ಕೊರೋನಾವೈರಸ್ 'ಕುಂಗ್ ಫ್ಲೂ': ಚೀನಾ ವಿರುದ್ಧ ಡೊನಾಲ್ಡ್ ಟ್ರಂಪ್ ವಾಗ್ದಾಳಿ 

ಜಗತ್ತಿನಾದ್ಯಂತ ನಾಲ್ಕೂವರೆ ಲಕ್ಷ ಜನರನ್ನು ಬಲಿ ಪಡೆದು ಸುಮಾರು 8.5 ಮಿಲಿಯನ್ ಗೂ ಹೆಚ್ಚು ಜನರಿಗೆ ತಗುಲಿರುವ ಮಾರಕ ಕೊರೋನಾವೈರಸ್ ನ್ನು 'ಕುಂಗ್ ಫ್ಲೂ' ಎಂದು ಕರೆದಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದರ ಹರಡುವಿಕೆಗೆ ಚೀನಾ ಕಾರಣ ಎಂದು ಮತ್ತೆ ದೂಷಿಸಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್:  ಜಗತ್ತಿನಾದ್ಯಂತ ನಾಲ್ಕೂವರೆ ಲಕ್ಷ ಜನರನ್ನು ಬಲಿ ಪಡೆದು ಸುಮಾರು 8.5 ಮಿಲಿಯನ್ ಗೂ ಹೆಚ್ಚು ಜನರಿಗೆ ತಗುಲಿರುವ ಮಾರಕ ಕೊರೋನಾವೈರಸ್ ನ್ನು 'ಕುಂಗ್ ಫ್ಲೂ' ಎಂದು ಕರೆದಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದರ ಹರಡುವಿಕೆಗೆ ಚೀನಾ ಕಾರಣ ಎಂದು ಮತ್ತೆ ದೂಷಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕೊರೋನಾವೈರಸ್ ಹುಟ್ಟಿಕೊಂಡಿದ್ದರಿಂದ ಚೀನಾವನ್ನು ಪದೇ ಪದೇ ದೂಷಿಸುತ್ತಿರುವ ಟ್ರಂಪ್, ವೈರಸ್ ತಡೆಗಟ್ಟುವಲ್ಲಿ ಚೀನಾದಿಂದ ಅಗತ್ಯ ಮಾಹಿತಿ ದೊರೆಯುತ್ತಿಲ್ಲ ಎಂದಿದ್ದಾರೆ. ವುಹಾನ್ ನಲ್ಲಿ ಕೊರೋನಾವೈರಸ್ ಹುಟ್ಟಿಕೊಂಡಿದ್ದರಿಂದ ಅದನ್ನು ವುಹಾನ್ ವೈರಸ್ ಅಂತಾ ಟ್ರಂಪ್ ಸರ್ಕಾರದ ಅಧಿಕಾರಿಗಳು ಬಣ್ಣಿಸಿದ್ದಾರೆ.

ಒಕ್ಲಹೋಮದ ತುಲ್ಸಾದಲ್ಲಿ ಮೊದಲ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಕೊರೋನಾವೈರಸ್ ನಂತಹ ಭೀಕರ ಕಾಯಿಲೆ ಇತಿಹಾಸದಲ್ಲಿ ಯಾವುದೇ ಇರಲಿಲ್ಲ. ಇದನ್ನು ಕುಂಗ್ ಫ್ಲೋ ಎಂದು ಕರೆಯುತ್ತೇನೆ.1 9 ವಿವಿಧ ಹೆಸರುಗಳನ್ನು ಇಡಬಹುದು, ಕೆಲವರು ವೈರಸ್ ಅಂತಾರೆ,  ಮತ್ತೆ ಕೆಲವರು ಫ್ಲೋ ಎಂದು ಕರೆಯುತ್ತಾರೆ. 19 ರಿಂದ 20 ಆವೃತ್ತಿಯ ಹೆಸರುಗಳಿರುವುದಾಗಿ ಅನ್ನಿಸುತ್ತಿದೆ ಎಂದು ಟ್ರಂಪ್ ಹೇಳಿದರು. 

ಕುಂಗ್ ಫೂ ಚೀನೀ ಸಮರ ಕಲೆಗಳನ್ನು ಸೂಚಿಸುತ್ತದೆ, ಇದರಲ್ಲಿ ಜನರು ತಮ್ಮ ಕೈ ಮತ್ತು ಕಾಲುಗಳನ್ನು ಮಾತ್ರ ಹೋರಾಡಲು ಬಳಸುತ್ತಾರೆ. ಜಾನ್ಸ್ ಹಾಪ್ ಕಿನ್ಸ್ ಕೊರೋನಾವೈರಸ್ ಸಂಶೋಧನಾ ಕೇಂದ್ರದ ಪ್ರಕಾರ, ವಿಶ್ವದಾದ್ಯಂತ 4 ಲಕ್ಷದ 50 ಸಾವಿರ ಜನರು ಕೊರೋನಾದಿಂದ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 8.5 ಮಿಲಿಯನ್ ಆಗಿದೆ. ಅಮೆರಿಕಾದಲ್ಲಿ  1 ಲಕ್ಷದ 19 ಸಾವಿರ ಜನರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 2.2 ಮಿಲಿಯನ್  ಆಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com