ಭಾರತೀಯ ಟೆಕ್ಕಿಗಳಿಗೆ ಶಾಕ್'ಕೊಟ್ಟ ಅಮೆರಿಕಾ: ವಲಸಿಗರ ತಡೆಯಲು ಹೆಚ್-1ಬಿ ವೀಸಾ ತಾತ್ಕಾಲಿಕ ರದ್ದು

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೋನಾ ವೈರಸ್ ರುದ್ರತಾಂಡವಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಉದ್ಯೋಗಗಳಿಗೆ ಶಾಕ್ ಕೊಟ್ಟಿರುವ ಅಮೆರಿಕಾ ಹೆಚ್-1ಬಿ ವೀಸಾ ಈ ವರ್ಷಾಂತ್ಯದವರೆಗೆ ತಾತ್ಕಾಲಿಕವಾಗಿ ರದ್ದು ಮಾಡಿ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಮೆರಿಕಾ; ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೋನಾ ವೈರಸ್ ರುದ್ರತಾಂಡವಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಉದ್ಯೋಗಗಳಿಗೆ ಶಾಕ್ ಕೊಟ್ಟಿರುವ ಅಮೆರಿಕಾ ಹೆಚ್-1ಬಿ ವೀಸಾ ಈ ವರ್ಷಾಂತ್ಯದವರೆಗೆ ತಾತ್ಕಾಲಿಕವಾಗಿ ರದ್ದು ಮಾಡಿ ಆದೇಶ ಹೊರಡಿಸಿದೆ. 

ಕೊರೋನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ವಲಸಿಗರನ್ನು ತಾತ್ಕಾಲಿಕವಾಗಿ ತಡೆಯಲು ಅಮೆರಿಕಾ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. 

ಹೆಚ್-1ಬಿ ಉದ್ಯೋಗ ಆಧಾರಿತ ವೀಸಾ ಅಗಿದ್ದು, ಈ ವೀಸಾ ಅಡಿಯಲ್ಲಿ ಅಮೆರಿಕಾಗೆ ಉದ್ಯೋಗ ಅರಸಿ ಬರುವವರಿಗೆ ಈ ವರ್ಷಾಂತ್ಯದವರೆಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಹೀಗಾಗಿ ಭಾರತದಿಂದ ಈ ವೀಸಾದ ಅಡಿಯಲ್ಲಿ ಅಮೆರಿಕಾಗೆ ಉದ್ಯೋಗ ಹರಸಿ ತೆರಳುತ್ತಿದ್ದಂತಹ ಟೆಕ್ಕಿಗಳಿಗೆ ಶಾಕ್ ನೀಡಿದಂತಾಗಿದೆ. 

ಈ ಕಠಿಣ ನಿರ್ಧಾರದಿಂದ ಅಮೆರಿಕಾದಲ್ಲಿ 5.25,000 ಉದ್ಯೋಗಗಳು ಮುಕ್ತವಾಗಿವೆ ಎಂದು ಶ್ವೇತಭವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

2020ರ ಅವಧಿಯಲ್ಲಿ ಅಮೆರಿಕನ್ನರಿಗೆ ಉದ್ಯೋಗಗಳನ್ನು ಮುಕ್ತಗೊಳಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಫಲವಾಗಿ ಅಮೆರಿಕನ್ನರಿಗೆ ಸುಮಾರು 5.25 ಲಕ್ಷ ಉದ್ಯೋಗಗಳು ಮುಕ್ತವಾಗಿವೆ. 

ಟ್ರಂಪ್ ಅವರ ಘೋಷಣೆ ಪ್ರಕಾರ H-1B, H-4, H-2B ವೀಸಾ, ಜೆ ಮತ್ತು ಎಲ್ ವೀಸಾಗಳು ಸೇರಿದಂತೆ ಹಲವಾರು ಜನಪ್ರಿಯ ವಲಸೆರಹಿತ ವೀಸಾಗಳನ್ನು ಪ್ರಸಕ್ತ ವರ್ಷದ ಅಂತ್ಯದವರೆಗೂ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com