ಲಡಾಖ್ ಗಡಿ ಸಂಘರ್ಷ: ಸಾವು-ನೋವಿನ ಮಾಹಿತಿ ನೀಡದ ಚೀನಾ, ಮೃತ ಯೋಧರ ಕುಟುಂಬಸ್ಥರಲ್ಲಿ ಮಡುಗಟ್ಟಿದ್ದ ಆಕ್ರೋಶ

ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತದೊಂದಿಗೆ ಮುಖಾಮುಖಿ ಘರ್ಷಣೆಯಲ್ಲಿ ಅಪಾರ ಪ್ರಮಾಣದ ಸಾವು ನೋವು ಆಗಿದ್ದರೂ ಈ ಘಟನೆಯಲ್ಲಿ ಎಷ್ಟು ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಚೀನಾ ದೇಶ ಯಾವುದೇ ಮಾಹಿತಿ ನೀಡಿಲ್ಲ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತದೊಂದಿಗೆ ಮುಖಾಮುಖಿ ಘರ್ಷಣೆಯಲ್ಲಿ ಅಪಾರ ಪ್ರಮಾಣದ ಸಾವು ನೋವು ಆಗಿದ್ದರೂ ಈ ಘಟನೆಯಲ್ಲಿ ಎಷ್ಟು ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಚೀನಾ ದೇಶ ಯಾವುದೇ ಮಾಹಿತಿ ನೀಡಿಲ್ಲ.

ಚೀನಾದ ಆಡಳಿತರೂಢ ಕಮ್ಯೂನಿಸ್ಟ್ ಪಕ್ಷದ ಈ ನಿರ್ಧಾರದ ಬಗ್ಗೆ ಗಡಿ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಸೇನಾಪಡೆಗಳ ಕುಟುಂಬದವರಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ ಎಂದು ಅಮೆರಿಕ ಮೂಲಕ ಬ್ರೀಟ್‌ಬಾರ್ಟ್ ನ್ಯೂಸ್ ವರದಿ ಮಾಡಿದೆ.

ವೀಬೊ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಸಂಘರ್ಘದಲ್ಲಿ ಮೃತರಾದ ಚೀನಾ ಸೈನಿಕರ ಕುಟುಂಬದವರು ಕೋಪ,ಹತಾಶೆಯನ್ನು ಹೊರಹಾಕುತ್ತಿದ್ದಾರೆ.ಅವರನ್ನು ಸಂತೈಸಲು ಚೀನಾ ಸರ್ಕಾರ ಹೆಣಗಾಡುತ್ತಿದೆ ಎಂದು ಬ್ರೀಟ್ ಬಾರ್ಟ್ ಹೇಳಿದೆ. 

ಜೂನ್ 15 ರಂದು ನಡೆದ ಸಂಘರ್ಷದಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತ ಸರ್ಕಾರ ಬಹಿರಂಗವಾಗಿ ಹೇಳಿಕೊಂಡಿದೆ.ಆದರೆ, ಈವರೆಗೆ ಕೆಲವೇ ಕೆಲವು ಅಧಿಕಾರಿಗಳ ಸಾವನ್ನು ಚೀನಾ ಸರ್ಕಾರ ಒಪ್ಪಿಕೊಂಡಿದೆ.

ಚೀನಾದ 43 ಮಂದಿ ಸೈನಿಕರು ಮೃತಪಟ್ಟು ಹಲವು ಮಂದಿ ಗಾಯಗೊಂಡಿರುವುದಾಗಿ ಭಾರತ ಸರ್ಕಾರದ ಹಾಲಿ ಸಚಿವ ಜನರಲ್ ವಿಕೆ ಸಿಂಗ್ ಇತ್ತೀಚಿಗೆ ಹೇಳಿಕೆ ನೀಡಿದ್ದರು. 

ಚೀನಾ ಸಾವಿಗೀಡಾದವರ ಬಗ್ಗೆ ಮೌನ ವಹಿಸಿದ್ದರೂ ಲಡಾಖ್ ನಲ್ಲಿ ಭಾರತದೊಂದಿಗೆ ನಡೆದ ಘರ್ಷಣೆಯಲ್ಲಿ ಚೀನಾದ ಕಡೆಯವರಿಗೂ ಹಾನಿಯಾಗಿದೆ ಎಂದು ಚೀನಾದ ಬ್ರೀಟ್ ಬಾರ್ಟ್ ಪ್ರಧಾನ ಸಂಪಾದಕ ಹು ಕ್ಸಿ ಜಿಂಗ್ ಟ್ವೀಟ್ ಮಾಡಿದ್ದಾರೆ. ಘರ್ಷಣೆಯಲ್ಲಿ ಮೃತರಾದ ಅನೇಕ ಯೋಧರ ಕುಟುಂಬದವರು ವಿಬೊ ಮತ್ತಿತರ ಕಡೆಗಳಲ್ಲಿ ಸರ್ಕಾರದ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಅನೇಕ ವರದಿಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com