ವಿಶ್ವದಾದ್ಯಂತ ಕೊರೋನಾ ಆರ್ಭಟ: 90 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ, 4.46 ಲಕ್ಷ ಮಂದಿ ಸಾವು

ವಿಶ್ವದಾದ್ಯಂತ ಕೊರೋನಾ ಆರ್ಭಟ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ 90 ಲಕ್ಷ ಗಡಿ ದಾಟಿದೆ. ಅಲ್ಲದೆ. 4.46 ಲಕ್ಷ ಮಂದಿ ಬಲಿಯಾಗಿದ್ದಾರೆಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಿನಿವಾ: ವಿಶ್ವದಾದ್ಯಂತ ಕೊರೋನಾ ಆರ್ಭಟ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ 90 ಲಕ್ಷ ಗಡಿ ದಾಟಿದೆ. ಅಲ್ಲದೆ. 4.46 ಲಕ್ಷ ಮಂದಿ ಬಲಿಯಾಗಿದ್ದಾರೆಂದು ತಿಳಿದುಬಂದಿದೆ. 

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಒಂದೇ ದಿನ ಸಾರ್ವಕಾಲಿಕ ದಾಖಲೆ ಸಂಖ್ಯೆಯಲ್ಲಿ ಕೊರೋನಾ ವೈರಸ್ ಸೋಂಕಿತರು ಪತ್ತೆಯಾಗಿದ್ದು, 24 ಗಂಟೆಗಳಲ್ಲಿ 1,83,020 ಹೊಸ ಪ್ರಕರಣಗಳು ದೃಢವಾಗಿವೆ. ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 90 ಲಕ್ಷ ಗಡಿ ದಾಟಿದ್ದು, 4,468,436 ಮಂದಿ ಬಲಿಯಾಗಿದ್ದಾರೆ. 

ಅಮೇರಿಕಾದಲ್ಲಿ ಒಂದು ರಾಷ್ಟ್ರದಲ್ಲಿಯೇ 2,292,867 ಮಂದಿ ಸೋಂಕಿನಿಂದ ಬಳಲುತ್ತಿದ್ದು, 120,121 ಸಾವನ್ನಪ್ಪಿದ್ದಾರೆ. ಇನ್ನು ಬ್ರೆಜಿಲ್ ನಲ್ಲಿ 1,083,341 ಸೋಂಕಿನಿಂದ ಬಳಲುತ್ತಿದ್ದು, 50,591 ಸಾವನ್ನಪ್ಪಿದ್ದಾರೆ. 

ವಿಶ್ವದ ಸೋಂಕಿತ ರಾಷ್ಟ್ರಗಳ ಟಾಪ್ 10 ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿರುವ ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 591,465ಕ್ಕೆ ಏರಿಕೆಯಾಗಿದ್ದು, 8,196 ಮಂದಿ ಬಲಿಯಾಗಿದ್ದಾರೆ. ಇನ್ನು ಭಾರತದಲ್ಲಿ 425,282 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 13,699 ಮಂದಿ ಬಲಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com