ಗಡಿಯಲ್ಲಿ ಚೀನಾ ಮೊಂಡಾಟ: ಪಾಕ್ ಜೊತೆ ಸೇರಿ ಪಿಒಕೆಯಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣ!

ಪೂರ್ವ ಲಡಾಖ್ ನಲ್ಲಿ ಸೇನೆಯನ್ನು ಜಮೆ ಮಾಡುವ ಮೂಲಕ ಭಾರತಕ್ಕೆ ಉಪಟಳ ನೀಡುತ್ತಿರುವ ಚೀನಾ ಇದೀಗ ಪಾಕಿಸ್ತಾನ ಜೊತೆ ಸೇರಿ ಮೊಂಡಾಟ ಪ್ರದರ್ಶಿಸುತ್ತಿದೆ.

Published: 03rd June 2020 12:44 AM  |   Last Updated: 03rd June 2020 12:12 PM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : PTI

ಇಸ್ಲಾಮಾಬಾದ್: ಪೂರ್ವ ಲಡಾಖ್ ನಲ್ಲಿ ಸೇನೆಯನ್ನು ಜಮೆ ಮಾಡುವ ಮೂಲಕ ಭಾರತಕ್ಕೆ ಉಪಟಳ ನೀಡುತ್ತಿರುವ ಚೀನಾ ಇದೀಗ ಪಾಕಿಸ್ತಾನ ಜೊತೆ ಸೇರಿ ಮೊಂಡಾಟ ಪ್ರದರ್ಶಿಸುತ್ತಿದೆ. 

ಭಾರತದ ಪ್ರಬಲ ವಿರೋಧದ ನಡುವೆಯೂ ಚೀನಾ-ಪಾಕ್ ಕಾರಿಡಾರ್(ಸಿಪಿಇಸಿ) ಯೋಜನೆಯಡಿಯಲ್ಲಿ ಚೀನಾ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 1,124 ಮೆಗಾವ್ಯಾಟ್ ಸಾಮರ್ಥ್ಯದ ಜಲ ವಿದ್ಯುತ್ ಸ್ಥಾವರ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. 

ಪಿಒಕೆಯ ಕೊಹಲಾ ಬಳಿ ಝೇಲೂಮ್ ನದಿಗೆ ಅಡ್ಡಲಾಗಿ ಈ ಜಲವಿದ್ಯುತ್ ಸ್ಥಾವರ ನಿರ್ಮಾಣಗೊಳ್ಳಲಿದೆ. ಇದಕ್ಕೆ ಚೀನಾ 2.4 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. 

ಚೀನಾ ಹೂಡಿಕೆಯೊಂದಿಗೆ ಈ ಯೋಜನೆಗೆ ಪಾಕ್ ಸರ್ಕಾರ ಸಮ್ಮತಿ ನೀಡಿದೆ. ಇದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ ಈ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಖಡಕ್ ಉತ್ತರ ನೀಡಿದೆ.  

Stay up to date on all the latest ಅಂತಾರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp