ಚೀನಾದೊಂದಿಗಿನ ಎಲ್ಲಾ ಸಂಬಂಧ ಕಡಿತಗೊಳಿಸಿಕೊಳ್ಳುವ ಆಯ್ಕೆ ಅಮೆರಿಕಾ ಹೊಂದಿದೆ: ಟ್ರಂಪ್

ಚೀನಾದೊಂದಿಗೆ ತನ್ನ ಸಂಬಂಧವನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಆಯ್ಕೆಯನ್ನು ಅಮೆರಿಕಾ ಹೊಂದಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಚೀನಾದೊಂದಿಗೆ ತನ್ನ ಸಂಬಂಧವನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಆಯ್ಕೆಯನ್ನು ಅಮೆರಿಕಾ ಹೊಂದಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕಾ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್ ಜೈಜರ್ ಉಭಯ ದೇಶಗಳ ನಡುವಣ ಆರ್ಥಿಕ ಸಂಬಂಧ ಕಡಿತಗೊಳಿಸಲು ಸಾಧ್ಯವಾಗದಿರಬಹುದು ಎಂದು ಹೇಳಿಕೆ ನೀಡಿದ ನಂತರ ಅಧ್ಯಕ್ಷ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಇದು ರಾಯಭಾರಿ ರಾಬರ್ಟ್ ಲೈಟ್ ಜೈಜರ್ ಅವರ ಪ್ರಮಾದವಲ್ಲ, ಇದನ್ನು ನಾನು ಸ್ಪಷ್ಟಪಡಿಸುತ್ತಿಲ್ಲ. ಆದರೆ ಕೆಲವು ಷರತ್ತುಗಳೊಂದಿಗೆ ಚೀನಾದೊಂದಿಗೆ ಸಂಪೂರ್ಣ ಸಂಬಂಧ ಕಡಿತಗೊಳಿಸುವ ಆಯ್ಕೆನ್ನು ಅಮೆರಿಕಾ ನಿಶ್ಚಿತವಾಗಿ ಹೊಂದಿದೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ರಾಬರ್ಟ್ ಲೈಟ್ ಜೈಜರ್ ನೀಡಿದ ಹೇಳಿಕೆಯಲ್ಲಿ ಎರಡು ದೇಶಗಳ ನಡುವಣ ಆರ್ಥಿಕ ಸಂಬಂಧ ಕಡಿತಗೊಳಿಸುವ ಐಚ್ಛಿಕ ನೀತಿ ಸಾಧ್ಯವಾಗದಿರಬಹುದು ಎಂದು ಹೇಳಿದ್ದರು.

ಇದಕ್ಕೂ ಮುನ್ನ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ, ಅಮೆರಿಕಾ  ಹಾಗೂ ಚೀನಾ ನಡುವಣ ಒಂದನೇ ಹಂತದ  ವ್ಯಾಪಾರ ಒಪ್ಪಂದದಂತೆ ಬೀಜಿಂಗ್ ತನ್ನ ಹೊಣೆಗಾರಿಕೆಯನ್ನು ಮುಂದುವರಿಸುವ ಬದ್ದತೆಯನ್ನು ಚೀನಾದ ಉನ್ನತ ರಾಜತಾಂತ್ರಿಕ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com