ಅಮೆರಿಕನ್ನರ ಪ್ರತಿಭಟನೆಗೆ ಮಹಾತ್ಮಾ ಗಾಂಧೀಜಿ ಪ್ರತಿಮೆ ಭಗ್ನ, ತನಿಖೆ ಆರಂಭಿಸಿದ ಅಧಿಕಾರಿಗಳು

ಜನಾಂಗೀಯ ಹಲ್ಲೆ ಮತ್ತು ವರ್ಣಬೇಧ ನೀತಿ ವಿರುದ್ಧ ಅಮೆರಿಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆಯುತ್ತಿದ್ದು, ಇದಕ್ಕೆ ಸಾಕ್ಷಿಯಾಗಿ ಮಹಾತ್ಮಾಗಾಂಧಿ ಪ್ರತಿಮೆಯನ್ನು ಪ್ರತಿಭಟನಾಕಾರರು ಭಗ್ನಗೊಳಿಸಿದ್ದಾರೆ.
ದುಷ್ಕರ್ಮಿಗಳು ಭಗ್ನಗೊಳಿಸಿದ ಗಾಂಧಿ ಪ್ರತಿಮೆ
ದುಷ್ಕರ್ಮಿಗಳು ಭಗ್ನಗೊಳಿಸಿದ ಗಾಂಧಿ ಪ್ರತಿಮೆ

ವಾಷಿಂಗ್ಟನ್: ಜನಾಂಗೀಯ ಹಲ್ಲೆ ಮತ್ತು ವರ್ಣಬೇಧ ನೀತಿ ವಿರುದ್ಧ ಅಮೆರಿಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆಯುತ್ತಿದ್ದು, ಇದಕ್ಕೆ ಸಾಕ್ಷಿಯಾಗಿ ಮಹಾತ್ಮಾಗಾಂಧಿ ಪ್ರತಿಮೆಯನ್ನು ಪ್ರತಿಭಟನಾಕಾರರು ಭಗ್ನಗೊಳಿಸಿದ್ದಾರೆ.

ಅಮೆರಿಕಾ ರಾಜಧಾನಿ ವಾಷಿಂಗ್ಟನ್ ಡಿಸಿಯ ಭಾರತೀಯ ರಾಯಭಾರ ಕಚೇರಿ ಹೊರಾಂಗಣದಲ್ಲಿರುವ ಮಹಾತ್ಮನ ಪ್ರತಿಮೆಯನ್ನ ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಯುಎಸ್ ಸ್ಟೇಟ್ ಪಾರ್ಕ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಿನೆಯಾಪೊಲೀಸ್​ನಲ್ಲಿ ನಡೆದ ಆಫ್ರಿಕನ್ ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನ ಖಂಡಿಸಿ ಅಮೆರಿಕಾದಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್ ಅಂತ ಪ್ರತಿಭಟನೆಗಳು ನಡೆಯುತ್ತಿವೆ. ಮೇ 25ರಂದು ಪೊಲೀಸರು ಫ್ಲಾಯ್ಡ್​ನ ಕತ್ತಿನ ಮೇಲೆ ಮೊಣಕಾಲೂರಿದ್ದರು. ಇದರಿಂದ ಆತನಿಗೆ ಉಸಿರಾಡಲಾಗದೆ ಮೃತಪಟ್ಟಿದ್ದ. ಈ ಸಂಬಂಧ ನಾಲ್ವರು ಅಧಿಕಾರಿಗಳನ್ನ ಅಮಾನತುಗೊಳಿಸಿ ಅವರ ವಿರುದ್ಧ ಪ್ರಕರಣ ಕೂಡ ದಾಖಲಿಸಿಕೊಳ್ಳಲಾಗಿದೆ. ಆದರೂ ಪ್ರತಿಭಟನಾಕಾರರು ತೀವ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ಹಿಂಸಾರೂಪ ಪಡೆಯುತ್ತಿದೆ.

ಕೊಲಂಬಿಯಾದ ಫೆಡರಲ್ ಲ್ಯಾಂಡ್ ನಲ್ಲಿ1998ರಲ್ಲಿ ಅಮೆರಿಕ ಸರ್ಕಾರ ಗಾಂಧಿ ಗೌರವಾರ್ಥ ಈ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com