ಮಹಾಮಾರಿ ಕೊರೋನಾಗೆ ಮಿಡತೆ ಮದ್ದು ಎಂದ ಪಾಕಿಸ್ತಾನ ಸಂಸದ!

ಕೊರೋನಾ ಸಾಂಕ್ರಾಮಿಕ ರೋಗದಿಂದ ಜಗತ್ತೆಲ್ಲಾ ಕಷ್ಟಕ್ಕೆ ಸ್ಲುಕಿರುವ ಈ ಸಮಯದಲ್ಲಿ  ಮಿಡತೆ ದಾಳಿ ಮತ್ತು ಕೊರೋನಾ ಸಮಸ್ಯೆಗಲನ್ನು ಒಟ್ಟಾಗಿ ಎದುರಿಸುತ್ತಿರುವ ಪಾಕಿಸ್ತಾನದ ಸಂಸದರೊಬ್ಬರು ಮಹಾಮಾರಿ ಕೊರೋನಾಗೆ ಹೊಸ ಔಷಧಿಯೊಂದನ್ನು ಹುಡುಕಿದ್ದಾರೆ! ಸಂಸದರು ಹೇಳಿದಂತೆ  ಮಿಡತೆಗಳನ್ನು ತಿನ್ನುವುದರಿಂದ  ಕೊರೋನಾವೈಅರ್ಸ್ ಮಹಾಮಾರಿಯಿಂದ ಗುಣಮುಖರಾಗಲು ಸಾಧ್ಯ. ಮಿಡತೆ ತಿಂದರೆ
ರಿಯಾಜ್ ಫತ್ಯಾನ
ರಿಯಾಜ್ ಫತ್ಯಾನ

ಲಾಹೋರ್: ಕೊರೋನಾ ಸಾಂಕ್ರಾಮಿಕ ರೋಗದಿಂದ ಜಗತ್ತೆಲ್ಲಾ ಕಷ್ಟಕ್ಕೆ ಸ್ಲುಕಿರುವ ಈ ಸಮಯದಲ್ಲಿ  ಮಿಡತೆ ದಾಳಿ ಮತ್ತು ಕೊರೋನಾ ಸಮಸ್ಯೆಗಲನ್ನು ಒಟ್ಟಾಗಿ ಎದುರಿಸುತ್ತಿರುವ ಪಾಕಿಸ್ತಾನದ ಸಂಸದರೊಬ್ಬರು ಮಹಾಮಾರಿ ಕೊರೋನಾಗೆ ಹೊಸ ಔಷಧಿಯೊಂದನ್ನು ಹುಡುಕಿದ್ದಾರೆ! ಸಂಸದರು ಹೇಳಿದಂತೆ  ಮಿಡತೆಗಳನ್ನು ತಿನ್ನುವುದರಿಂದ  ಕೊರೋನಾವೈಅರ್ಸ್ ಮಹಾಮಾರಿಯಿಂದ ಗುಣಮುಖರಾಗಲು ಸಾಧ್ಯ. ಮಿಡತೆ ತಿಂದರೆ ಕೊರೋನಾ ಸೋಂಕಿಗೆ ತುತ್ತಾಗಿರುವ ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಎಂದು ಸಂಸದರು ಹೇಳಿದ್ದಾರೆ.

ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖಂಡ ರಿಯಾಜ್ ಫತ್ಯಾನ ಹೀಗೆ ಕೊರೋನಾವೈರಸ್ ಗೆ ಮಿಡತೆ ಮದ್ದನ್ನು ಸಲಹೆ ನೀಡಿದ್ದ ಸಂಸದರಾಗ್ಗಿದ್ದಾರೆ. "ಮಿಡತೆಗಳನ್ನು ಸೇವಿಸುವುದರಿಂದ ಕೊರೋನಾವೈರಸ್ ಗುಣವಾಗಲಿದೆ. ಮಿಡತೆ ಸೇವನೆಯಿಂಡ ಕೊರೋನಾ ಪ್ರತಿಕಾಯಗಳು ಸೃಷ್ಟಿಯಾಗುವುದು ನಿಜವೆಂದು  ಸಾಬೀತಾದರೆ, ಪಾಕಿಸ್ತಾನದ ಜನರು ಸ್ವತಃ ಮಿಡತೆಗಳ ಸಮಸ್ಯೆ ಎದುರಿಸುತ್ತಿದ್ದು ಸರ್ಕಾರ ಇದಕ್ಕಿಂತ ಹೆಚ್ಚಿನದನ್ನು ಮಾಡಬೇಕಿಲ್ಲ" ಫತ್ಯಾನ ಸಂಸತ್ತಿನಲ್ಲಿ ಹೇಳಿದರು. 

ಈ ನಡುವೆ ಕಿಸ್ತಾನದ ಐಟಿ ಮತ್ತು ದೂರಸಂಪರ್ಕ ಸಚಿವ ಸೈಯದ್ ಅಮೀನುಲ್ ಹಕ್ ಅವರಿಗೆ ಕೊರೋನಾ ಸೋಂಕಿರುವುದು ದೃಢವಾಗಿದೆ.

ಇದಲ್ಲದೆ ಕಳೆದ 24 ಗಂಟೆಗಳಲ್ಲಿ 4,044 ಹೊಸ ಕೋವಿಡ್ ಪ್ರಕರಣಗಳು ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದು ಒಟ್ಟೂ ಪ್ರಕರಣಗಳ ಸಂಖ್ಯೆ 192,000 ದಾಟಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com