HCQಗಾಗಿ ದುಂಬಾಲು ಬಿದ್ದಿದ್ದ ಅಮೆರಿಕದಿಂದಲೂ ವೈದ್ಯಕೀಯ ಪ್ರಯೋಗ ಸ್ಥಗಿತ

ಮಾರಕ ಕೊರೋನಾ ವೈರಸ್ ನಿರ್ವಹಣೆಗಾಗಿ HCQ (ಹೈಡ್ರಾಕ್ಸಿಕ್ಲೋರೋಕ್ವಿನ್) ಮಾತ್ರೆಗಳನ್ನು ನೀಡುವಂತೆ ಭಾರತಕ್ಕೆ ದುಂಬಾಲು ಬಿದ್ದಿದ್ದ ಅಮೆರಿಕ ಕೂಡ HCQ ಮಾತ್ರೆಗಳ ವೈದ್ಯಕೀಯ ಪ್ರಯೋಗಗಳನ್ನು ಸ್ಥಗಿತಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ನಿರ್ವಹಣೆಗಾಗಿ HCQ (ಹೈಡ್ರಾಕ್ಸಿಕ್ಲೋರೋಕ್ವಿನ್) ಮಾತ್ರೆಗಳನ್ನು ನೀಡುವಂತೆ ಭಾರತಕ್ಕೆ ದುಂಬಾಲು ಬಿದ್ದಿದ್ದ ಅಮೆರಿಕ ಕೂಡ HCQ ಮಾತ್ರೆಗಳ ವೈದ್ಯಕೀಯ ಪ್ರಯೋಗಗಳನ್ನು ಸ್ಥಗಿತಗೊಳಿಸಿದೆ.

ಕೊರೋನಾ ವೈರಸ್ ನಿರ್ವಹಣೆಯಲ್ಲಿ HCQ ಮಾತ್ರೆಗಳಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಬೆನ್ನಲ್ಲೇ ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸಂಸ್ಥೆ ಕೂಡ HCQ ಮಾತ್ರೆಗಳ ವೈದ್ಯಕೀಯ ಪ್ರಯೋಗಗಳನ್ನು ಸ್ಥಗಿತಗೊಳಿಸಿದೆ. ಅಲ್ಲದೆ ಕೊರೋನಾ ವೈರಸ್ ನಿರ್ವಹಣೆಗಾಗಿ ಇತರೆ ಔಷಧಿ ಅಥವಾ ಇತರೆ ಮಾರ್ಗೋಪಾಯಗಳ ಶೋಧ ಮುಂದುವರೆಸುವಂತೆ ಸೂಚನೆ ನೀಡಿದೆ.

ಅತ್ತ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರೆ ದೇಶಗಳು ಕೊರೋನಾ ನಿರ್ವಹಣೆಯಲ್ಲಿ HCQ ಮಾತ್ರೆಗಳ ಬಳಕೆ ಸ್ಥಗಿತ ಮಾಡಿದ್ದರೂ, ಭಾರತದಲ್ಲಿ ಮಾತ್ರ ಈ ಮಾತ್ರಗೆಳ ಬಳಕೆ ಮುಂದುವರೆದಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com