ಫ್ಲಾಯ್ಡ್‌ ಸಾವು ಖಂಡಿಸಿ ಪ್ರತಿಭಟನೆ: ಬ್ರಿಟನ್‌ನಲ್ಲಿ 100ಕ್ಕೂ ಹೆಚ್ಚು ಜನರ ಬಂಧನ

ಅಮೆರಿಕ ಪೊಲೀಸರಿಂದ ಸಾವನ್ನಪ್ಪಿದ್ದ ಜಾರ್ಜ್‌ ಫ್ಲಾಯ್ಡ್‌ ಸಾವು ಇದೀಗ ಬ್ರಿಟನ್ ನಲ್ಲೂ ಪ್ರತಿಭಟನಾ ಕಿಚ್ಚು ಹೊತ್ತಿಸಿದ್ದು, ಬ್ರಿಟನ್‌ನಲ್ಲಿ ನಡೆದ ಪ್ರತಿಭಟನೆ ವೇಳೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಲಂಡನ್ ಪ್ರತಿಭಟನೆ
ಲಂಡನ್ ಪ್ರತಿಭಟನೆ

ಲಂಡನ್‌: ಅಮೆರಿಕ ಪೊಲೀಸರಿಂದ ಸಾವನ್ನಪ್ಪಿದ್ದ ಜಾರ್ಜ್‌ ಫ್ಲಾಯ್ಡ್‌ ಸಾವು ಇದೀಗ ಬ್ರಿಟನ್ ನಲ್ಲೂ ಪ್ರತಿಭಟನಾ ಕಿಚ್ಚು ಹೊತ್ತಿಸಿದ್ದು, ಬ್ರಿಟನ್‌ನಲ್ಲಿ ನಡೆದ ಪ್ರತಿಭಟನೆ ವೇಳೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಲಂಡನ್‌ನಲ್ಲಿ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ವೇಳೆ ಗುಂಪು ಚದುರಿಸಲು ಮುಂದಾದ ಪೊಲೀಸರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ. ಈ ವೇಳೆ ನಡೆದ ಸಂಘರ್ಷದಲ್ಲಿ ಹಲವರು ಗಾಯಗೊಂಡಿದ್ದಾರೆ. ಇದೇ ಕಾರಣಕ್ಕಾಗಿ ಇದೀಗ  ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು 100ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. 

ಈ ಕುರಿತು ಮಾಹಿತಿ ನೀಡಿದ ಪೊಲೀಸರು, ಪ್ರತಿಭಟನೆ ಮಾಡುತ್ತಿದ್ದ ಕೆಲವರು ಮಾರಕಾಸ್ತ್ರಗಳು, ಡ್ರಗ್ಸ್‌ ಸಹ ಹೊಂದಿದ್ದರು ಎಂದು ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಬ್ರಿಟನ್‌ನ ಗೃಹ ಸಚಿವೆ ಪ್ರೀತಿ ಪಟೇಲ್‌ ಅವರು, ಪ್ರತಿಭಟನೆ ನಡೆಸಿದರೆ ಕೊರೋನಾ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ ನಾಗರಿಕರು ಪ್ರತಿಭಟನೆ ನಡೆಸಬಾರದು. ಗುಂಪು ಸೇರದಂತೆ  ಮನವಿ ಮಾಡಿದ್ದರು. ‘ನಾವು ಆರೋಗ್ಯ ತುರ್ತ ಪರಿಸ್ಥಿತಿಯಲ್ಲಿ ಇದ್ದೇವೆ, ಇದು ಪ್ರತಿಭಟನೆ ಮಾಡುವ ಸಂದರ್ಭವಲ್ಲ, ದಯಮಾಡಿ ನಾಗರಿಕರು ಪೊಲೀಸರ ಮನವಿಗೆ ಸ್ಪಂದಿಸಬೇಕು’ ಎಂದು  ಪ್ರೀತಿ ಪಟೇಲ್ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com