ವಿಶ್ವವು ಈಗ ಕೊರೋನಾ ಸಾಂಕ್ರಾಮಿಕ ರೋಗದ ಹೊಸ, ಅಪಾಯಕಾರಿ ಹಂತದಲ್ಲಿದೆ: ಡಬ್ಲ್ಯೂಎಚ್ ಒ ಮುಖ್ಯಸ್ಥ

ಲಾಕ್ ಡೌನ್ ಹೊರತಾಗಿಯೂ ಕೋವಿಡ್-19 ಸಾಂಕ್ರಾಮಿಕ ರೋಗ ವೇಗವಾಗಿ ಹರಡುತ್ತಿದ್ದು, ವಿಶ್ವ ಸಾಂಕ್ರಾಮಿಕ ರೋಗದ ಹೊಸ ಹಾಗೂ ಅಪಾಯಕಾರಿ ಹಂತದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್

ಜಿನಿವಾ: ಲಾಕ್ ಡೌನ್ ಹೊರತಾಗಿಯೂ ಕೋವಿಡ್-19 ಸಾಂಕ್ರಾಮಿಕ ರೋಗ ವೇಗವಾಗಿ ಹರಡುತ್ತಿದ್ದು, ವಿಶ್ವ ಸಾಂಕ್ರಾಮಿಕ ರೋಗದ ಹೊಸ ಹಾಗೂ ಅಪಾಯಕಾರಿ ಹಂತದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಎರಡು ದೊಡ್ಡ ಇಟಾಲಿಯನ್ ನಗರಗಳಲ್ಲಿ ಡಿಸೆಂಬರ್ ನಲ್ಲಿ  ಕೊರೋನಾವೈರಸ್ ಮೊದಲು ಪ್ರಕರಣ ಪತ್ತೆಯಾಗುವುದಕ್ಕಿಂತ ಎರಡು ತಿಂಗಳ ಮೊದಲು ಇತ್ತು ಎಂಬ ವರದಿಗಳ ಬೆನ್ನಲ್ಲೆ  ವಿಶ್ವ ಆರೋಗ್ಯ ಸಂಸ್ಥೆ ಇಂತಹ ಎಚ್ಚರಿಕೆ ನೀಡಿದೆ. ಇದೇ ಸಂದರ್ಭದಲ್ಲಿ ಚೀನಾದಲ್ಲಿಯೂ ಮೊದಲ ಪ್ರಕರಣ ವರದಿಯಾಗಿತ್ತು. 

ವಿಶ್ವದಾದ್ಯಂತ ಈ ಸೋಂಕಿನಿಂದ ಸುಮಾರು 4 ಲಕ್ಷದ 54 ಸಾವಿರ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 8.4 ಮಿಲಿಯನ್ ಆಗಿದೆ. ಯುರೋಪ್ ನಿರ್ಬಂಧಿತ ಕ್ರಮಗಳನ್ನು ಸರಾಗಗೊಳಿಸಲು ಪ್ರಾರಂಭಿಸಿದಾಗ ಅಮೆರಿಕ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಹೆಚ್ಚುತ್ತಿದೆ.

ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಿಂದ ಆರ್ಥಿಕತೆ ಕುಸಿತವಾಗಿದೆ. ಆದರೆ, ಈಗಲೂ ಕೂಡಾ ಸಾಂಕ್ರಾಮಿಕ ರೋಗ ದೊಡ್ಡ ಬೆದರಿಕೆಯನ್ನು ನೀಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

ವಿಶ್ವ ಈಗ ಹೊಸ ಹಾಗೂ ಅಪಾಯಕಾರಿ ಹಂತದಲ್ಲಿದೆ. ಅನೇಕ ಜನರು ಮನೆಯಲ್ಲಿ ಅರ್ಥಮಾಡಿಕೊಂಡು ಮನೆಯಲ್ಲಿಯೇ ಇದ್ದಾರೆ. ಆದರೆ, ಈಗಲೂ ಕೂಡಾ ವೈರಸ್ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಹಲವಾರು ಪ್ರಯೋಗಗಳ ಹೊರತಾಗಿಯೂ ಇನ್ನೂ ಲಸಿಕೆ ಕಂಡುಹಿಡಿದಿಲ್ಲ. ಈ ಮಧ್ಯೆ ಸೋಂಕು ಗೊತ್ತಾಗುವ ಮೊದಲೇ ಹರಡುತ್ತಿದ್ದು, ವೈರಸ್ ನ ಲಕ್ಷಣಗಳ ಬಗ್ಗೆ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com