ಆಸಿಸ್ ನ ಸೂಪರ್ ಕಾರ್ ರೇಸರ್ ರೇನಿ ಗ್ರೇಸೀ ಈಗ ಫೇಮಸ್ ನೀಲಿ ಚಿತ್ರತಾರೆ!

ಆಸ್ಟ್ರೇಲಿಯಾದ ಮಹಿಳಾ ಸೂಪರ್ ಕಾರ್ ರೇಸರ್ ರೆನೀ ಗ್ರೇಸಿ ರೇಸಿಂಗ್ ತ್ಯಜಿಸಿ ನೀಲಿ ಚಿತ್ರ ತಾರೆಯಾಗಿ ಬದಲಾಗಿದ್ದಾರೆ.
ಸೂಪರ್ ಕಾರ್ ರೇಸರ್ ರೇನೀ ಗ್ರೇಸೀ
ಸೂಪರ್ ಕಾರ್ ರೇಸರ್ ರೇನೀ ಗ್ರೇಸೀ

ಕ್ಯಾನ್ಬೆರಾ: ಆಸ್ಟ್ರೇಲಿಯಾದ ಮಹಿಳಾ ಸೂಪರ್ ಕಾರ್ ರೇಸರ್ ರೆನೀ ಗ್ರೇಸಿ ರೇಸಿಂಗ್ ತ್ಯಜಿಸಿ ನೀಲಿ ಚಿತ್ರ ತಾರೆಯಾಗಿ ಬದಲಾಗಿದ್ದಾರೆ.

ಹೌದು ಅಚ್ಚರಿಯಾದರೂ ಇದು ಸತ್ಯ. ಆಸ್ಟ್ರೇಲಿಯಾದ ಮೊಟ್ಟ ಮೊದಲ ಪೂರ್ಣ ಸಮಯದ ಮಹಿಳಾ ಸೂಪರ್ ಕಾರ್ ರೇಸರ್ ಎಂದು ಗುರುತಿಸಿಕೊಂಡಿದ್ದ ರೇನಿ ಗ್ರೇಸಿ ಈಗ ಖ್ಯಾತ ನೀಲಿ ಚಿತ್ರತಾರೆಯಾಗಿ ಬದಲಾಗಿದ್ದಾರೆ. ಹಣದ ಸಮಸ್ಯೆಯಿಂದಾಗಿ ರೇನಿ ಗ್ರೇಸಿ ನೀಲಿ ಚಿತ್ರತಾರೆಯಾಗಿ ಬದಲಾಗಿದ್ದಾರೆ ಎನ್ನಲಾಗಿದೆ.

ಕಳೆದ 14 ವರ್ಷಗಳಲ್ಲಿ ಗ್ರೇಸಿ ಅವರು ಆಸ್ಟ್ರೇಲಿಯಾದ ಮೊದಲ ಪೂರ್ಣ ಸಮಯದ ಮಹಿಳಾ ಸೂಪರ್ ಕಾರ್ ಡ್ರೈವರ್ ಆಗಿ ಗುರುತಿಸಿಕೊಂಡಿದ್ದ ರೇನಿ ಗ್ರೇಸಿ, ಆಸ್ಟ್ರೇಲಿಯಾದ ಪ್ರಸಿದ್ಧ 1000 ಸೂಪರ್‍ಕಾರ್ ರೇಸ್‍ನಲ್ಲಿ ಭಾಗವಹಿಸಲು 2015ರಲ್ಲಿ ಸಿಮೋನಾ ಡಿ ಸಿಲ್ವೆಸ್ಟ್ರೊ ಜೊತೆಗೂಡಿದ್ದರು. 1998ರಿಂದ ಬಹುತೇಕ ರೇಸ್‍ಗಳಲ್ಲಿ ಗ್ರೇಸಿ ಹಾಗೂ ಸಿಮೋನಾ ಜೊತೆಯಾಗಿಯೇ ರೇಸ್‍ನಲ್ಲಿ ಭಾಗವಹಿಸಿದ್ದರು. ಈ ಮೂಲಕ ಉತ್ತಮ ಮಹಿಳಾ ಜೋಡಿ ಎಂಬ ಹೆಗ್ಗಳಿಕೆಗೆ ಈ ಜೋಡಿ ಪಾತ್ರವಾಗಿತ್ತು. 

ಆದರೆ ರೇಸಿಂಗ್ ನಲ್ಲಿ ತನ್ನ ಭವಿಷ್ಠ ರೂಪಿಸಿಕೊಳ್ಳಬೇಕು ಎಂಬ ಮಹದಾಸೆಗೆ ಹಣದ ಸಮಸ್ಯೆ ದೊಡ್ಡ ಹೊಡೆತವಾಗಿ ಪರಿಣಮಿಸಿತ್ತು. ಆರಂಭಗಲ್ಲಿ ರೇಸಿಂಗ್ ನಲ್ಲಿ ಗ್ರೇಸಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ರೇನೀ ಗ್ರೇಸಿ ರೇಸಿಂಗ್ ಬಿಟ್ಟು ಸ್ಥಳೀಯ ಕಾರ್ ಯಾರ್ಡ್‍ನಲ್ಲಿ ಕೆಲಸ ಮಾಡ ತೊಡಗಿದರು. ಇದರಿಂದಲೂ ಗ್ರೇಸಿಗೆ ಹೇಳಿಕೊಳ್ಳುವಂತಹ ಆದಾಯ ಬರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ರೇನೀ ಗ್ರೇಸಿ ನೀಲಿ ಚಿತ್ರಗಳ ವೆಬ್ ಸೈಟ್ ತೆರೆದು ತಮ್ಮದೇ ವಿಡಿಯೋ ಮತ್ತು ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.

