ವಿಶ್ವದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 62 ಲಕ್ಷಕ್ಕೆ ಏರಿಕೆ, 3.79 ಲಕ್ಷ ಮಂದಿ ಸಾವು

ವಿಶ್ವದಾದ್ಯಂತ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 93,000 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢವಾಗಿದೆ. ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 62 ಲಕ್ಷಕ್ಕೇರಿದ್ದು, 3.79ಲಕ್ಷ ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಿನೀವಾ: ವಿಶ್ವದಾದ್ಯಂತ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 93,000 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢವಾಗಿದೆ. ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 62 ಲಕ್ಷಕ್ಕೇರಿದ್ದು, 3.79ಲಕ್ಷ ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದಾರೆ. 

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಒಟ್ಟಾರೆಯಾಗಿ 6,287,771 ಲಕ್ಷ ಮಂದಿ ಸೋಂಕಿನಿಂದಬಳಲುತ್ತಿದ್ದು, 379,941 ಲಕ್ಷ ಮಂದಿ ಬಲಿಯಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಅಮೆರಿಕಾ ಒಂದರಲ್ಲಿಯೇ 2,949,455 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 165,311 ಮಂದಿ ಸಾವನ್ನಪ್ಪಿದ್ದಾರೆ. 

ಈ ನಡುವೆ ಕೊರೋನಾವೈರಸ್ ಚಿಕಿತ್ಸೆಗಳ ಹುಡುಕಾಟದಲ್ಲಿ ಸುರಕ್ಷತಾ ಪರಿಶೀಲನೆ ಬಾಕಿ ಇರುವುದರಿಂದ ಅಮಾನತುಗೊಳಿಸಲಾಗಿರುವ ಹೈಡ್ರೋಕ್ಲೋರೋಕ್ವಿನ್ ಔಷಧದ ಕ್ಲಿನಿಕಲ್ ಪ್ರಯೋಗಳು ಪುನರಾರಂಭಗೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

ಲಭ್ಯವಿರುವ ಮರಣ ದತ್ತಾಂಶ ಆಧಾರದ ಮೇಲೆ ಹೈಡ್ರೋಕ್ಲೋರೋಕ್ವಿನ್ ನ್ನು ಪುನರಾರಂಭಿಸುವ ಬಗ್ಗೆ ವಿಚಾರಣೆಯಲ್ಲಿ ಕಾರ್ಯನಿರ್ವಾಹಕ ಗುಂಪು ಪ್ರಮುಖ ತನಿಖಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತದೆ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com