ದೆಹಲಿ ಹಿಂಸಾಚಾರಕ್ಕೆ ಇರಾನ್ ತೀವ್ರ ಖಂಡನೆ

ದೆಹಲಿ ಹಿಂಸಾಚಾರಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಇರಾನ್, ಪ್ರಜ್ಞಾಹೀನ ಹಿಂಸಾಚಾರಕ್ಕೆ ದಾರಿಮಾಡಿಕೊಡಲೆ ನಾಗರೀಕರ ಯೋಗಕ್ಷೇಮ ಖಾತ್ರಿಪಡಿಸಿಕೊಳ್ಳುವಂತೆ ಭಾರತಕ್ಕೆ ಒತ್ತಾಯಿಸಿದೆ. 
ಇರಾನ್ ರಾಷ್ಟ್ರದ ವಿದೇಶಾಂಗ ಸಚಿವ ಜವೇದ್ ಝರೀಫ್
ಇರಾನ್ ರಾಷ್ಟ್ರದ ವಿದೇಶಾಂಗ ಸಚಿವ ಜವೇದ್ ಝರೀಫ್

ಟೆಹ್ರಾನ್: ದೆಹಲಿ ಹಿಂಸಾಚಾರಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಇರಾನ್, ಪ್ರಜ್ಞಾಹೀನ ಹಿಂಸಾಚಾರಕ್ಕೆ ದಾರಿಮಾಡಿಕೊಡಲೆ ನಾಗರೀಕರ ಯೋಗಕ್ಷೇಮ ಖಾತ್ರಿಪಡಿಸಿಕೊಳ್ಳುವಂತೆ ಭಾರತಕ್ಕೆ ಒತ್ತಾಯಿಸಿದೆ. 

ದೆಹಲಿ ಹಿಂಸಾಚಾರ ಕುರಿತಂತ ಪ್ರತಿಕ್ರಿಯೆ ನೀಡಿರುವ ಇರಾನ್ ರಾಷ್ಟ್ರದ ವಿದೇಶಾಂಗ ಸಚಿವ ಜವೇದ್ ಝರೀಫ್ ಅವರು, ಭಾರತೀಯ ಮುಸ್ಲಿಮರ ವಿರುದ್ಧ ನಡೆದ ಹಿಂಸಾಚಾರಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸುತ್ತೇವೆ. ಹಲವು ಶತಮಾನಗಳಿಂದ ಇರಾನ್ ಭಾರತಕ್ಕೆ ಸ್ನೇಹ ರಾಷ್ಟ್ರವಾಗಿದೆ. ಹೀಗಾಗಿ ಪ್ರಜ್ಞಾಹೀನ ಹಿಂಸಾಚಾರಕ್ಕೆ ದಾರಿಮಾಡಿಕೊಡದೆ ನಾಗರೀಕರ ಯೋಗಕ್ಷೇಮ ಖಾತ್ರಿಪಡಿಸಿಕೊಳ್ಳುವಂತೆ ಭಾರತಕ್ಕೆ ಒತ್ತಾಯಿಸುತ್ತೇವೆಂದು ಟ್ವೀಟ್ ಮಾಡಿದ್ದಾರೆ. 

ಈ ನಡುವೆ ಹೇಳಿಕೆ ನೀಡಿರುವ ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು, ಹಿಂಸಾಚಾರ ಹತ್ತಿಕ್ಕಲು ಕಾನೂನು ಸುವ್ಯವಸ್ಥೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಮತ್ತೆ ಶಾಂತಿ ಸ್ಥಾಪನೆಗೊಳ್ಳುವ ವಿಸ್ವಾಸವಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಅಂತರಾಷ್ಟ್ರೀಯ ಸಂಸ್ಥೆಗಲು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬಾರದು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com