ಶಾಂತಿ ಒಪ್ಪಂದ ಕಡಿದುಕೊಂಡ ತಾಲಿಬಾನ್: ಮತ್ತೆ ಅಫ್ಘಾನ್ ಸೇನೆ ವಿರುದ್ಧ ಹೋರಾಟಕ್ಕೆ ಘೋಷಣೆ

ಅಮೆರಿಕಾ ಮತ್ತು ತಾಲಿಬಾನ್ ಮಧ್ಯೆ 19 ವರ್ಷಗಳ ಹಗೆತನ ಬಿಟ್ಟು ಶಾಂತಿ ಒಪ್ಪಂದ ಏರ್ಪಟ್ಟ ಎರಡು ದಿನಗಳು ಕಳೆಯುವ ಮುನ್ನವೇ ಒಪ್ಪಂದ ಮುರಿದುಬಿದ್ದಿದೆ. ಅಫ್ಘಾನಿಸ್ತಾನ ಸೇನೆ ವಿರುದ್ಧ ಆಕ್ರಮಣವನ್ನು ಮುಂದುವರೆಸುವುದಾಗಿ ತಾಲಿಬಾನ್ ಘೋಷಣೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬೂಲ್: ಅಮೆರಿಕಾ ಮತ್ತು ತಾಲಿಬಾನ್ ಮಧ್ಯೆ 19 ವರ್ಷಗಳ ಹಗೆತನ ಬಿಟ್ಟು ಶಾಂತಿ ಒಪ್ಪಂದ ಏರ್ಪಟ್ಟ ಎರಡು ದಿನಗಳು ಕಳೆಯುವ ಮುನ್ನವೇ ಒಪ್ಪಂದ ಮುರಿದುಬಿದ್ದಿದೆ. ಅಫ್ಘಾನಿಸ್ತಾನ ಸೇನೆ ವಿರುದ್ಧ ಆಕ್ರಮಣವನ್ನು ಮುಂದುವರೆಸುವುದಾಗಿ ತಾಲಿಬಾನ್ ಘೋಷಣೆ ಮಾಡಿದೆ. 

ಅಮೆರಿಕಾ ಮತ್ತು ತಾಲಿಬಾನ್ ಒಪ್ಪಂದದಂತತೆ ತಮ್ಮ ಮುಜಾಹಿದ್ದೀನ್ ಗಳು ವಿದೇಶಿ ಪಡೆಗಳ ಮೇಲೆ ದಾಳಿ ನಡೆಸುವಂತಿಲ್ಲ. ಆದರೆ, ಕಾಬೂಲ್ ಸರ್ಕಾರದ ವಿರುದ್ಧ ತಮ್ಮ ಹೋರಾಟ ಎಂದಿನಂತೆಯೇ ಮುಂದುವರಿಯಲಿದೆ ಎಂದು ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್ದೀನ್ ಹೇಳಿದ್ದಾನೆ. 

ಅಮೆರಿಕಾ ಮತ್ತು ತಾಲಿಬಾನ್ ನಡುವೆ ಷರತ್ತು ಬದ್ಧ ಶಾಂತಿ ಒಪ್ಪಂದ ಏರ್ಪಟ್ಟ ಬೆನ್ನಲ್ಲೇ ಮಾ.10 ರಂದು ತಾಲಿನ್ ಮತ್ತು ಆಫ್ಘಾನಿಸ್ತಾನ ಅಧಿಕಾರಿಗಳ ಮಧ್ಯೆ ಮಾತುಕತೆ ನಡೆದಿತ್ತು. ಆದರೆ, ಯಾವುದೇ ಕಾರಣಕ್ಕೂ ತನ್ನ ಜೈಲುಗಳಲ್ಲಿರುವ ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಬಹಿರಂಗವಾಗಿಯೇ ಹೇಳಿದ್ದರು. 

ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ನಾವು ಅಮೆರಿಕಾಗೆ ಭರವಸೆ ನೀಡಿರಲಿಲ್ಲ. ಮಾತುಕತೆ ನಡೆಯುವ ಮುನ್ನ ಕೈದಿಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ಹೇಳಿಕೆ ಒಪ್ಪಂದ ಮುರಿದು ಬೀಳಲು ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. 

ಮಾ.10ರಂದು ನಾರ್ವೇ ರಾಜಧಾನಿ ಓಸ್ಲೋದಲ್ಲಿ ನಡೆಯುವ ಅಫ್ಘನ್ ಬಣಗಳ ನಡುವೆ ನಡೆಯುವ ಸಭೆಗೂ ಮುನ್ನ ಅಫ್ಘಾನಿಸ್ತಾನದಲ್ಲಿರುವ 5000 ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಶನಿವಾರ ಮಾಡಿಕೊಳ್ಳಲಾದ ಒಪ್ಪಂದದಲ್ಲಿ ಹೇಳಲಾಗಿತ್ತು. ಅಲ್ಲದೆ, ಈ ಒಪ್ಪಂದದಂತೆ ಅಮೆರಿಕಾ ನೇತೃತ್ವದ ವಿದೇಶಿ ಪಡೆಗಳು 14 ತಿಂಗಳ ಒಳಗಾಗಿ ಅಫ್ಘಾನಿಸ್ತಾನದಿಂದ ಹೊರ ನಡೆಯಬೇಕಿದೆ. ಇದಕ್ಕೆ ಪ್ರತಿಯಾಗಿ ಉಗ್ರವಾದ ನಿಗ್ರಹಿಸುವ ಮತ್ತು ಶಾಂತಿ ಮರುಕಳಿಸುವ ನಿಟ್ಟಿನಲ್ಲಿ ಅಫ್ಘಾನಿಸ್ತಾನ ಸರ್ಕಾರದ ಜೊತೆ ತಾಲಿಬಾನ್ ಬಂಡುಕೋರರು ಮಾತುಕತೆ ನಡೆಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಇದೀಗ ನಮ್ಮ ಒಪ್ಪಂದ ಏನಿದ್ದರೂ ಅಮೆರಿಕಾದ ಜೊತೆಗೆ, ಸರ್ಕಾರದ ಜೊತೆಗೆ ಅಲ್ಲ ಎಂದು ತಾಲಿಬಾನ್ ಪ್ರತಿಪಾದಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com