ಕೊನೆ ಕ್ಷಣದಲ್ಲಿ ಮತ್ತೊಂದು ಕಾನೂನು ತೊಡಕು, ವಿಜಯ್ ಮಲ್ಯ ಹಸ್ತಾಂತರ ಮರಿಚಿಕೆ?

ಉದ್ಯಮಿ ವಿಜಯ್ ಮಲ್ಯ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು ನಿನ್ನೆ ರಾತ್ರಿಯೇ ಭಾರತಕ್ಕೆ ಬಂದಿಳಿಯಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮತ್ತೊಂದು ಕಾನೂನು ತೊಡಕು ಸೃಷ್ಟಿಯಾಗಿದ್ದು ಅದು ಬಗೆಹರಿಯುವವರೆಗೂ ಮಲ್ಯ ಹಸ್ತಾಂತರ ಸಾಧ್ಯವಿಲ್ಲ ಎಂದು ಬ್ರಿಟಿಷ್ ಹೈ ಕಮಿಷನ್ ಮೂಲಗಳು ತಿಳಿಸಿವೆ.
ವಿಜಯ್ ಮಲ್ಯ
ವಿಜಯ್ ಮಲ್ಯ

ಲಂಡನ್: ಉದ್ಯಮಿ ವಿಜಯ್ ಮಲ್ಯ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು ನಿನ್ನೆ ರಾತ್ರಿಯೇ ಭಾರತಕ್ಕೆ ಬಂದಿಳಿಯಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮತ್ತೊಂದು ಕಾನೂನು ತೊಡಕು ಸೃಷ್ಟಿಯಾಗಿದ್ದು ಅದು ಬಗೆಹರಿಯುವವರೆಗೂ ಮಲ್ಯ ಹಸ್ತಾಂತರ ಸಾಧ್ಯವಿಲ್ಲ ಎಂದು ಬ್ರಿಟಿಷ್ ಹೈ ಕಮಿಷನ್ ಮೂಲಗಳು ತಿಳಿಸಿವೆ.

ಈ ಕಾನೂನು ಸಮಸ್ಯೆ ಗೌಪ್ಯವಾಗಿರುವುದರಿಂದ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ. ಈ ಪ್ರಕ್ರಿಯೆ ಇನ್ನೇಷ್ಟು ದಿನ ನಡೆಯುತ್ತದೆ ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ. ಆದರೆ ಸಾಧ್ಯವಾದಷ್ಟು ಬೇಗ ಈ ಕಾನೂನು ತೊಡಕನ್ನು ಪರಿಹರಿಸಿ ಮಲ್ಯ ಹಸ್ತಾಂತರ ಪ್ರಕ್ರಿಕೆಯ ಪೂರ್ಣಗೊಳಿಸುತ್ತೇವೆ ಎಂದು ಬ್ರಿಟಿಷ್ ಹೈ ಕಮಿಷನ್ ವಕ್ತಾರ ಹೇಳಿದ್ದಾರೆ. 

ಲಂಡನ್ ಹೈಕೋರ್ಟ್ ಹಸ್ತಾಂತರ ಆದೇಶಕ್ಕೆ ಇಂಗ್ಲೆಂಡ್ ನ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿತ್ತು. ಇದರೊಂದಿಗೆ ಮಲ್ಯ ಹಸ್ತಾಂತರ ಪ್ರಕ್ರಿಯೆ ನಿನ್ನೆಯೇ ನಡೆಯಬೇಕಿತ್ತು. ಆದರೆ ಬ್ರಿಟಿಷ್ ಹೈ ಕಮಿಷನ್ ಇದೀಗ ಮತ್ತೊಂದು ಕಾನೂನು ತೊಡಕನ್ನು ಮುಂದಿಟ್ಟಿದೆ. 

ಇಂಗ್ಲೆಂಡ್ ಕಾನೂನಿನ ಪ್ರಕಾರ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಹಸ್ತಾಂತರ ಆದೇಶ ನೀಡಿದ 28 ದಿನಗಳೊಳಗೆ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಆದರೆ ಹಸ್ತಾಂತರಗೊಂಡ ವ್ಯಕ್ತಿ ರಾಜಾಶ್ರಯದ ಅರ್ಜಿ ಸಲ್ಲಿಸಿದ್ದರೆ ಆ ಅರ್ಜಿ ಇತ್ಯರ್ಥವಾಗುವವರೆಗೂ ಹಸ್ತಾಂತರ ಸಾಧ್ಯವಿಲ್ಲ ಎಂದು ಬ್ರಿಟನ್ ಕಾನೂನು ಹೇಳುತ್ತದೆ. 

ಇನ್ನು ಸಿಬಿಐ ಮೂಲಗಳು ಸಹ ಮಲ್ಯ ರಾಜಾಶ್ರಯದ ಅರ್ಜಿ ಇತ್ಯರ್ಥವಾಗಿಲ್ಲ ಎಂದು ಹೇಳಿದ್ದು ಮಲ್ಯ ಹಸ್ತಾಂತರ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com