ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ತೀವ್ರ ಆತಂಕವಿದೆ: ಅಮೆರಿಕ ರಾಯಭಾರಿ

ಐತಿಹಾಸಿಕವಾಗಿ ಭಾರತ ಎಲ್ಲಾ ಧರ್ಮಗಳನ್ನು ಗೌರವಿಸುತ್ತಿದ್ದು ಧರ್ಮ ಸಹಿಷ್ಣುತೆಯನ್ನು ಸಾರುವ ದೇಶವಾಗಿದೆ. ಆದರೆ ಭಾರತದಲ್ಲಿ ನಡೆಯುತ್ತಿರುವ ಧಾರ್ಮಿಕ ಸ್ವಾತಂತ್ರ್ಯಗಳ ವಿದ್ಯಾಮಾನಗಳು ತೀವ್ರ ಕಳವಳವನ್ನು ಹುಟ್ಟಿಸುತ್ತಿವೆ ಎಂದು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತದ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಐತಿಹಾಸಿಕವಾಗಿ ಭಾರತ ಎಲ್ಲಾ ಧರ್ಮಗಳನ್ನು ಗೌರವಿಸುತ್ತಿದ್ದು ಧರ್ಮ ಸಹಿಷ್ಣುತೆಯನ್ನು ಸಾರುವ ದೇಶವಾಗಿದೆ. ಆದರೆ ಭಾರತದಲ್ಲಿ ನಡೆಯುತ್ತಿರುವ ಧಾರ್ಮಿಕ ಸ್ವಾತಂತ್ರ್ಯಗಳ ವಿದ್ಯಾಮಾನಗಳು ತೀವ್ರ ಕಳವಳವನ್ನು ಹುಟ್ಟಿಸುತ್ತಿವೆ ಎಂದು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತದ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿರುವ ಸ್ಯಾಮುವೆಲ್ ಬ್ರೌನ್ ಬ್ಯಾಕ್ ಅವರು ಈ ಹೇಳಿಕೆ ನೀಡಿದ್ದು ನಿನ್ನೆ ವಾಷಿಂಗ್ಟನ್ ನಲ್ಲಿ 2019ನೇ ಸಾಲಿನ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದರು.
ವರದಿಯಲ್ಲಿ ಜಗತ್ತಿನಾದ್ಯಂತ ನಡೆಯುತ್ತಿರುವ ಧಾರ್ಮಿಕ ಸ್ವಾತಂತ್ರ್ಯಗಳ ಉಲ್ಲಂಘನೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಅಮೆರಿಕಾ ಕಾರ್ಯದರ್ಶಿ ಮೈಕ್ ಪೊಂಪಿಯೊ ಈ ವರದಿಯನ್ನು ಬಿಡುಗಡೆ ಮಾಡಿದರು.

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ವಿಷಯದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ನೋಡಿದಾಗ ತೀವ್ರ ಆತಂಕವಾಗುತ್ತಿದೆ. ಐತಿಹಾಸಿಕವಾಗಿ ಧಾರ್ಮಿಕ ಸಹಿಷ್ಣುತೆ ಹೊಂದಿರುವ ದೇಶ ಭಾರತ ಎಂದು ಬ್ರೌನ್ ಬಾಕ್ ಹೇಳಿದ್ದಾರೆ.

ಈ ಹಿಂದೆ ಭಾರತ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ವರದಿಯನ್ನು ತಳ್ಳಿಹಾಕಿತ್ತು. ತಮ್ಮ ದೇಶದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ವಿದೇಶವೊಂದು ವರದಿ ನೀಡಲು ಸಾಧ್ಯವಿಲ್ಲ. ತಮ್ಮ ದೇಶದ ನಾಗರಿಕರ ಸ್ವಾತಂತ್ರ್ಯವನ್ನು ಸಾಂವಿಧಾನಿಕವಾಗಿ ಹೇಗೆ ರಕ್ಷಿಸಬೇಕೆಂದು ತಿಳಿದಿದೆ. ಅದನ್ನು ಒಪ್ಪಲು ಸಹ ಆಗುವುದಿಲ್ಲ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com