ಅಮೆರಿಕಾದ ನ್ಯಾಷನಲ್ ಸೈನ್ಸ್ ಫೌಂಡೇಷನ್ ನಿರ್ದೇಶಕರಾಗಿ ಭಾರತೀಯ ಮೂಲದ ವಿಜ್ಞಾನಿ ಡಾ. ಸೇತುರಾಮನ್ ಆಯ್ಕೆ

ಪ್ರಖ್ಯಾತ ಭಾರತೀಯ-ಅಮೇರಿಕನ್ ವಿಜ್ಞಾನಿ ಡಾ. ಸೇತುರಾಮನ್ ಪಂಚನಾಥನ್ ಅವರನ್ನು ನ್ಯಾಷನಲ್ ಸೈನ್ಸ್ ಫೌಂಡೇಶನ್‌ನ ನಿರ್ದೇಶಕರಾಗಿ ನೇಮಕ ಮಾಡಲು ಯುಎಸ್ ಸೆನೆಟ್ ಅನುಮೋದಿಸಿದೆ.  ಇದು ವಿಜ್ಞಾನ ಮತ್ತು ಎಂಜಿನಿಯರಿಂಗ್‌ನ ವೈದ್ಯಕೀಯೇತರ ಕ್ಷೇತ್ರಗಳಲ್ಲಿ ಮೂಲಭೂತ ಸಂಶೋಧನೆಗ ಬೆಂಬಲ ನೀಡುವ ಅಮೆರಿಕದ ಉನ್ನತ ಸಂಸ್ಥೆಯಾಗಿದೆ.
ಡಾ. ಸೇತುರಾಮನ್ ಪಂಚನಾಥನ್
ಡಾ. ಸೇತುರಾಮನ್ ಪಂಚನಾಥನ್

ನ್ಯೂಯಾರ್ಕ್:  ಪ್ರಖ್ಯಾತ ಭಾರತೀಯ-ಅಮೇರಿಕನ್ ವಿಜ್ಞಾನಿ ಡಾ. ಸೇತುರಾಮನ್ ಪಂಚನಾಥನ್ ಅವರನ್ನು ನ್ಯಾಷನಲ್ ಸೈನ್ಸ್ ಫೌಂಡೇಶನ್‌ನ ನಿರ್ದೇಶಕರಾಗಿ ನೇಮಕ ಮಾಡಲು ಯುಎಸ್ ಸೆನೆಟ್ ಅನುಮೋದಿಸಿದೆ.  ಇದು ವಿಜ್ಞಾನ ಮತ್ತು ಎಂಜಿನಿಯರಿಂಗ್‌ನ ವೈದ್ಯಕೀಯೇತರ ಕ್ಷೇತ್ರಗಳಲ್ಲಿ ಮೂಲಭೂತ ಸಂಶೋಧನೆಗ ಬೆಂಬಲ ನೀಡುವ ಅಮೆರಿಕದ ಉನ್ನತ ಸಂಸ್ಥೆಯಾಗಿದೆ.

ಅರಿಝೋನಾ ಟ್ ಯೂನಿವರ್ಸಿಟಿಯಪಂಚನಾಥನ್, ವಾರ್ಷಿಕ 7.4 ಬಿಲಿಯನ್ ಯುಎಸ್ ಡಾಲರ್ ಬಜೆಟ್ ಹೊಂದಿರುವ ಅಮೆರಿಕದ ಉನ್ನತ ವಿಜ್ಞಾನಸಂಸ್ಥೆಯಾದ ಎನ್ಎಸ್ಎಫ್ ಗೆ ಮುಖ್ಯಸ್ಥರಾಗಿರುತ್ತಾರೆ.

ಆಪ್ತ ವಲಯದಲ್ಲಿ  "ಪಂಚ್" ಎಂದು ಕರೆಯಲ್ಪಡುವ ಅವರನ್ನು ಪರಿವರ್ತನೆಯ ನಾಯಕ ಎಂದು ಗುರುತಿಸಲಾಗುತ್ತದೆ. ಅವರ ಮಾನವ ಕೇಂದ್ರಿತ ಪ್ರಯತ್ನಗಳು ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗಿವೆ.

ಪಂಚನಾಥನ್ ಎನ್‌ಎಸ್‌ಎಫ್‌ನ 15 ನೇ ನಿರ್ದೇಶಕರಾಗಿದ್ದ  ಫ್ರಾನ್ಸ್ ಕಾರ್ಡೊವಾ ಅವರಿಂದ ತೆರವಾದ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಜುಲೈ 6 ರಂದು ಅವರು ಅಧಿಕಾರ ಸ್ವೀಕರಿಸುವ ನಿರೀಕ್ಷೆಯಿದೆ.

"ಜಾಗತಿಕ ಮಟ್ಟದಲ್ಲಿ ನಾವು 'ವಿಭಿನ್ನ ಸಾಮರ್ಥ್ಯಗಳನ್ನು' ಹೇಗೆ ನೋಡುತ್ತೇವೆ ಎಂಬುದರ ಸಾಮರ್ಥ್ಯವನ್ನು ಹೊಂದಿರುವ ಬದಲಾಗುತ್ತಿರುವ ಜೀವನಆವಿಷ್ಕಾರಗಳ ಮೂಲಕ ಮಾನವೀಯತೆಯನ್ನು ಪ್ರೇರೇಪಿಸುವುದು, ಸೇವೆ ಮಾಡುವುದು ನನ್ನ ವೈಯಕ್ತಿಕ ಉದ್ದೇಶವಾಗಿದೆ" ಎಂದು ಪಂಚನಾಥನ್ ಅವರ ವೈಯಕ್ತಿಕ ವೆಬ್‌ಸೈಟ್‌ನಲ್ಲಿ  ಹೇಳಿದ್ದಾರೆ.

ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯ ಮುಖ್ಯ ಸ್ಥಾನಕ್ಕೆ ನಾಮನಿರ್ದೇಶನಗೊಂಡ ಎರಡನೇ ಭಾರತೀಯ-ಅಮೇರಿಕನ್ ಎಂಬ ಹೆಗ್ಗಳಿಕೆಗೆ ಪಂಚನಾಥನ್ ಭಾಜನರಾಗಿದ್ದಾರೆ. ಈ ಮುನ್ನ ಭಾರತೀಯ ಮೂಲದ ಡಾ.ಶುಭ್ರಾಸುರೇಶ್ ಅವರು ಅಕ್ಟೋಬರ್ 2010 ರಿಂದ ಮಾರ್ಚ್ 2013 ರವರೆಗೆ ಸೇವೆ ಸಲ್ಲಿಸಿದರು.

ಪಂಚನಾಥನ್ ಅವರ ಸಂಶೋಧನೆ ಮತ್ತು ಅಕಾಡೆಮಿಗಳಲ್ಲಿನ ವರ್ಷಗಳ ಅನುಭವವು ಈಸ್ಥಾನಕ್ಕೆ ಅವರನ್ನು ಯೋಗ್ಯರನ್ನಾಗಿಸಿದೆ. ಎಂದು ಹೌಸ್ ಸೈನ್ಸ್, ಸ್ಪೇಸ್ ಮತ್ತು ಟೆಕ್ನಾಲಜಿ ಕಮಿಟಿ ರ್ಯಾಂಕಿಂಗ್ ಸದಸ್ಯ ಫ್ರಾಂಕ್ ಲ್ಯೂಕಾಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com