ಕೋವಿಡ್ ಸೋಂಕಿಗೆ ತುತ್ತಾದ ಜಗತ್ತಿನ ಮೊದಲ ನಾಯಿ ಮೃತ್ಯು

 

ಅಮೆರಿಕಾದಲ್ಲಿನ ಕೋವಿಡ್ 19 ಸೋಂಕು ದೃಢ ಪಟ್ಟಿದ್ದ ಜರ್ಮನ್ ಷಫರ್ಡ್ ನಾಯಿಯೊಂದು ನ್ಯೂಯಾರ್ಕ್ ನಲ್ಲಿ ಮೃತಪಟ್ಟಿದೆ.

Published: 31st July 2020 09:57 AM  |   Last Updated: 31st July 2020 01:16 PM   |  A+A-


Posted By : Raghavendra Adiga
Source : Associated Press

ನ್ಯೂಯಾರ್ಕ್: ಅಮೆರಿಕಾದಲ್ಲಿನ ಕೋವಿಡ್ 19 ಸೋಂಕು ದೃಢ ಪಟ್ಟಿದ್ದ ಜರ್ಮನ್  ಷಫರ್ಡ್ ನಾಯಿಯೊಂದು ನ್ಯೂಯಾರ್ಕ್ ನಲ್ಲಿ ಮೃತಪಟ್ಟಿದೆ.

ರಾಬರ್ಟ್ ಹಾಗೂ ಅಲಿಸನ್  ಹಲವಾರು ವಾರಗಳಿಂದ ಕೊರೋನಾವೈರಸ್ ‌ನಿಂದ ಬಳಲುತ್ತಿದ್ದರು. ಈ ನಡುವೆ  ಏಪ್ರಿಲ್ ಮಧ್ಯದಲ್ಲಿ ತಮ್ಮ 7 ವರ್ಷದ ನಾಯಿ ಜರ್ಮನ್ ಷೆಫರ್ಡ್ ಗೆ ಸಹ ಉಸಿರಾಟದ ತೊಂದರೆಗಳು ಕಾಣಿಸಿದ್ದವು  ಸ್ಟೇಟನ್ ದ್ವೀಪದ ರಾಬರ್ಟ್ ಮತ್ತು ಆಲಿಸನ್ ಮಹೋನಿ ನ್ಯಾಷನಲ್ ಜಿಯಾಗ್ರಫಿಕ್‌ಗೆ ತಿಳಿಸಿದರು. ಪಶುವೈದ್ಯರು ಮೇ ನಲ್ಲಿ ನಾಯಿಯನ್ನು  ಪರೀಕ್ಷಿಸಿದರು ಮತ್ತು ಕೋವಿಡ್ ಸೋಂಕಿರುವುದು ಸಾಬೀತಾಗಿದೆ.

ಯು.ಎಸ್. ಕೃಷಿ ಇಲಾಖೆ ಜೂನ್‌ನಲ್ಲಿ ನ್ಯೂಯಾರ್ಕ್ ರಾಜ್ಯದ ಜರ್ಮನ್ ಷಫರ್ಡ್ ಕೋವಿಡ್ 19 ಸೋಂಕಿಗೆ ಒಳಪಟ್ಟ ದೇಶದ ಮೊದಲ ನಾಯಿ ಎಂದು ಘೋಷಿಸಿದೆ, ಆದರೆ ಮಾಲೀಕರ ಹೆಸರು ಬಹಿರಂಗಪಡಿಸಿಲ್ಲ.

ಏಪ್ರಿಲ್ ನಲ್ಲಿ  ಉಸಿರಾಟದ ತೊಂದರೆ ಮತ್ತು ಮೂಗಿನಲ್ಲಿ ಲೋಳೆಯ ಸಮಸ್ಯೆನಂತರ ನಾಯಿ ಆರೋಗ್ಯ ಕುಸಿದಿತ್ತು. ಹೆಪ್ಪುಗಟ್ಟಿದ ರಕ್ತವನ್ನು ವಾಂತಿ ಮಾಡಲು ಪ್ರಾರಂಭಿಸಿದ ನಂತರ ಜುಲೈ 11 ರಂದು ನಾಯಿಗೆ ದಯಾಮರಣ ದಯಪಾಲಿಸಲಾಗಿತ್ತು ಎಂದು ನ್ಯಾಷನಲ್ ಜಿಯಾಗ್ರಫಿಕ್ಸ್ ಗೆ ಮಾಹಿತಿನೀಡಲಾಗಿದೆ.

ಕೊರೋನಾವೈರಸ್ ನಿಂದ ನಾಯಿ ಸಾವನ್ನಪ್ಪಿದೆ ಎನ್ನುವುದು ಸಾಬೀತಾಗಿಲ್ಲ, ರಕ್ತ ಪರೀಕ್ಷೆಗಳಲ್ಲಿ ನಾಯಿಯಲ್ಲಿ ಕ್ಯಾನ್ಸರ್ ಲಿಂಫೋಮಾ ವಿರುದ್ಧ ರೋಗನಿರೋಧಕ ವ್ಯವಸ್ಥೆ ಕಂಡುಬಂದಿದೆ ಎಂದು ಪಶುವೈದ್ಯರು ಕುಟುಂಬಕ್ಕೆ ತಿಳಿಸಿದ್ದಾರೆ.

ನ್ಯೂಯಾರ್ಕ್ ನಗರದ ಆರೋಗ್ಯ ಇಲಾಖೆಯ ವಕ್ತಾರರು, ನಾಯಿಯ ಮೃತದೇಹವನ್ನು ನೆಕ್ರೋಪ್ಸಿ ಪರೀಕ್ಷೆಗಾಗಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಆದರೆ ಪಶುವೈದ್ಯರೊಂದಿಗೆ ಮಾತನಾಡಿದ್ದ ವೇಳೆ ನಾಯಿಯ ಮೃತದೇಹವನ್ನು ಈಗಾಗಲೇ ದಹನ ಮಾಡಲಾಗಿದೆ ಎಂದು ತಿಳಿದುಬಂದಿತು.

ಯುನೈಟೆಡ್ ಸ್ಟೇಟ್ಸ್ ನಲ್ಲಿ  ಪ್ರಾಣಿಗಳಲ್ಲಿ ಕೊರೋನಾವೈರಸ್ ದೃಢಪಟ್ತ ಪ್ರಕರಣಗಳ ಪೈಕಿ  12 ನಾಯಿಗಳು, 10 ಬೆಕ್ಕುಗಳು, ಹುಲಿ ಮತ್ತು ಸಿಂಹಗಳೂ ಸೇರಿವೆ.  ಕೊರೋನಾ ಹರಡುವಲ್ಲಿ ಪ್ರಾಣಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು  ಸಂಶೋಧನೆಗಳು ಹೇಳಿದ್ದರೂ ಕೆಲವು ಸಂದರ್ಭಗಳಲ್ಲಿ ವೈರಸ್ ಜನರಿಂದ ಪ್ರಾಣಿಗಳಿಗೆ ಹರಡಬಹುದು ಎಂದು ಹೇಳಲಾಗಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp