ಚೀನಾದಲ್ಲಿ ಒಂದೇ ದಿನ 57 ಮಂದಿಗೆ ಕೊರೋನಾ ಸೋಂಕು: ಏಪ್ರಿಲ್ ಬಳಿಕ ಮೊದಲ ಬಾರಿಗೆ ಗರಿಷ್ಛ ಸಂಖ್ಯೆ

ಕೊರೋನಾ ವೈರಸ್ ಚೀನಾದಲ್ಲಿ ಸೋಂಕಿನ 2ನೇ ಅಲೆ ಆರಂಭವಾಯಿತೇ ಎಂಬ ಪ್ರಶ್ನೆ ಮೂಡುತ್ತಿದ್ದು, ಇಂದು ಮತ್ತೆ ಚೀನಾದಲ್ಲಿ 57 ಹೊಸ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಕೊರೋನಾ ವೈರಸ್ ಚೀನಾದಲ್ಲಿ ಸೋಂಕಿನ 2ನೇ ಅಲೆ ಆರಂಭವಾಯಿತೇ ಎಂಬ ಪ್ರಶ್ನೆ ಮೂಡುತ್ತಿದ್ದು, ಇಂದು ಮತ್ತೆ ಚೀನಾದಲ್ಲಿ 57 ಹೊಸ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಈ ಬಗ್ಗೆ ಚೀನಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಇಂದು ಪತ್ತೆಯಾದ 57 ಹೊಸ ಪ್ರಕರಣಗಳ  ಪೈಕಿ 37 ಪ್ರಕರಣಗಳು ಚೀನಾದಲ್ಲೇ ವರದಿಯಾಗಿದ್ದು, ಬಾರಿ 20 ಪ್ರಕರಣಗಳು ವಿದೇಶಗಳಿಂದ ಆಗಮಿಸಿದ್ದ ಚೀನೀಯರದ್ದು ಎಂದು ತಿಳಿದುಬಂದಿದೆ.

ಕಠಿಣ ಲಾಕ್ ಡೌನ್ ಮತ್ತು ಕಠಿಣ ನಿಯಮಗಳನ್ನು ಜಾರಿಗೆ ತಂದು ಚೀನಾ ಕೊರೋನಾ ವೈರಸ್ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದಿತ್ತು. ಆದರೆ ಇದೀಗ ಮತ್ತೆ ಚೀನಾದಲ್ಲಿ ಕೊರೋನಾ ಸೋಂಕಿನ 2ನೇ ಅಲೆ ಆರಂಭವಾಗಿದೆ. ಪ್ರಸ್ತುತ ಇಂದು ಪತ್ತೆಯಾದ 57 ಹೊಸ ಪ್ರಕರಣಗಳು ಕಳೆದ ಏಪ್ರಿಲ್ ನಿಂದ ಪತ್ತೆಯಾದ ಒಂದು ದಿನದ ಗರಿಷ್ಛ ಸೋಂಕಿತರ ಸಂಖ್ಯೆಯಾಗಿದೆ.  ಇಂದು ಪತ್ತೆಯಾಗಿರುವ ಸೋಂಕು ಪ್ರಕರಣಗಳ ಪೈಕಿ 9 ಮಂದಿಯಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ.

ಇನ್ನು ಇಂದಿನ 57 ಪ್ರಕರಣಗಳೊಂದಿಗೆ ಚೀನಾದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 83,132ಕ್ಕೆ ಏರಿಕೆಯಾಗಿದೆ. ಅಂತೆಯೇ ಕೊರೋನಾಗೆ ಬಲಿಯಾದವರ ಸಂಖ್ಯೆ 4,634ರಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com