ವಿಶ್ವಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 95 ಲಕ್ಷಕ್ಕೆ ಏರಿಕೆ, 4.8 ಲಕ್ಷ ಮಂದಿ ಸಾವು

ವಿಶ್ವದ 213ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ ಇದೀಗ 4.8 ಲಕ್ಷಕ್ಕೇರಿದೆ.
ಕೊರೋನಾ ರೋಗಿ
ಕೊರೋನಾ ರೋಗಿ

ವಾಷಿಂಗ್ಟನ್: ವಿಶ್ವದ 213ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ ಇದೀಗ 4.8 ಲಕ್ಷಕ್ಕೇರಿದೆ.

ಹೌದು.. ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ಕೋವಿಡ್–19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದುವರೆಗೆ ಮಹಾಮಾರಿಗೆ ಬಲಿಯಾದವರ ಸಂಖ್ಯೆ 4.8 ಲಕ್ಷಕ್ಕೇರಿದೆ. ಅಮೆರಿಕದ ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾ ಸಂಶೋಧನಾ ಕೇಂದ್ರ ವರದಿ ಮಾಡಿರುವಂತೆ ಈ ವರೆಗೂ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 95, 27,123ಕ್ಕೆ ಏರಿಕೆಯಾಗಿದೆ. 

ಸೋಂಕಿತರ ಸಂಖ್ಯೆ ಇದೇ ವೇಗದಲ್ಲಿ ಮುಂದುವರೆದರೆ ಇನ್ನು ಕೆಲವೇ ದಿನಗಳಲ್ಲಿ ಸೋಂಕಿತರ ಸಂಖ್ಯೆ 1 ಕೋಟಿ ದಾಟಲಿದೆ. ಇನ್ನು ಒಟ್ಟಾರೆ ಸೋಂಕಿತರಲ್ಲಿ 484,972 ಮಂದಿ ಮೃತಪಟ್ಟಿದ್ದು, ಇದುವರೆಗೆ ಒಟ್ಟು 5,175,404 ಸೋಂಕು ಪೀಡಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಅತೀಹೆಚ್ಚು (2,462,554) ಜನರಲ್ಲಿ ಸೋಂಕು ಕಾಣಿಸಿಕೊಂಡಿರುವ ಅಮೆರಿಕದಲ್ಲಿ ಈವರೆಗೆ ಒಟ್ಟು 124,281  ಮಂದಿ ಮೃತಪಟ್ಟಿದ್ದಾರೆ.1,040,605 ಮಂದಿ ಗುಣಮುಖರಾಗಿದ್ದಾರೆ. ಬ್ರೆಜಿಲ್‌ನಲ್ಲಿ 1,192,474ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 53,874  ಸೋಂಕಿತರು ಮೃತಪಟ್ಟು, 649,908 ಮಂದಿ ಗುಣಮುಖರಾಗಿದ್ದಾರೆ.

ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 606,881ಕ್ಕೆ ಏರಿದ್ದು, ಸಾವಿನ ಸಂಖ್ಯೆ 8,513 ಆಗಿದೆ. ಇಂಗ್ಲೆಂಡ್‌ನಲ್ಲಿ 43,081, ಇಟಲಿಯಲ್ಲಿ 34,644 ಮತ್ತು ಫ್ರಾನ್ಸ್‌ನಲ್ಲಿ 29,731ಜನರು ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com