ಮಹಾಮಾರಿ ಕೋವಿಡ್ ಸೋಂಕು ಮುಕ್ತವಾಗಿಯೇ ಉಳಿದಿರುವ ಉತ್ತರ ಕೊರಿಯಾ

ಉತ್ತರಕೊರಿಯದಲ್ಲಿ ಯಾವುದೇ ಕೋವಿಡ್‌ ಪ್ರಕರಣಗಳು  ವರದಿಯಾಗಿಲ್ಲ ಎಂದು ಆಡಳಿತಾರೂಢ ಪಕ್ಷದ ಅಧಿಕೃತ ಪತ್ರಿಕೆಯಾದ ರೋಡೋಂಗ್‌ ಸಿನ್ಮುನ್‌  ವರದಿ ಮಾಡಿದೆ.
ಕಿಮ್ ಜಾಂಗ್ ಉನ್
ಕಿಮ್ ಜಾಂಗ್ ಉನ್

ಸಿಯೋಲ್‌: ಉತ್ತರಕೊರಿಯದಲ್ಲಿ ಯಾವುದೇ ಕೋವಿಡ್‌ ಪ್ರಕರಣಗಳು  ವರದಿಯಾಗಿಲ್ಲ ಎಂದು ಆಡಳಿತಾರೂಢ ಪಕ್ಷದ ಅಧಿಕೃತ ಪತ್ರಿಕೆಯಾದ ರೋಡೋಂಗ್‌ ಸಿನ್ಮುನ್‌  ವರದಿ ಮಾಡಿದೆ.

ಆದರೆ, ಇನ್ನು ಮುಂದೆಯೂ ಈ ಮಾರಣಾಂತಿಕ ಸೋಂಕು ತಡೆಯಲು ಸರ್ಕಾರ  ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ದೇಶದ ಕೊರೋನಾ-ವೈರಸ್ ಮುಕ್ತ ಸ್ಥಾನ  ಕಳೆದುಕೊಳ್ಳಬಹುದು ಎಂದಿದೆ.

ಜುಲೈನಲ್ಲಿ ದಕ್ಷಿಣ ಕೊರಿಯಾದಿಂದ ಆಗಮಿಸಿದ ಓರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿತ್ತು. ತಕ್ಷಣ ಸರ್ಕಾರ ಇಡೀ ನಗರವನ್ನು ಸೀಲ್‌ಡೌನ್‌  ಮಾಡಿ, ಸೋಂಕು ಹರಡದಂತೆ ಕ್ರಮ ಕೈಗೊಂಡಿತ್ತು. ಆದರೆ, ನಂತರ ಆ ವ್ಯಕ್ತಿಯಲ್ಲಿ ಸೋಂಕು  ಇಲ್ಲ ಎಂದು ತಿಳಿದುಬಂದಿತ್ತು. ಆ ವ್ಯಕ್ತಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಿ, ಆತನ ಸಂಪರ್ಕಕ್ಕೆ ಬಂದವರ ತಪಾಸಣೆ ನಡೆಸಲಾಗಿತ್ತು. 

ದಕ್ಷಿಣ ಕೊರಿಯಾ ಮತ್ತು ಟರ್ಕ್‌ಮೆನಿಸ್ತಾನ್‌ ಮತ್ತು ಕೆಲ ದ್ವೀಪ ರಾಷ್ಟ್ರಗಳು ಸೇರಿದಂತೆ ಕೆಲ ದೇಶಗಳು ಕೂಡ ಇಲ್ಲಿಯವರೆಗೆ ಯಾವುದೇ ಕೋವಿಡ್‌ ಪ್ರಕರಣಗಳನ್ನು ವರದಿ ಮಾಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com