ರಾಮ ಮಂದಿರ ಭೂಮಿ ಪೂಜೆ ಸಂಭ್ರಮಾಚರಣೆ: ಆ. 5 ರಂದು ಟೈಮ್ಸ್ ಸ್ಕ್ವೇರ್ ಪರದೆಯಲ್ಲಿ ಪ್ರಭು ರಾಮನ 3ಡಿ ಚಿತ್ರ
ಆ.05 ರಂದು ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣತಯಾರಿ ನಡೆಯುತ್ತಿದ್ದಂತೆಯೇ ಆ ದಿನದ ನೆನಪಿಗಾಗಿ ಸಂಭ್ರಮಾಚರಣೆಗೂ ದೇಶ-ವಿದೇಶಗಳಲ್ಲಿ ಸಿದ್ಧತೆ ನಡೆದಿದೆ.
Published: 30th July 2020 11:53 PM | Last Updated: 30th July 2020 11:53 PM | A+A A-

ರಾಮ ಮಂದಿರ ಭೂಮಿ ಪೂಜೆ ಸಂಭ್ರಮಾಚರಣೆ: ಆ. 5 ರಂದು ಟೈಮ್ಸ್ ಸ್ಕ್ವೇರ್ ಪರದೆಯಲ್ಲಿ ಪ್ರಭು ರಾಮನ 3ಡಿ ಚಿತ್ರ
ನ್ಯೂಯಾರ್ಕ್ ಆ.05 ರಂದು ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣತಯಾರಿ ನಡೆಯುತ್ತಿದ್ದಂತೆಯೇ ಆ ದಿನದ ನೆನಪಿಗಾಗಿ ಸಂಭ್ರಮಾಚರಣೆಗೂ ದೇಶ-ವಿದೇಶಗಳಲ್ಲಿ ಸಿದ್ಧತೆ ನಡೆದಿದೆ.
ನ್ಯೂಯಾರ್ಕ್ ನಗರದಲ್ಲಿರುವ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್ ನ ಪರದೆಯ ಮೇಲೆ ಆ.05 ರಂದು ಭಗವಾನ್ ಶ್ರೀರಾಮನ 3ಡಿ ಚಿತ್ರಗಳನ್ನು ಮೂಡಿಸುವ ಮೂಲಕ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಭೂಮಿಪೂಜೆಯ ಕಾರ್ಯಕ್ರಮವನ್ನು ಸಂಭ್ರಮಿಸಲಾಗುತ್ತದೆ.
ಅಮೆರಿಕನ್ ಇಂಡಿಯಾ ಪಬ್ಲಿಕ್ ವ್ಯವಹಾರ ಸಮಿತಿಯ ಮುಖ್ಯಸ್ಥ ಜಗದೀಶ್ ಸೆವ್ಹಾನಿ ಈ ಬಗ್ಗೆ ಮಾತನಾಡಿದ್ದು, ಟೈಮ್ಸ್ ಸ್ಕ್ವೇರ್ ನಲ್ಲಿ ಆ.05 ರಂದು ಭಗವಾನ್ ರಾಮನ ಭಾವ ಚಿತ್ರ ಪ್ರದರ್ಶಿಸುವುದಕ್ಕೆ ಎಲ್ಲಾ ಸಿದ್ಧತೆಗಳೂ ನಡೆದಿವೆ ಎಂದು ತಿಳಿಸಿದ್ದಾರೆ.
ಇನ್ನೂ ಹಲವು ಕಾರ್ಯಕ್ರಮಗಳಿಗಾಗಿ ಟೈಮ್ಸ್ ಸ್ಕ್ವೇರ್ ನ ಈ ಪರದೆಯನ್ನು ಕಾಯ್ದಿರಿಸಲಾಗಿದೆ. ಆ.05 ರಂದು ಬೆಳಿಗ್ಗೆ 8 ರಿಂದ 10 ವರೆಗೆ ಆಂಗ್ಲ, ಹಿಂದಿ ಭಾಷೆಗಳಲ್ಲಿರುವ ಜೈ ಶ್ರೀರಾಮ್ ಎಂಬ ಪದದ ಚಿತ್ರಗಳು ಹಾಗೂ ರಾಮನ 3ಡಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ, ಶಿಲಾನ್ಯಾಸ ನೆರವೇರಿಸಲಿರುವ ಫೋಟೋಗಳನ್ನೂ ಸಹ ಹಲವಾರು ಬಿಲ್ ಬೋರ್ಡ್ ಗಳಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಿದ್ದಾರೆ.