ವಾಷಿಂಗ್ಟನ್ ಡಿ.ಸಿ.ಗೆ ರಾಜ್ಯ ಸ್ಥಾನಮಾನ: ಮಸೂದೆ ಪರ ಮತ ಹಾಕಿದ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್

ಅಮೆರಿಕ ಸರ್ಕಾರದ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ ವಾಷಿಂಗ್ಟನ್ ಡಿ.ಸಿ ಗೆ ರಾಜ್ಯದ ಸ್ಥಾನಮಾನ ದೊರಕುವ ಐತಿಹಾಸಿಕ ಮಸೂದೆಯೊಂದಕ್ಕೆ ಸಹಿ ಹಾಕಿದೆ.
ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸಾಂದರ್ಭಿಕ ಚಿತ್ರ
ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಅಮೆರಿಕ ಸರ್ಕಾರದ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ ವಾಷಿಂಗ್ಟನ್ ಡಿ.ಸಿ ಗೆ ರಾಜ್ಯದ ಸ್ಥಾನಮಾನ ದೊರಕುವ ಐತಿಹಾಸಿಕ ಮಸೂದೆಯೊಂದಕ್ಕೆ ಸಹಿ ಹಾಕಿದೆ.

200 ವರ್ಷಗಳ ಹಿಂದೆ ರಚನೆಯಾದ ವಾಷಿಂಗ್ಟನ್ ಡಿ.ಸಿ ಗೆ ರಾಜ್ಯದ ಸ್ಥಾನಮಾನ ನೀಡುವ ಐತಿಹಾಸಿಕ ಮಸೂದೆ ಪರ ಡೆಮಾಕ್ರೆಟ್ ನೇತೃತ್ವದ ಹೌಸ್ ಆಫ್ ರೆಪ್ರೆಸೆಂಟೇಟಿವ್ ನಲ್ಲಿ 232-180ರ ಅಂತರದಲ್ಲಿ ಮತಗಳು ಬಿದ್ದವು ಎಂದು ಅಲ್ಲಿನ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ ನಲ್ಲಿ ಮಿನ್ನೆಸೊಟಾದ ಡೆಮಾಕ್ರಟ್ ಕೊಲ್ಲಿನ್ ಪೀಟರ್ಸನ್ ಮಾತ್ರ ಮಸೂದೆಯ ವಿರುದ್ಧವಾಗಿ ಮತ ಹಾಕಿದ್ದರು. ಹೌಸ್ ಆಫ್ ರಿಪಬ್ಲಿಕ್ ನಲ್ಲಿ ಎಲ್ಲಾ ಸದಸ್ಯರು ಈ ಮಸೂದೆಯನ್ನು ವಿರೋಧಿಸಿದರು. ಸ್ವತಂತ್ರ ಅಭ್ಯರ್ಥಿ ಮಿಚಿಗನ್ ನ ಜಸ್ಟಿನ್ ಅಮಶ್ ಕೂಡ ವಿರುದ್ಧವಾಗಿ ಮತ ಹಾಕಿದ್ದರು.

ಈ ಮಸೂದೆಯಿಂದ ಅಮೆರಿಕಾ ದೇಶದ ರಾಜಧಾನಿ ನಗರ ಕಿರಿದಾಗುತ್ತದೆ, ಶ್ವೇತಭವನ, ಕ್ಯಾಪಿಟಲ್ ಬಿಲ್ಡಿಂಗ್, ಸುಪ್ರೀಂ ಕೋರ್ಟ್ ಮತ್ತು ಇತರ ಫೆಡರಲ್ ಕಟ್ಟಡಗಳನ್ನು ಹೊಂದಿರುವ ವಾಷಿಂಗ್ಟನ್ ಡಿ.ಸಿಯ ಭವ್ಯ ಪರಂಪರೆ ರಾಜ್ಯದ ಸ್ಥಾನಮಾನದಿಂದ ಕಳೆದುಹೋಗುತ್ತದೆ ಎಂದು ಮಸೂದೆ ವಿರುದ್ಧವಾಗಿ ಮತ ಹಾಕಿದ ಎಲೀನರ್ ಹೋಮ್ಸ್ ನಾರ್ಟನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಮುಂದೆ ವಾಷಿಂಗ್ಟನ್ ಎಂದು ಕರೆಯಲಾಗುವ ಇದು ದೇಶದ 51ನೇ ರಾಜ್ಯವಾಗಲಿದೆ ಎಂದು ಮಸೂದೆ ಹೇಳುತ್ತದೆ. ರಾಜ್ಯದ ಸ್ಥಾನಮಾನ ಸಿಕ್ಕಿದರೆ ಇಲ್ಲಿಗೆ ಇಬ್ಬರು ಸೆನೆಟರ್ ಗಳು ಮತ್ತು ಸದನದ ಪ್ರತಿನಿಧಿಗಳು ಮತಹಾಕುವ ಸದಸ್ಯರೆನಿಸಿಕೊಳ್ಳುತ್ತಾರೆ.

ರಿಪಬ್ಲಿಕನ್ ಪಕ್ಷ ವಿರೋಧ: ಡೆಮಾಕ್ರಟಿಕ್ ಸದಸ್ಯರು ಅಧಿಕಾರಕ್ಕಾಗಿ ನಡೆಸುತ್ತಿರುವ ಕುತಂತ್ರವಿದು ಎಂದು ಆರೋಪಿಸಿರುವ ರಿಪಬ್ಲಿಕನ್ ಸದಸ್ಯರು ಅಮೆರಿಕ ರಾಜಧಾನಿ ನಗರದ ಜನತೆಗೆ ಇದರಿಂದ ಸಮಸ್ಯೆಯಾಗಲಿದೆ ಎನ್ನುತ್ತಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು ವಿರೋಧಿಸುತ್ತಲೇ ಬಂದಿದ್ದರು. ಕಳೆದ ತಿಂಗಳು ನ್ಯೂಯಾರ್ಕ್ ಪೋಸ್ಟ್ ಗೆ ನೀಡಿದ್ದ ಸಂದರ್ಶನದಲ್ಲಿ ವಾಷಿಂಗ್ಟನ್ ಡಿ ಸಿ ಯಾವತ್ತೂ ರಾಜ್ಯವಾಗಲು ಸಾಧ್ಯವಿಲ್ಲ ಎಂದಿದ್ದರು.

ಅಮೆರಿಕ ಸೆನೆಟ್ ನಲ್ಲಿ ಇದು ಅಂಗೀಕಾರಗೊಳ್ಳುವ ಸಾಧ್ಯತೆಯಿಲ್ಲ. ಮಸೂದೆ ತಮ್ಮ ಬಳಿ ಬಂದರೆ ತಿರಸ್ಕರಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com