"ಹೈಡ್ರಾಕ್ಸಿಕ್ಲೋರೋಕ್ವಿನ್ ಕೋವಿಡ್-19 ನಿಂದ ಎದುರಾಗುವ ಸಾವನ್ನು ತಡೆಯುವುದಿಲ್ಲ ಎಂಬುದು ಸಾಬೀತಾಗಿದೆ"

ಹೊಸ ಕೊರೋನಾ ವೈರಸ್ ಸೋಂಕಿಗೆ ಗುರಿಯಾಗಿ ಆಸ್ಪತ್ರೆಯಲ್ಲಿರುವವರನ್ನು ಹೈಡ್ರಾಕ್ಸಿಕ್ಲೋರೋಕ್ವಿನ್ ಸಾವಿನಿಂದ ಕಾಪಾಡುವುದಿಲ್ಲ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಯೊಬ್ಬರು ಹೇಳಿದ್ದಾರೆ.
ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್
ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್

ಲಂಡನ್: ಹೊಸ ಕೊರೋನಾ ವೈರಸ್ ಸೋಂಕಿಗೆ ಗುರಿಯಾಗಿ ಆಸ್ಪತ್ರೆಯಲ್ಲಿರುವವರನ್ನು ಹೈಡ್ರಾಕ್ಸಿಕ್ಲೋರೋಕ್ವಿನ್ ಸಾವಿನಿಂದ ಕಾಪಾಡುವುದಿಲ್ಲ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರು ಈ ಬಗ್ಗೆ ಮಾತನಾಡಿದ್ದು, ಕೋವಿಡ್-19 ರಿಂದ ಪಾರಾಗುವುದರಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ನ ಪಾತ್ರ ಅಗ್ರಸ್ಥಾನದಲ್ಲಿಯೇ ಇದೆ. ಈ ಕುರಿತು ಕ್ಲಿನಿಕಲ್ ಟ್ರೈಲ್ಸ್ ಮುಂದುವರೆದಿದೆ ಎಂದಿದ್ದಾರೆ.  
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಸೌಮ್ಯ ಸ್ವಾಮಿನಾಥನ್ ಅವರು, ರೋಗದ ಪ್ರಾರಂಭದಲ್ಲಿ ಅದರ ತೀವ್ರತೆಯನ್ನು ಕಡಿಮೆ ಮಾಡಲು ಅಥವಾ ತಡೆಗಟ್ಟುವಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ನ ಪಾತ್ರದ ಬಗ್ಗೆ ಇನ್ನೂ ಭಿನ್ನಾಭಿಪ್ರಾಯಗಳಿವೆ. ಈ ವರೆಗೂ ಗೊತ್ತಿಲ್ಲ, ಹೆಚ್ಚಿನ ಪ್ರಯೋಗಗಳು ನಡೆದು ಡಾಟಾ ಸಿಗಬೇಕಿದೆ ಎಂದು ಹೇಳಿದ್ದು, ಡಬ್ಲ್ಯು ಹೆಚ್ ಒ ನಡೆಸದೇ ಇರುವ ಪ್ರಯೋಗಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಹೈಡ್ರಾಕ್ಸಿಕ್ಲೊರೋಕ್ವಿನ್ ನ ತನ್ನ ಟ್ರಯಲ್ ಟೆಸ್ಟಿಂಗ್ ನಿಂದ ಕೈಬಿಡುತ್ತಿರುವುದಾಗಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ವಾರ ಹೇಳಿತ್ತು. ಈ ವೇಳೆ ಬ್ರಿಟನ್ ಹಾಗೂ ಇನ್ನಿತರ ಪ್ರತ್ಯೇಕ ವಿಶ್ಲೇಷಣೆಗಳ ಸಾಕ್ಷ್ಯಗಳನ್ನು ಈ ಔಷಧದ ಕುರಿತು ನೀಡಿತ್ತು. ಕೋವಿಡ್-19 ಚಿಕಿತ್ಸೆಗೆ ಎಬೋಲಾ ಹಾಗೂ ಏಡ್ಸ್ ಗೆ ನೀಡಲಾಗುತ್ತಿದ್ದ ಚಿಕಿತ್ಸೆಗಳ ಬಗ್ಗೆ ಪರೀಕ್ಷೆಗಳು ಈ ಹಿಂದಿನಂತೆಯೇ ಮುಂದುವರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com