ಉಲ್ಟಾ ಹೊಡೆದ ಟ್ರಂಪ್: ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಮುಂದೂಡಲು ಬಯಸಲ್ಲ!

ಅಧ್ಯಕ್ಷೀಯ ಚುನಾವಣೆಯಲ್ಲಿ ನಕಲಿ ಮತದಾನ ನಡೆಯುವ ಸಾಧ್ಯತೆಗಳಿವೆ ಎಂದೇಳಿ ನವೆಂಬರ್ ನಲ್ಲಿ ನಡೆಯಲಿರುವ ಚುನಾವಣೆಯನ್ನು ಮುಂದೂಡುವ ಕುರಿತು ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ಅವರು ಇದೀಗ ಯೂ ಟರ್ನ್ ಹೊಡೆದಿದ್ದಾರೆ. 
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಯಲ್ಲಿ ನಕಲಿ ಮತದಾನ ನಡೆಯುವ ಸಾಧ್ಯತೆಗಳಿವೆ ಎಂದೇಳಿ ನವೆಂಬರ್ ನಲ್ಲಿ ನಡೆಯಲಿರುವ ಚುನಾವಣೆಯನ್ನು ಮುಂದೂಡುವ ಕುರಿತು ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ಅವರು ಇದೀಗ ಯೂ ಟರ್ನ್ ಹೊಡೆದಿದ್ದಾರೆ. 

ಮೇಲ್ ಇನ್ ಮತದಾನದೊಂದಿಗೆ 2020ರ ಚುನಾವಣೆಯು ಇತಿಹಾಸದಲ್ಲೇ ಅತ್ಯಂತ ಕೆಟ್ಟ ಮತ್ತು ಮೋಸದ ಚುನಾವಣೆಯಾಗಿ ಉಳಿಯಲಿದೆ. ಇದು ಅಮೆರಿಕಾಕ್ಕೆ ದೊಡ್ಡ ಮುಜುಗರವನ್ನು ಉಂಟು ಮಾಡುತ್ತದೆ. ಮಹಾಮಾರಿ ಕೊರೋನಾ ಮುಕ್ತವಾಗಿ ಮತದಾರರು ಸುರಕ್ಷಿತವಾಗಿ ಮತ ಚಲಾಯಿಸುವವರೆಗೆ ಚುನಾವಣೆಯನ್ನು ಮುಂದಕ್ಕೆ ಹಾಕಬೇಕು? ಎಂದು ಟ್ರಂಪ್ ಟ್ವೀಟ್ ಮಾಡಿ ಪ್ರಶ್ನಿಸಿದ್ದರು.

ಎರಡನೇ ಅವಧಿಗೆ ಸ್ಪರ್ಧಿಸುತ್ತಿರುವ ಟ್ರಂಪ್, ಡೆಮಾಕ್ರಟಿಕ್ ಅಭ್ಯರ್ಥಿ ಮತ್ತು ಮಾಜಿ ಉಪಾಧ್ಯಕ್ಷ ಜೋ ಬಿಡನ್ ಅವರಿಂದ ಭರ್ಜರಿ ಸವಾಲನ್ನು ಎದುರಿಸುತ್ತಿದ್ದಾರೆ, ಪ್ರಮುಖ ರಾಷ್ಟ್ರೀಯ ಅಭಿಪ್ರಾಯ ಸಂಗ್ರಹಗಳ ಪ್ರಕಾರ, ಟ್ರಂಪ್ ಗಿಂತ ಜೋ ಬಿಡೆನ್ ದ್ವಿಗುಣ ಮುನ್ನಡೆ ಹೊಂದಿದ್ದಾರೆ.

ಟ್ರಂಪ್ ನೀಡಿದ್ದ ಈ ಸಲಹೆಯನ್ನು ತಕ್ಷಣವೇ ಡೆಮಾಕ್ರಟಿಕ್ ಪಕ್ಷದ ನಾಯಕರು ಟೀಕಿಸಿದರು. ಅಲ್ಲದೆ ತಮ್ಮದೇ ರಿಪಬ್ಲಿಕನ್ ಪಕ್ಷದಿಂದ ಸೂಕ್ತ ಬೆಂಬಲ ಟ್ರಂಪ್ ಗೆ ಸಿಗಲಿಲ್ಲ. ಹೀಗಾಗಿ ತಮ್ಮ ಹೇಳಿಕೆಯಿಂದ ಟ್ರಂಪ್ ಹಿಂದೆ ಸರಿದಿದ್ದಾರೆ. 

ಇದೇ ನವೆಂಬರ್ 3ರಂದು ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಿಗದಿಯಂತೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com