ಜಾಗತಿಕವಾಗಿ ಹರಡಿದ ಕೊರೋನಾ ವೈರಸ್: ಸಾವಿನ ಸಂಖ್ಯೆ 3,000ಕ್ಕೆ ಎರಿಕೆ

ಕೊರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ವೈರಸ್'ಗೆ ಚೀನಾದಲ್ಲಿ ಇದೀಗ ಮತ್ತೆ 42 ಮಂದಿ ಬಲಿಯಾಗಿದ್ದು, ಈ ಮೂಲಕ ಜಾಗತಿಕವಾಗಿ ವೈರಸ್ ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 3,000ಕ್ಕೆ ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಕೊರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ವೈರಸ್'ಗೆ ಚೀನಾದಲ್ಲಿ ಇದೀಗ ಮತ್ತೆ 42 ಮಂದಿ ಬಲಿಯಾಗಿದ್ದು, ಈ ಮೂಲಕ ಜಾಗತಿಕವಾಗಿ ವೈರಸ್ ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 3,000ಕ್ಕೆ ಏರಿಕೆಯಾಗಿದೆ. 

ಚೀನಾ ರಾಷ್ಟ್ರ ಒಂದರಲ್ಲಿಯೇ ವೈರಾಣುವಿಗೆ 2,912 ಮಂದಿ ಬಲಿಯಾಗಿದ್ದಾರೆಂದು ಚೀನಾದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಆದರೆ, ಸೋಂಕಿತ ಸಂಖ್ಯೆ ಇಳಿಮುಖವಾಗಿದ್ದು, ಹುಬೆ ಪ್ರಾಂತ್ಯದಲ್ಲಿ 6 ಮಂದಿಯಲ್ಲಿ ವೈರಾಣು ಇರುವುದು ದೃಢಪಟ್ಟಿದೆ. 

ಈ ನಡುವೆ ವೈರಸ್ ಜಾಗತಿಕವಾಗಿ ಭೀತಿ ಹುಟ್ಟಿಸುತ್ತಿದ್ದು, 60 ದೇಶಗಳಲ್ಲಿನ ಪ್ರಜೆಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. 

ಅಮೆರಿಕಾ, ಆಸ್ಟ್ರೇಲಿಯಾ, ಇಟಲಿ ಹಾಗೂ ಯೂರೋಪ್ ರಾಷ್ಟ್ರಗಳಲ್ಲೂ ವೈರಾಣೂ ಪತ್ತೆಯಾಗಿದೆ. 60ರ ವಯಸ್ಸಿನ ನಂತಹ ವ್ಯಕ್ತಿಗಳಲ್ಲಿ, ಅನಾರೋಗ್ಯ ಪೀಡಿತರಲ್ಲಿ ವೈರಾಣು ಹೆಚ್ಚು ಪತ್ತೆಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ

ಕೊರೋನಾ ವೈರಸ್ ವೊದು ಜಾತಿಯ ವೈರಸ್ ಆಗಿದೆ. ಸೂಕ್ಷ್ಮ ದರ್ಶಕದಲ್ಲಿ ಇದು ಕಿರೀಟ ರೀತಿ ಕಾಣಿಸುತ್ತದೆ. ಲ್ಯಾಟಿನ್ ಭಾಷೆಯಲ್ಲಿ ಕೊರೋನಾ ಎಂದರೆ ಕಿರೀಟ ಎಂದರ್ಥ. ಹೀಗಾಗಿ ವೈರಸ್'ಗೆ ಕೊರೋನಾ ಹೆಸರು. ಚೀನಾದ ವುಹಾನ್ ನಗರದಲ್ಲಿನ ಅಕ್ರಮ ವನ್ಯ ಜೀವಿ ಮಾಂಸ ಕೇಂದ್ರದ ಮೂಲಕ ಮಾನವರಿಗೆ ವೈರಸ್ ತಗುಲಿದೆ. ವೈರಸ್ ಒಂಟೆ, ಬೆಕ್ಕು, ಬಾವಲಿ ಸೇರಿದಂತೆ ಹಲವಾರು ಪ್ರಾಣಿಗಳಲ್ಲೂ ಪ್ರವೇಶಿಸುತ್ತಿದೆ. ಪ್ರಾಣಿಗಳ ದೇಹ ಸೇರಿದ ಈ ವೈರಸ್ ಅಪರೂಪ ಎಂಬಂತೆ ಮನುಷ್ಯರ ದೇಹವನ್ನೂ ಸೇರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com