ಕೋವಿಡ್-19: ರೋಗಲಕ್ಷಣವಿಲ್ಲದ ರೋಗಿಗಳಿಂದ ವೈರಸ್ ಹರಡುವುದು ಅಪರೂಪ- ಡಬ್ಲ್ಯೂಎಚ್ ಒ

ಯೂರೋಪಿನಲ್ಲಿ ಪರಿಸ್ಥಿತಿ ಸುಧಾರಿಸಿದ್ದರೂ ಸಾಂಕ್ರಾಮಿಕ ಕಾಯಿಲೆ ಕೋವಿಡ್-19 ಯಿಂದಾಗಿ ಜಗತ್ತಿನಾದ್ಯಂತ ಪರಿಸ್ಥಿತಿ ತುಂಬಾ ಹದಗೆಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಡಬ್ಲ್ಯೂಎಚ್ ಒ ಮಹಾನಿರ್ದೇಶಕ ಟೆಡ್ರೂಸ್ ಅಧಾನೊಮ್ ಘೆಬ್ರೆಯೆಸಸ್,
ಡಬ್ಲ್ಯೂಎಚ್ ಒ ಮಹಾನಿರ್ದೇಶಕ ಟೆಡ್ರೂಸ್ ಅಧಾನೊಮ್ ಘೆಬ್ರೆಯೆಸಸ್,

ಜಿನಿವಾ: ಯೂರೋಪಿನಲ್ಲಿ ಪರಿಸ್ಥಿತಿ ಸುಧಾರಿಸಿದ್ದರೂ ಸಾಂಕ್ರಾಮಿಕ ಕಾಯಿಲೆ ಕೋವಿಡ್-19 ಯಿಂದಾಗಿ ಜಗತ್ತಿನಾದ್ಯಂತ ಪರಿಸ್ಥಿತಿ ತುಂಬಾ ಹದಗೆಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಬ್ಲ್ಯೂಎಚ್ ಒ ಮಹಾನಿರ್ದೇಶಕ ಟೆಡ್ರೂಸ್ ಅಧಾನೊಮ್ ಘೆಬ್ರೆಯೆಸಸ್, ವಿಶ್ವಸಂಸ್ಥೆಗೆ ವರದಿಯಾಗಿರುವ ಶೇ, 75 ಪ್ರಕರಣಗಳು ಅಮೆರಿಕಾ ಮತ್ತು ದಕ್ಷಿಣ ಏಷ್ಯಾದ 10 ರಾಷ್ಟ್ರಗಳಿಂದ ಬಂದಿವೆ ಎಂದು ತಿಳಿಸಿದರು.

ಕಳೆದ 10 ದಿನಗಳಲ್ಲಿ 100,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಭಾನುವಾರ ಅತಿಹೆಚ್ಚು 136, 000 ಪ್ರಕರಣಗಳು ವರದಿಯಾಗಿರುವುದಾಗಿ ಅವರು ಹೇಳಿದರು.  

ಆಫ್ರಿಕಾದ ಬಹುತೇಕ ರಾಷ್ಟ್ರಗಳಲ್ಲಿ ಈಗಲೂ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಅನೇಕ ರಾಷ್ಟ್ರಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತಿರುವುದಾಗಿ ತಿಳಿಸಿದರು. 

ಕೋವಿಡ್-19 ಸೋಂಕು ಆಗಾಗ್ಗೆ ಹೆಚ್ಚಾಗಿ ಹರಡಬಹುದು ಎಂಬ ತಜ್ಞರ ಎಚ್ಚರಿಕೆ ಹೊರತಾಗಿಯೂ ರೋಗಲಕ್ಷಣಗಳಿಲ್ಲದ ಜನರಿಂದ ಕೊರೋನಾವೈರಸ್ ಹರಡುವುದು ಅಪರೂಪ ಎಂದು ಡಬ್ಲ್ಯೂಎಚ್ ಒ ಹೇಳಿದೆ.  

ಅನೇಕ ರಾಷ್ಟ್ರಗಳು ರೋಗಲಕ್ಷಣವಿಲ್ಲದ ಜನರಿಂದ ಅಥವಾ ಯಾವುದೇ ಕ್ಲಿನಿಕಲ್ ಲಕ್ಷಣಗಳಿಲ್ಲದವರಿಂದ ಸೋಂಕು ಹರಡುವ ಕುರಿತಂತೆ ವರದಿ ಮಾಡುತ್ತಿವೆ. ಆದರೆ, ಈ  ಪ್ರಕರಣಗಳ ಬಗ್ಗೆ ವಿವರವಾಗಿ ಪ್ರಶ್ನಿಸಿದಾಗ ಹಲವರಲ್ಲಿ ಸಣ್ಣ ರೀತಿಯ ಕಾಯಿಲೆ ಹೊಂದಿರುವುದು ತಿಳಿದುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಾಂತ್ರಿಕ ವಿಭಾಗದ ಮಾರಿಯಾ ವ್ಯಾನ್ ಕೆರ್ಖೋವ್ ಹೇಳಿದರು. 

ಅಲ್ಲದೇ, ಬ್ರಿಟನ್, ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳ ಆರೋಗ್ಯ ಅಧಿಕಾರಿಗಳು ರೋಗ ಲಕ್ಷಣವಿಲ್ಲದ ಜನರಿಂದಲೂ ಕೋವಿಡ್-19 ಹರಡಬಹುದು ಎಂಬ ಎಚ್ಚರಿಕೆ ನೀಡಿದ್ದಾರೆ. ಈ ರೀತಿಯ ಸೋಂಕು ಹರಡುವುದು ಸಾಂಕ್ರಾಮಿಕ ರೋಗಕ್ಕೆ ಚಾಲನೆಯಲ್ಲ, ಬಹುಶಃ ಸುಮಾರು 6% ರಷ್ಟು ಹರಡುವಿಕೆಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com