ಭಾರತ, ಚೀನಾ ಕಠಿಣ ಪರಿಸ್ಥಿತಿಯಲ್ಲಿವೆ, ನಾವು ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ:ಡೊನಾಲ್ಡ್ ಟ್ರಂಪ್

ಭಾರತ-ಚೀನಾ ಗಡಿ ಸಂಘರ್ಷವನ್ನು ಬಗೆಹರಿಸಲು ಅಮೆರಿಕ ಎರಡೂ ದೇಶಗಳೊಂದಿಗೆ ಮಾತುಕತೆಗೆ ಮುಂದಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ-ಚೀನಾ ಗಡಿ ಸಂಘರ್ಷವನ್ನು ಬಗೆಹರಿಸಲು ಅಮೆರಿಕ ಎರಡೂ ದೇಶಗಳೊಂದಿಗೆ ಮಾತುಕತೆಗೆ ಮುಂದಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕಳೆದ ಸೋಮವಾರ ರಾತ್ರಿ ಗಡಿಭಾಗದಲ್ಲಿ ಘರ್ಷಣೆ ನಡೆದು ಗಲ್ವಾನ್ ಕಣಿವೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದ ನಂತರ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗಿದೆ. ಚೀನಾದ ಸೈನಿಕರು ಸಹ ಸಾವಿಗೀಡಾದ ಬಗ್ಗೆ ವದಿಯಾಗಿದ್ದು ನಿಖರವಾಗಿ ಎಷ್ಟು ಮಂದಿ ಅಲ್ಲಿನ ಸೈನಿಕರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಇದು ಬಹಳ ಕಠಿಣ ಪರಿಸ್ಥಿತಿ, ನಾವು ಭಾರತ ಮತ್ತು ಚೀನಾದೊಂದಿಗೆ ಮಾತನಾಡುತ್ತಿದ್ದೇವೆ.ಗಡಿಯಲ್ಲಿ ಬಹಳ ಸಮಸ್ಯೆಯಾಗಿದೆ.ಮುಂದೆ ಏನಾಗುತ್ತದೆ ಎಂದು ನೋಡೋಣ, ಸಾಧ್ಯವಾದಷ್ಟು ಮಟ್ಟಿಗೆ ನಾವು ಸಹಾಯ ಮಾಡಲು ಮುಂದಾಗಿದ್ದೇವೆ ಎಂದು ಟ್ರಂಪ್ ನಿನ್ನೆ ಶ್ವೇತಭವನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com