ವಿಶ್ವಾದ್ಯಂತ ಐವರಲ್ಲಿ ಒಬ್ಬರಿಗೆ ಕೋವಿಡ್ ಅಪಾಯ ಕಟ್ಟಿಟ್ಟ ಬುತ್ತಿ: ಅಧ್ಯಯನ ವರದಿ

ಜಾಗತಿಕವಾಗಿ ಐವರಲ್ಲಿ ಒಬ್ಬರಿಗೆ ದೈಹಿಕ ಆರೋಗ್ಯ ದೌರ್ಬಲ್ಯವಿದ್ದು ಇದು ಅವರನ್ನು ಕೋವಿಡ್-19 ನಂತಹಾ ಅಪಾಯ ತೀವ್ರವಾಗಿ ಬಾಧಿಸುವಂತೆ ಮಾಡಿದೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಈ ಅಧ್ಯಯನವು ಆರೋಗ್ಯದಲ್ಲಿ ಹೆಚ್ಚಿನ ತೊಂದರೆ ಹೊಂದಿರುವವರಿಗೆ ರಕ್ಷಣೆ ಒದಗಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಜಾಗತಿಕವಾಗಿ ಐವರಲ್ಲಿ ಒಬ್ಬರಿಗೆ ದೈಹಿಕ ಆರೋಗ್ಯ ದೌರ್ಬಲ್ಯವಿದ್ದು ಇದು ಅವರನ್ನು ಕೋವಿಡ್-19 ನಂತಹಾ ಅಪಾಯ ತೀವ್ರವಾಗಿ ಬಾಧಿಸುವಂತೆ ಮಾಡಿದೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಈ ಅಧ್ಯಯನವು ಆರೋಗ್ಯದಲ್ಲಿ ಹೆಚ್ಚಿನ ತೊಂದರೆ ಹೊಂದಿರುವವರಿಗೆ ರಕ್ಷಣೆ ಒದಗಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

The Lancet Global Health, ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಅಧ್ಯಯನವು, ಜಾಗತಿಕ ಜನಸಂಖ್ಯೆಯ ಶೇಕಡಾ 22ರಷ್ಟು,  ವಿಶ್ವದಾದ್ಯಂತ 1.7 ಶತಕೋಟಿ ಜನರು ಕನಿಷ್ಠ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಒಳಗೊಂಡಿದ್ದಾರೆ. ಅವರುಗಳು ಒಂದೊಮ್ಮೆ ಕೊರೋನಾ ಸೋಂಕಿಗೆ ತುತ್ತಾದರೆ ತೀವ್ರ ಅಪಾಯವನ್ನು ಎದುರಿಸಲಿದ್ದಾರೆ. ಇವರಲ್ಲಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಶೇ. 5ಕ್ಕಿಂತ ಕಡಿಮೆ ಜನರಿದ್ದರೆ 70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಶೇ.  66 ಕ್ಕಿಂತ ಹೆಚ್ಚಿದ್ದಾರೆ ಎಂದು ಅಧ್ಯಯನವು ತಿಳಿಸಿದೆ.

ಯುಕೆ ನ ಲಂಡನ್ ಸ್ಕೂಲ್ ಆಫ್ ಹೈಜೀನ್ & ಟ್ರಾಪಿಕಲ್ ಮೆಡಿಸಿನ್ ಸಂಸ್ಥೆಯ ಸಂಶೋಧಕರು, 349 ಮಿಲಿಯನ್ ಜನರು (ಜಾಗತಿಕ ಜನಸಂಖ್ಯೆಯ ಸುಮಾರು 4 ಪ್ರತಿಶತ) ಕೋವಿಡ್ ನ ತೀವ್ರ ಅಪಾಯ ಎದುರಿಸುತ್ತಿದ್ದಾರೆ ಅವರೊಮ್ಮೆ ಸೋಂಕಿಗೆ ಒಳಗಾದರೆ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸುವುದು ಅಗತ್ಯವಾಗಲಿದೆ ಎಂದಿದ್ದಾರೆ.  ಶೇಕಡಾ 3 ರಷ್ಟು ಮಹಿಳೆಯರಿಗೆ ಹೋಲಿಸಿದರೆ ಶೇಕಡಾ 6 ರಷ್ಟು ಪುರುಷರು ಹೆಚ್ಚಿನ ಅಪಾಯಕ್ಕೆ ಒಳಗಾಗಬಹುದು ಎಂದು ಅವರು ಹೇಳಿದರು.’

ಸಂಶೋಧಕರ ಪ್ರಕಾರ, ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ, ಹೆಚ್ಚಿನ ಎಚ್‌ಐವಿ / ಏಡ್ಸ್ ಹರಡುವ ಆಫ್ರಿಕನ್ ದೇಶಗಳಲ್ಲಿ ಮತ್ತು ಹೆಚ್ಚಿನ ಮಧುಮೇಹ ಇರುವ ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಇಂತಹಾ ಅಪಾಯ ಹೆಚ್ಚಾಗಿರಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com