ಗಡಿ ಸಂಘರ್ಷ: ಲಡಾಕ್ ನಲ್ಲಿ ಇಂದು ಭಾರತ-ಚೀನಾ ಸೇನೆಯ ಉನ್ನತ ಹೈಕಮಾಂಡರ್ ಮಟ್ಟದ ಮಾತುಕತೆ

ಲಡಾಕ್ ಗಡಿ ಭಾಗದಲ್ಲಿ ನಿರ್ಮಾಣಗೊಂಡಿರುವ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸುವ ಕ್ರಮವಾಗಿ ಮಂಗಳವಾರ ಭಾರತ ಮತ್ತು ಚೀನಾ ಸೈನ ಉನ್ನತ ಮಟ್ಟದ ಮಾತುಕತೆ ನಡೆಸಲಿದೆ ಎಂದು ತಿಳಿದುಬಂದಿದೆ.
ಲಡಾಕ್ ಗಡಿಯಲ್ಲಿ ಸೈನಿಕರು ಕಾವಲು ಕಾಯುತ್ತಿರುವುದು
ಲಡಾಕ್ ಗಡಿಯಲ್ಲಿ ಸೈನಿಕರು ಕಾವಲು ಕಾಯುತ್ತಿರುವುದು

ನವದೆಹಲಿ: ಲಡಾಕ್ ಗಡಿ ಭಾಗದಲ್ಲಿ ನಿರ್ಮಾಣಗೊಂಡಿರುವ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸುವ ಕ್ರಮವಾಗಿ ಮಂಗಳವಾರ ಭಾರತ ಮತ್ತು ಚೀನಾ ಸೈನ ಉನ್ನತ ಹೈಕಮಾಂಡರ್ ಮಟ್ಟದ ಮಾತುಕತೆ ನಡೆಸಲಿದೆ ಎಂದು ತಿಳಿದುಬಂದಿದೆ.

ಎರಡೂ ಮಿಲಿಟರಿಗಳ ಮಧ್ಯೆ ಇಂದು ಉನ್ನತ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ ಎಂದು ನಿರ್ದಿಷ್ಟ ಮೂಲದಿಂದ ತಿಳಿದುಬಂದಿದೆ. ಎರಡೂ ದೇಶಗಳ ಮೇಜರ್ ಜನರಲ್ ರ್ಯಾಂಕ್ ಮಟ್ಟದ ಅಧಿಕಾರಿಗಳ ಮಧ್ಯೆ ನಡೆಯುತ್ತಿರುವ ಮೂರನೇ ಹೈಕಮಾಂಡರ್ ಮಟ್ಟದ ಮಾತುಕತೆ ಇದಾಗಿದೆ.

ಎರಡೂ ದೇಶಗಳ ಕಮಾಂಡರ್ ಅಧಿಕಾರಿಗಳ ಮಧ್ಯೆ ಮೂರು ಹಂತಗಳಲ್ಲಿ ಸಭೆ ನಡೆಯುತ್ತವೆ, ಇದರಲ್ಲಿ ಸ್ಥಳೀಯ ಕಮಾಂಡರ್ ಅಥವಾ ಕರ್ನಲ್ ಮಟ್ಟ, ಸ್ಟೇಷನ್ ಕಮಾಂಡರ್ (ನಿಯೋಗ ಮಟ್ಟ) ಅಥವಾ ಬ್ರಿಗೇಡಿಯರ್ ಮಟ್ಟ ಮತ್ತು ಅತ್ಯುನ್ನತವಾದದ್ದು ಎಚ್‌ಎಲ್‌ಸಿಎಂ ಎಂದು ಕರೆಯಲ್ಪಡುವ ಪ್ರಮುಖ ಸಾಮಾನ್ಯ ಮಟ್ಟವಾಗಿದೆ. ಇವುಗಳು ತುರ್ತು ಸಭೆಗಳಾಗಿದ್ದು, ತೀರಾ ಅಗತ್ಯವಿರುವ ಸಂದರ್ಭಗಳಲ್ಲಿ ಚರ್ಚೆ ನಡೆಸುವ ಸಭೆಗಳಾಗಿರುತ್ತದೆ. ಉಳಿದ ದಿನಗಳಲ್ಲಾದರೆ ಪ್ರಮುಖ ದಿನಗಳಲ್ಲಿ ಮಾತ್ರ ನಿಗದಿತ ಸಭೆಗಳು ನಡೆಯುತ್ತವೆ.

ನಮ್ಮ ಕಡೆಯ ಅಭಿಪ್ರಾಯಗಳನ್ನು ಹೇಳಲು ಉತ್ತಮ ಅವಕಾಶ ಒದಗಿಬಂದಿದೆ. ಮೊದಲ ಸಭೆಗಳಲ್ಲಿ ಎರಡೂ ಕಡೆಯವರು ತಮ್ಮ ಅಭಿಪ್ರಾಯಗಳನ್ನು ಮಾತ್ರ ಮಂಡಿಸಿದರು. ಎರಡನೇ ಸಭೆಯಲ್ಲಿ ಕೆಲವು ಅಂಶಗಳ ಮೇಲೆ ಒಪ್ಪಂದವಾಗಿತ್ತು. ಆದರೆ ಈ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಎರಡನೇ ಎಚ್‌ಸಿಎಲ್‌ಎಂ ಸಭೆಯ ನಂತರವೇ ಲಡಾಕ್ ಗಡಿ ಭಾಗದಿಂದ ಭಾರೀ ವಾಹನಗಳನ್ನು ಹಿಂದಕ್ಕೆ ಸರಿಸಲಾಯಿತು ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ಲಡಾಕ್ ನಲ್ಲಿ ಮೇ 5-6ರ ಮಧ್ಯರಾತ್ರಿ ಸೈನ್ಯವನ್ನು ಚೀನಾ ನಿಯೋಜಿಸಿತು. ಎರಡು ದೇಶಗಳ ಸೈನಿಕರು ಪಿಂಗೊಂಗ್ ತ್ಸೋ ಸರೋವರದ ಉತ್ತರ ಪಾರ್ಶ್ವದ ಮೇಲೆ ಫಿಂಗರ್ ಫೈವ್ ಎಂಬ ಸ್ಥಳದಲ್ಲಿ ಪರಸ್ಪರ ಘರ್ಷಣೆ ನಡೆಸಿದರು. ಘರ್ಷಣೆಯಲ್ಲಿ ಎರಡೂ ದೇಶಗಳ ಹೆಚ್ಚಿನ ಸಂಖ್ಯೆಯ ಸೈನಿಕರು ಗಾಯಗೊಂಡಿದ್ದಾರೆ. ಅಲ್ಲಿಂದ ಲಡಾಕ್ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com