತೆ ವುಹಾನ್ ಮಾರ್ಕೆಟ್ ಸ್ವಚ್ಛ ಮಾಡಲಾಗಿತ್ತು: ಚೀನಾ ವೈದ್ಯ ಆರೋಪ!

ಚೀನಾದಲ್ಲಿ ಆರಂಭಿಕ ಕೊರೋನಾವೈರಸ್ ಪ್ರಕರಣಗಳನ್ನು ಚೀನಾದ ವೈದ್ಯರು ಪತ್ತೆ ಹಚ್ಚಲಾಗಿತ್ತು. ಆದರೆ ವುಹಾನ್‌ ನಲ್ಲಿ ಸ್ಫೋಟಗೊಂಡಿದ್ದ ಕೊರೋನಾ ಮಹಾಮಾರಿಯನ್ನು ಸ್ಥಳೀಯ ಅಧಿಕಾರಿಗಳು ಮುಚ್ಚಿಹಾಕಿದ್ದರು ಎಂದು ಆರೋಪಿಸಿದ್ದು ತನಿಖೆಗೆ ಹೋದಾಗ ಸಾಕ್ಷ್ಯಗಳು ಅದಾಗಲೇ ನಾಶವಾಗಿವೆ ಎಂದು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಚೀನಾದಲ್ಲಿ ಆರಂಭಿಕ ಕೊರೋನಾವೈರಸ್ ಪ್ರಕರಣಗಳನ್ನು ಚೀನಾದ ವೈದ್ಯರು ಪತ್ತೆ ಹಚ್ಚಲಾಗಿತ್ತು. ಆದರೆ ವುಹಾನ್‌ ನಲ್ಲಿ ಸ್ಫೋಟಗೊಂಡಿದ್ದ ಕೊರೋನಾ ಮಹಾಮಾರಿಯನ್ನು ಸ್ಥಳೀಯ ಅಧಿಕಾರಿಗಳು ಮುಚ್ಚಿಹಾಕಿದ್ದರು ಎಂದು ಆರೋಪಿಸಿದ್ದು ತನಿಖೆಗೆ ಹೋದಾಗ ಸಾಕ್ಷ್ಯಗಳು ಅದಾಗಲೇ ನಾಶವಾಗಿವೆ ಎಂದು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಬಿಬಿಸಿಯೊಂದಿಗೆ ಮಾತನಾಡಿದ ಹಾಂಗ್ ಕಾಂಗ್‌ನ ಮೈಕ್ರೋಬಯಾಲಜಿಸ್ಟ್, ವೈದ್ಯ ಮತ್ತು ಶಸ್ತ್ರಚಿಕಿತ್ಸಕ ಪ್ರೊಫೆಸರ್ ಕ್ವಾಕ್-ಯುಂಗ್ ಯುಯೆನ್, ಮಧ್ಯ ಚೀನಾದ ನಗರವಾದ ವುಹಾನ್‌ನಲ್ಲಿ ಕೋವಿಡ್ 19 ಏಕಾಏಕಿ ತನಿಖೆ ನಡೆಸಲು ಸಹಾಯ ಮಾಡಿದರು. ಆದರೆ ಈಗಾಗಲೇ ವುಹಾನ್ ವನ್ಯಜೀವಿ ಮಾರುಕಟ್ಟೆಯಲ್ಲಿನ ಭೌತಿಕ ಸಾಕ್ಷ್ಯಗಳು ನಾಶವಾಗಿವೆ ಎಂದು ಹೇಳಿದ್ದಾರೆ.

"ನಾವು ವುಹಾನ್ ವನ್ಯಜೀವಿ ಮಾರುಕಟ್ಟೆಗೆ ಹೋದಾಗ, ಮಾರುಕಟ್ಟೆಯು ಈಗಾಗಲೇ ಸ್ವಚ್ಛವಾಗಿರುವುದರಿಂದ ನೋಡಲು ಏನೂ ಇರಲಿಲ್ಲ. ಸೂಪರ್ ಮಾರ್ಕೆಟ್ ಅನ್ನು ತೆರವುಗೊಳಿಸಿದ್ದರಿಂದ ಯಾವುದೇ ಸಾಕ್ಷ್ಯಗಳು ಸಿಗಲಿಲ್ಲ ಎಂದು ಯುಯೆನ್ ಹೇಳಿದ್ದಾರೆ.

ಸ್ಥಳೀಯವಾಗಿ ವುಹಾನ್‌ನಲ್ಲಿ ಕೆಲವನ್ನು ಕವರ್-ಅಪ್ ಮಾಡುತ್ತಿದ್ದಾರೆ ಎಂದು ನನಗೆ ಅನುಮಾನವಿದೆ. ಮಾಹಿತಿಯನ್ನು ತಕ್ಷಣ ಪ್ರಸಾರ ಮಾಡಬೇಕಾಗಿರುವ ಸ್ಥಳೀಯ ಅಧಿಕಾರಿಗಳಿಗೆ ಸುಲಭವಾಗಿ ಮಾಡಲು ಅನುಮತಿಸಿಲ್ಲ ಎಂದು ಯುಯೆನ್ ವರದಿಯಲ್ಲಿ ತಿಳಿಸಿದ್ದಾರೆ.

ಕೊರೋನಾವೈರಸ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ವುಹಾನ್‌ನ ಹುವಾನಾನ್ ವನ್ಯಜೀವಿ ಮಾರುಕಟ್ಟೆಯಿಂದ ಹುಟ್ಟಿಕೊಂಡಿತು ಮತ್ತು ಜಾಗತಿಕವಾಗಿ 16 ದಶಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿ 6,48,000ಕ್ಕೂ ಹೆಚ್ಚು ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ ಮತ್ತು ವಿಶ್ವ ಆರ್ಥಿಕತೆಯನ್ನು ಸ್ಥಗಿತಗೊಳಿಸಿದೆ.

ಜಾನ್ಸ್ ಹಾಪ್ಕಿನ್ಸ್ ಅಂಕಿಅಂಶಗಳ ಪ್ರಕಾರ, ಚೀನಾದಲ್ಲಿ 86,570 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು ಇನ್ನು ಮಹಾಮಾರಿಗೆ 4,652 ಮಂದಿ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com