ಭಾರತಕ್ಕೆ ಅಮೆರಿಕಾದಿಂದ ಮತ್ತೆ ಜಿಎಸ್​ಪಿ ಮಾನ್ಯತೆ: ಸುಳಿವು ನೀಡಿದ ಟ್ರಂಪ್ ಸರ್ಕಾರ

ಅಮೆರಿಕ ಜಿಎಸ್ ಪಿ (ಸಾಮಾನ್ಯ ಪದ್ಧತಿಯ ಆದ್ಯತೆ) ಪಟ್ಟಿಯಿಂದ ಭಾರತವನ್ನು 2019 ರ ನವೆಂಬರ್ ನಲ್ಲಿ ಕೈಬಿಟ್ಟಿತ್ತು. ಆದರೆ ಈಗ ಭಾರತಕ್ಕೆ ಜಿಎಸ್ ಪಿ ಸ್ಟೇಟಸ್ ನೀಡುವುದಾಗಿ ಅಮೆರಿಕ ಹೇಳುತ್ತಿದೆ. 
ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)

ವಾಷಿಂಗ್ ಟನ್: ಅಮೆರಿಕ ಜಿಎಸ್ ಪಿ (ಸಾಮಾನ್ಯ ಪದ್ಧತಿಯ ಆದ್ಯತೆ) ಪಟ್ಟಿಯಿಂದ ಭಾರತವನ್ನು 2019 ರ ನವೆಂಬರ್ ನಲ್ಲಿ ಕೈಬಿಟ್ಟಿತ್ತು. ಆದರೆ ಈಗ ಭಾರತಕ್ಕೆ ಜಿಎಸ್ ಪಿ ಸ್ಟೇಟಸ್ ನೀಡುವುದಾಗಿ ಅಮೆರಿಕ ಹೇಳುತ್ತಿದೆ. 

ಈ ಬಗ್ಗೆ ಅಮೆರಿಕದ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್‌ಹೈಜರ್ ಮಾತನಾಡಿದ್ದು, ಅಮೆರಿಕಾದ ವ್ಯಾಪಾರ ಆದ್ಯತೆಯ ವಿಷಯವಾದ ಜಿಎಸ್ ಪಿಯಡಿಯಲ್ಲಿ ಭಾರತವನ್ನು ಮತ್ತೆ ಫಲಾನುಭವಿ ರಾಷ್ಟ್ರದ ಸ್ಥಾನ ನೀಡುವ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕಾಗೂ ಸಹಾಯವಾಗುವಂತಹ ಅಂಶಗಳ ಪ್ರಸ್ತಾವನೆಯನ್ನು ಭಾರತ ಮುಂದಿಟ್ಟಿದೆ ಎಂದು ತಿಳಿದುಬಂದಿದೆ. 

1975ರ ನವೆಂಬರ್​ 24ರಂದು ಹೊರಡಿಸಿದ್ದ ಕಾರ್ಯಕಾರಿ ಆದೇಶದ ಪ್ರಕಾರ ಅಮೆರಿಕ ಅಧ್ಯಕ್ಷರು ಸಾಮಾನ್ಯ ಪದ್ಧತಿಯ ಆದ್ಯತೆಗಳಿಗಾಗಿ (ಜಿಎಸ್​ಪಿ) ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರ ಅಥವಾ ಆದ್ಯತೆಯ ವ್ಯಾಪಾರ ಮಾನ್ಯತೆ ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಸೇರಿಸಿತ್ತು. ಆದರೆ, 2019 ರಲ್ಲಿ ಡೊನಾಲ್ಡ್ ಟ್ರಂಪ್, ಅಮೆರಿಕದ ಉತ್ಪನ್ನಗಳಿಗೆ ಸಮಾನವಾದ ಮತ್ತು ಸುಲಭವಾದ ಮಾರುಕಟ್ಟೆ ಒದಗಿಸುವ ವಿಷಯದಲ್ಲಿ ಭಾರತದಿಂದ ಯಾವುದೇ ಭರವಸೆ ಬಂದಿಲ್ಲ. ಆದ್ದರಿಂದ, ಭಾರತಕ್ಕೆ ನೀಡಲಾಗಿರುವ ಮಾನ್ಯತೆಯನ್ನು ರದ್ದುಗೊಳಿಸಿರುವುದನ್ನು ಘೋಷಿಸಿದ್ದರು.

ಜಿಎಸ್ ಪಿ ಅಡಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಭಾರತದ ಸರಕುಗಳು ಅಮೆರಿಕಕ್ಕೆ ಸುಂಕರಹಿತವಾಗಿ ರಫ್ತಾಗುತ್ತಿತ್ತು. ಆದರೆ ಜಿಎಸ್ ಪಿ ಸ್ಟೇಟಸ್ ನ್ನು ರದ್ದುಗೊಳಿಸಿದ ನಂತರ ಸುಂಕ ರಹಿತವಾಗಿ ರಫ್ತಾಗುತ್ತಿದ್ದ ಸರಕುಗಳಿಗೆ ಸುಂಕ ಹೇರಲಾಗುತ್ತಿತ್ತು.
ಈಗ ಬದಲಾದ ಪರಿಸ್ಥಿತಿಯಲ್ಲಿ ಭಾರತಕ್ಕೆ ಜಿಎಸ್ ಪಿ ಮಾನ್ಯತೆಯನ್ನು ಪುನಃ ನೀಡುವ ವಿಷಯದ ಬಗ್ಗೆ ಅಮೆರಿಕ ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದು, ಭಾರತದಿಂದಲೂ ಇದಕ್ಕೆ ಪ್ರತಿಯಾಗಿ ತನಗೆ ವ್ಯಾಪಾರದಲ್ಲಿ ಸಹಕಾರಿಯಾಗುವ ಅಂಶಗಳನ್ನು ಈಡೇರಿಸುವ ಬೇಡಿಕೆಯನ್ನು ಮುಂದಿಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com