ಜಾಗತಿಕವಾಗಿ 9.6 ಮಿಲಿಯನ್ ಗಡಿ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ 

ಜಾಗತಿಕವಾಗಿ ಹೊಸದಾಗಿ 1,79, 000ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ದೃಢಪಟ್ಟ ನಂತರ ಸೋಂಕಿತರ ಸಂಖ್ಯೆ 9.6 ಮಿಲಿಯನ್ ಗಡಿಯನ್ನು ದಾಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಿನಿವಾ: ಜಾಗತಿಕವಾಗಿ ಹೊಸದಾಗಿ 1,79, 000ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ದೃಢಪಟ್ಟ ನಂತರ ಸೋಂಕಿತರ ಸಂಖ್ಯೆ 9.6 ಮಿಲಿಯನ್ ಗಡಿಯನ್ನು ದಾಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆ ದೈನಂದಿನ ಮಾಹಿತಿ ಪ್ರಕಾರ, ಶುಕ್ರವಾರ 1,77, 012 ಹೊಸ ಪ್ರಕರಣಗಳು ವರದಿಯಾಗಿದ್ದರೆ ಶನಿವಾರ 1 ಲಕ್ಷದ 79 ಸಾವಿರದ 316 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಅಮೆರಿಕಾದಲ್ಲಿ 40 ಸಾವಿರದ 526, ಬ್ರೆಜಿಲ್ ನಲ್ಲಿ 39, 483, ಪ್ರಕರಣಗಳು ಪತ್ತೆಯಾಗಿದ್ದು, ಜಾಗತಿಕವಾಗಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ 9. 65 ಮಿಲಿಯನ್ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. 

ಕಳೆದ 24 ಗಂಟೆಗಳಲ್ಲಿ 6866 ಮಂದಿ ಸಾವನ್ನಪ್ಪಿದ್ದು, ಜಾಗತಿಕವಾಗಿ ಒಟ್ಟು ಸಾವಿನ ಸಂಖ್ಯೆ 4 ಲಕ್ಷದ 91 ಸಾವಿರದ 128 ಆಗಿದೆ. ಅಮೆರಿಕಾದಲ್ಲಿ ತೀವ್ರ ರೀತಿಯ ಪರಿಣಾಮ ಆಗಿದ್ದು, ಒಟ್ಟಾರೇ ಸಾವಿನ ಸಂಖ್ಯೆಯಲ್ಲಿ  ಶೇ. 74.8 ರಷ್ಟು ಅಮೆರಿಕದವರೇ ಆಗಿದ್ದಾರೆ ಎಂದು ಡಬ್ಲ್ಯೂಎಚ್ ಒ ಹೇಳಿದೆ.

ಮುಂದಿನ ವಾರದಲ್ಲಿ ಜಾಗತಿಕವಾಗಿ ಸೋಂಕಿತರ ಸಂಖ್ಯೆ 10 ಮಿಲಿಯನ್ ದಾಟುವ ನಿರೀಕ್ಷೆ ಹೊಂದಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಬುಧವಾರ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com