ಕೋವಿಡ್-19: ವಿಶ್ವದಾದ್ಯಂತ 4 ಲಕ್ಷ 31 ಸಾವಿರ ಜನರ ಸಾವು, 7.8 ಮಿಲಿಯನ್ ಗಡಿ ದಾಟಿದ ಸೋಂಕಿತರ ಸಂಖ್ಯೆ

ಜಗತ್ತಿನಾದ್ಯಂತ  ಮಾರಕ ಕೊರೋನಾವೈರಸ್ ಅಟ್ಟಹಾಸ ಮುಂದುವರೆದಿದ್ದು, ಈವರೆಗೂ ಸೋಂಕಿನಿಂದ 4,31000 ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 7.8 ಮಿಲಿಯನ್  ಗಡಿ ದಾಟಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಿನಿವಾ: ಜಗತ್ತಿನಾದ್ಯಂತ  ಮಾರಕ ಕೊರೋನಾವೈರಸ್ ಅಟ್ಟಹಾಸ ಮುಂದುವರೆದಿದ್ದು, ಈವರೆಗೂ ಸೋಂಕಿನಿಂದ 4,31000 ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 7.8 ಮಿಲಿಯನ್  ಗಡಿ ದಾಟಿದೆ. 

ಸೋಂಕಿತರ ಸಂಖ್ಯೆ ಸತತವಾಗಿ ಏರಿಕೆಯಾಗುತ್ತಲೇ ಇದ್ದು, ಕಳೆದ ದಿನ 1 ಲಕ್ಷದ 32 ಸಾವಿರದ 581 ಸೋಂಕು ಪ್ರಕರಣ ಹೆಚ್ಚಳದೊಂದಿಗೆ ಸೋಂಕಿತರ ಸಂಖ್ಯೆ 7,823, 289ಕ್ಕೆ ಏರಿಕೆ ಆಗಿದೆ.

ಕಳೆದ 24 ಗಂಟೆಗಳಲ್ಲಿ ವಿಶ್ವದಾದ್ಯಂತ 3911 ಮಂದಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 431,541 ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಅಮೆರಿಕಾದಲ್ಲಿ 3.7 ಮಿಲಿಯನ್ ಜನರಿಗೆ ಕೊರೋನಾವೈರಸ್ ತಗುಲಿರುವುದು ದೃಢಪಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com