ಕಪ್ಪು ವರ್ಣೀಯನ ಹತ್ಯೆ: ವೈಟ್'ಹೌಸ್ ಎದುರು ಭುಗಿಲೆದ್ದ ಪ್ರತಿಭಟನೆ; ಗುಪ್ತ ಬಂಕರ್ ನಲ್ಲಿ ಟ್ರಂಪ್'ರನ್ನು ಮುಚ್ಚಿಟ್ಟ ಸಿಬ್ಬಂದಿಗಳು!

ಅಮೆರಿಕಾದಲ್ಲಿ ಕಪ್ಪು ವರ್ಣೀಯನ ಜಾರ್ಜ್ ಫ್ಲೋಯ್ಡ್ ಹತ್ಯೆ ಪ್ರಕರಣ ಅರಾಜಕತೆಯನ್ನೇ ಸೃಷ್ಟಿ ಮಾಡಿದೆ. ಫ್ಲೋಯ್ಡ್ ಸಾವು ಖಂಡಿಸಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವಲ್ಲೇ ಈ ಪ್ರತಿಭಟನೆ ಶ್ವೇತಭವನವನ್ನೂ ತಲುಪಿದ್ದು...
ಅಮೆರಿಕಾದಲ್ಲಿ ಭುಗಿಲೆದ್ದ ಪ್ರತಿಭಟನೆ
ಅಮೆರಿಕಾದಲ್ಲಿ ಭುಗಿಲೆದ್ದ ಪ್ರತಿಭಟನೆ

ವಾಷಿಂಗ್ಟನ್: ಅಮೆರಿಕಾದಲ್ಲಿ ಕಪ್ಪು ವರ್ಣೀಯನ ಜಾರ್ಜ್ ಫ್ಲೋಯ್ಡ್ ಹತ್ಯೆ ಪ್ರಕರಣ ಅರಾಜಕತೆಯನ್ನೇ ಸೃಷ್ಟಿ ಮಾಡಿದೆ. ಫ್ಲೋಯ್ಡ್ ಸಾವು ಖಂಡಿಸಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವಲ್ಲೇ ಈ ಪ್ರತಿಭಟನೆ ಶ್ವೇತಭವನವನ್ನೂ ತಲುಪಿದ್ದು, ಈ ವೇಳೆ ಶ್ವೇತಭವನದ ಮುಂದೆ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಭಾರೀ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿದ ಪ್ರತಿಭಟನಾಕಾರರು ಟ್ರಂಪ್ ವಿರುದ್ಧ ಘೋಷಣೆ ಕೂಗಲು ಆರಂಭಿಸಿದ್ದರು. 

ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶ್ವೇತಭವನದ ಸಿಬ್ಬಂದಿಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೂಗತ ಬಂಕರ್ ನಲ್ಲಿ ಕೆಲಕಾಲ ಸುರಕ್ಷಿತವಾಗಿ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ. 

ಸುಮಾರು 1 ಗಂಟೆಗೂ ಹೆಚ್ಚು ಕಾಲ ಟ್ರಂಪ್ ಅವರು, ಈ ಗುಪ್ತ ಬಂಕರ್ ನಲ್ಲಿಯೇ ಉಳಿದಿದ್ದರು ಎಂದು ತಿಳಿದುಬಂದಿದೆ. ವಿಪತ್ತು ಸಂದರ್ಭದಲ್ಲಿ ಬಳಕೆ ಮಾಡುವ ಸಲುವಾಗಿಯೇ ಈ ಬಂಕರ್ ನಿರ್ಮಾಣ ಮಾಡಲಾಗಿತ್ತು. ಇದರಂತೆ ಟ್ರಂಪ್ ಅವರನ್ನು ಕೆಲಕಾಲ ಬಂಕರ್ ನಲ್ಲಿ ಇಡಲಾಗಿತ್ತು ಎಂದು ಶ್ವೇತಭವನದ ಸಿಬ್ಬಂದಿಗಳು ಸ್ಪಷ್ಟಪಡಿಸಿದ್ದಾರೆ. 

ಶ್ವೇತಭವನದ ಮುಂದೆ ದೊಡ್ಡ ಮಟ್ಟದಲ್ಲಿಯೇ ಪ್ರತಿಭಟನೆ ಆರಂಭಗೊಂಡಿತ್ತು. ಹೀಗಾಗಿ ಅಧ್ಯಕ್ಷರ ಸುರಕ್ಷತಾ ದೃಷ್ಟಿಯಿಂದ ಗುಪ್ತಬಂಕರ್ ನಲ್ಲಿ ಮುಚ್ಚಿಡಲಾಗಿತ್ತು ಎಂದು ತಿಳಿಸಿದೆ. 

ಫ್ಲೋಯ್ಡ್ ಹತ್ಯೆ ಪ್ರಕರಮ ಅಮೆರಿಕಾದಲ್ಲಿ ದೊಡ್ಡ ಮಟ್ಟದ ಕಿಚ್ಚನ್ನೇ ಹೊತ್ತಿಸಿದೆ. ಅಮೆರಿಕಾದ ಈ ಜನಾಂಗೀಯ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪ್ರತಿಭಟನೆಯ ಕಿಚ್ಚು ಹೊತ್ತುಕೊಂಡಿದೆ. ಬಹುತೇಕ ಕಡೆಗಳಲ್ಲಿ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದು, ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕೆಲವೆಡೆ ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗ ಕೂಡ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com