ಭಾರತ ವಿರುದ್ಧ ನೇಪಾಳ ಪ್ರಧಾನಿ ಓಲಿ ಕಿರಿಕಿರಿ, ರಾಜತಾಂತ್ರಿಕವಲ್ಲದ ಹೇಳಿಕೆ- ಸಿಪಿಎನ್ ಮುಖಂಡ

ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಓಲಿ ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಗಿರುವಂತೆಯೇ ಇತ್ತೀಚಿಗೆ ಭಾರತವಿರುದ್ಧ ರಾಜತಾಂತ್ರಿಕವಲ್ಲದ ಕಿರಿಕಿರಿ ಉಂಟುಮಾಡುವ ಹೇಳಿಕೆ ನೀಡುವ ಮೂಲಕ ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಓಲಿ ಮೂರು ತಪ್ಪುಗಳನ್ನು ಮಾಡಿದ್ದಾರೆ ಎಂದು ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ
ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ

ಕಠ್ಮಂಡು: ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಓಲಿ ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಗಿರುವಂತೆಯೇ ಇತ್ತೀಚಿಗೆ ಭಾರತ
ವಿರುದ್ಧ ರಾಜತಾಂತ್ರಿಕವಲ್ಲದ ಕಿರಿಕಿರಿ ಉಂಟುಮಾಡುವ ಹೇಳಿಕೆ ನೀಡುವ ಮೂಲಕ ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಓಲಿ ಮೂರು ತಪ್ಪುಗಳನ್ನು ಮಾಡಿದ್ದಾರೆ ಎಂದು ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ನನ್ನನ್ನು ಪದಚ್ಯುತಿಗೊಳಿಸಲು ಭಾರತ ಷಡ್ಯಂತ್ರ ಹೂಡಿದೆ ಎಂದು ಕಳೆದ ತಿಂಗಳು ಓಲಿ ಹೇಳಿಕೆ ನೀಡಿದ್ದರು. ನೇಪಾಳ ಸಂಸತ್ತಿನ ಕೆಳಮನೆ ಭಾರತದ ಭೂಪ್ರದೇಶವನ್ನು ತನ್ನದೇ ಎಂದು ತೋರಿಸುವ ದೇಶದ ರಾಜಕೀಯ ನಕ್ಷೆಯನ್ನು ಪುನಃ ರಚಿಸುವ ಮಸೂದೆಯನ್ನು ತೆರವುಗೊಳಿಸಿದ ಒಂದು ವಾರದ ನಂತರ ಓಲಿ ಆ ರೀತಿಯ ಹೇಳಿಕೆ ನೀಡಿದ್ದರು.

ನಿಜವಾದ ಅಯೋಧ್ಯೆ ಭಾರತದಲ್ಲಿ ಇಲ್ಲ, ನೇಪಾಳದಲ್ಲಿದೆ. ದಕ್ಷಿಣ ನೇಪಾಳದ ಥೋರಿ ರಾಮನ ಜನ್ಮ ಸ್ಥಳ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ಓಲಿ ಇದೇ ತಿಂಗಳಲ್ಲಿ ನೀಡಿದ್ದರು.

ಓಲಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಮ್ಯೂನಿಸ್ಟ್ ಪಕ್ಷದ ವಕ್ತಾರರು, ಪ್ರಧಾನ ಮಂತ್ರಿಯ ಹೇಳಿಕೆ ರಾಜತಾಂತ್ರಿಕವಲ್ಲದ
ಹೇಳಿಕೆ ಎಂದಿದ್ದಾರೆ.

ಮಾತುಕತೆ ಮೂಲಕ ಗಡಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಸಂದರ್ಭದಲ್ಲಿ ಪ್ರಧಾನಿ ಕೆಪಿ ಶರ್ಮಾ ಓಲಿ ಭಾರತ ವಿರುದ್ಧ ಕಿರಿಕಿರಿ ಉಂಟುಮಾಡುವ ಹೇಳಿಕೆ ನೀಡುವ  ಮೂಲಕ ಪ್ರಮಾದವೆಸಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com