ಮೊದಲೇ ಆಸ್ಟ್ರೇಲಿಯಾದ ಸೂಪರ್ ಕಾರ್ ರೇಸರ್ ಎಂದು ಖ್ಯಾತಿ ಗಳಿಸಿದ್ದ ರೇನಿ ಗ್ರೇಸಿ ಇದೀಗ ಪೋರ್ನ್ ಇಂಡಸ್ಚ್ರಿಗೆ ಕಾಲಿಟ್ಟ ವಿಚಾರ ಆಸ್ಟ್ರೇಲಿಯಾದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದೆ. ರೇನಿ ಗ್ರೇಸಿ ಅವರ ನೀಲಿ ಚಿತ್ರಗಳ ವೆಬ್ ಸೈಟ್ ಗೆ ಕೇವಲ ಒಂದು ವಾರದಲ್ಲೇ ಸುಮಾರು 7 ಸಾವಿರ ಜನ ಚಂದಾದಾರರಾಗಿದ್ದು, ಒಂದೇ ವಾರದಲ್ಲಿ ರೇನೀ ಗ್ರೇಸಿ ಸುಮಾರು 2.26 ಲಕ್ಷ ರೂ.(3,000 ಡಾಲರ್)ಸಂಪಾದಿಸಿದ್ದಾರೆ.  

ಈ ಬಗ್ಗೆ ಸ್ವತಃ ರೇನಿ ಗ್ರೇಸಿ ಮಾತನಾಡಿದ್ದು, 'ಸೂಪರ್ ಕಾರ್ ಡ್ರೈವರ್ ಆಗಿದ್ದಾಗ ನಿರೀಕ್ಷಿಸಿದ ಫಲಿತಾಂಶ ಸಿಗಲಿಲ್ಲ. ಸಾಕಷ್ಟು ಹಣ ಗಳಿಸಲು ಸಹ ಸಾಧ್ಯವಾಗಲಿಲ್ಲ. ನನ್ನ ಕೈಲಾದಷ್ಟು ಪ್ರಯತ್ನ ಮಾಡಿದೆ. ಆದರೆ ನನ್ನ ಕನಸುಗಳೇ ಕೊಚ್ಚಿ ಹೋಗುವ ಹಂತ ತಲುಪಿತು. ಹೀಗಾಗಿ ಈ ಉದ್ಯೋಗ ಪ್ರಾರಂಭಿಸಿದೆ. ಈಗಿರುವ ಹಣಕಾಸಿನ ಉತ್ತಮ ಪರಿಸ್ಥಿತಿಯನ್ನು ನಾನು ಜೀವನದಲ್ಲಿ ಹಿಂದೆಂದೂ ಕಂಡಿಲ್ಲ. ನನ್ನ ಜೀವನದಲ್ಲಿ ಇದನ್ನು ಮಾಡುತ್ತಿರುವುದಕ್ಕೆ ನನಗೆ ಸಂತೋಷವಿದೆ. ಅಡಲ್ಟ್ ಮಾಡೆಲ್ ಆಗಿ ಪ್ರಸ್ತುತ ವಾರಕ್ಕೆ ಸುಮಾರು 1.88 ಲಕ್ಷ ರೂ.(2,500 ಡಾಲರ್)ಗಳನ್ನು ಸಂಪಾದಿಸುತ್ತಿದ್ದೇನೆ.  ನನ್ನ ಜೀವನದಲ್ಲಿ ಮಾಡಿದ ಅದ್ಭುತ ಕೆಲಸವಿದು. ಕನಸಿನಲ್ಲಿಯೂ ಕಾಣದಷ್ಟು ಹಣವನ್ನು ಈ ಕೆಲಸದಿಂದ ಸಂಪಾದಿಸುತ್ತಿದ್ದೇನೆ, ನಿಜವಾಗಿಯೂ ಈ ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ. ಯಾರು ಏನೇ ಹೇಳಿದರೂ ನನಗೆ ಅಭ್ಯಂತರವಿಲ್ಲ. ಏಕೆಂದರೆ ನಾನು ಚೆನ್ನಾಗಿದ್ದೇನೆ. ಹೆಚ್ಚು ಹಣ ಸಂಪಾದಿಸುತ್ತಿದ್ದೇನೆ. ಈಗಿರುವ ಸ್ಥಾನದಲ್ಲಿ ನಾನು ಸುಭದ್ರವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com