ನಿಯಮಗಳ ಬದಲಾವಣೆ: ಭಾರತೀಯ ವಿದ್ಯಾರ್ಥಿಗಳ ಯು.ಕೆ ವೀಸಾ ಅನುಮೋದನೆ ಶೇ.93 ರಷ್ಟು ಏರಿಕೆ! 

ನಿಯಮಗಳ ಬದಲಾವಣೆಯಾದ ನಂತರ ಬ್ರಿಟನ್ ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ವೀಸಾ ಅನುಮೋದನೆ ಶೇ.93 ರಷ್ಟು ಏರಿಕೆಯಾಗಿದೆ. 

ಬ್ರಿಟನ್ ನ ವಲಸೆ ಇಲಾಖೆ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ ಬ್ರಿಟನ್ ನ ವಿದ್ಯಾರ್ಥಿಗಳಿಗೆ ಟೈರ್ 4 ವೀಸಾದ ನಿಯಮಗಳನ್ನು ಸಡಿಲಿಕೆ ಮಾಡಿದ ನಂತರ ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾಗಿರುವ ವೀಸಾ ಅನುಮೋದನೆ ಶೇ.93 ರಷ್ಟು ಅಂದರೆ 19.497 ರಿಂದ 37,540 ಕ್ಕೆ ಏರಿಕೆ ಕಂಡಿದೆ. ಕಳೆದ ಸಪ್ಟೆಂಬರ್ ನಲ್ಲಿ ಬ್ರಿಟನ್ ಸರ್ಕಾರ ಟೈರ್ 4 ವೀಸಾ ನಿಯಮಗಳನ್ನು ಬದಲಾವಣೆ ಮಾಡಿತ್ತು. 

ಭಾರತವಷ್ಟೇ ಅಲ್ಲದೇ ಬ್ರಿಟನ್ ನಲ್ಲಿ ಚೀನಾ, ಅಮೆರಿಕ, ಸೌದಿ ಅರೇಬಿಯಾ, ಹಾಂಕ್ ಕಾಂಗ್ ನ ವಿದ್ಯಾರ್ಥಿಗಳು ಗಣನೀಯವಾಗಿ ಇದ್ದಾರೆ. 

ಈ ಅಂಕಿ-ಅಂಶಗಳ ಬಗ್ಗೆ ಭಾರತದಲ್ಲಿರುವ ಬ್ರಿಟನ್ ನ ಹೈಕಮಿಷನರ್ ಜಾನ್ ಥಾಂಪ್ಸನ್ ವಿದ್ಯಾರ್ಥಿ ವೀಸಾ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಬ್ರಿಟನ್ ನ ವಿಶ್ವದ ಪ್ರಮುಖ ಶಿಕ್ಷಣ ವ್ಯವಸ್ಥೆ ಹಾಗೂ ಭಾರತೀಯ ವಿದ್ಯಾರ್ಥಿಗಳ ಅಸಾಧಾರಣ ಪ್ರತಿಭೆಗೆ ನಿದರ್ಶನ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com