ನೀರು ಹಾಕಿ ಪೋಷಿಸುತ್ತಿದ್ದ ಗಿಡ ಪ್ಲಾಸ್ಟಿಕ್ ಅಂತ ತಿಳಿಯೋಕೆ ಈ ಪುಣ್ಯಾತ್ಗಿತ್ತಿಗೆ 2 ವರ್ಷ ಬೇಕಾಯ್ತು! 

ತಾನು ಅತ್ಯಂತ ಪ್ರೀತಿಯಿಂದ ನೀರು ಹಾಕಿ ಪೋಷಿಸುತ್ತಿದ್ದ ಗಿಡ ನಕಲಿ, ಪ್ಲಾಸ್ಟಿಕ್ ನಿಂದ ಮಾಡಲ್ಪಟ್ಟಿದ್ದು ಎಂಬುದನ್ನು ಅರಿಯುವುದಕ್ಕೆ ಅಮೆರಿಕದ ಮಹಿಳೆಯೊಬ್ಬರಿಗೆ ಬರೊಬ್ಬರಿ 2 ವರ್ಷಗಳಾಗಿವೆ. 

ಕ್ಯಾಲಿ ವಿಲ್ಕ್ಸ್ ಎಂಬ ಮಹಿಳೆ ಈ ಬಗ್ಗೆ ಬರೆದುಕೊಂಡಿರುವ ಫೇಸ್ ಬುಕ್ ಪೋಸ್ಟ್ ವೈರಲ್ ಆಗತೊಡಗಿದೆ. 2 ವರ್ಷಗಳ ಹಿಂದೆ ಖರೀದಿಸಿದ್ದ ಪ್ಲಾಸ್ಟಿಕ್ ಗಿಡ ನಿಜವಾದ ಗಿಡದ ತದ್ರೂಪದಂತೆಯೇ ಇತ್ತು. ಅದನ್ನು ಅಡುಗೆ ಮನೆಯ ಕಿಟಕಿ ಬಳಿ ಇಟ್ಟಿದ್ದ ಮಹಿಳೆ  2 ವರ್ಷಗಳ ಕಾಲ ಅಕ್ಕರೆಯಿಂದ ಪೋಷಿಸುತ್ತಿದ್ದರು. 

ಖರೀದಿಸಿದಾಗ ಗಿಡದ ಜೊತೆಗೇ ನೀಡಿದ್ದ ಪ್ಲಾಸ್ಟಿಕ್ ಪಾಟ್ ನ್ನು ಬದಲಾವಣೆ ಮಾಡಲು ಹೋದಾಗ ಗಿಡವೂ ಪ್ಲಾಸ್ಟಿಕ್ ನಿಂದಲೆ ಮಾಡಲ್ಪಟ್ಟಿದೆ ಎಂಬುದು ಅರಿವಿಗೆ ಬಂದಿದೆ. 

ಈ ಬಗ್ಗೆ ಮಹಿಳೆ ಅಪ್ಡೇಟ್ ಮಾಡಿರುವ ಫೇಸ್ ಬುಕ್ ಪೋಸ್ಟ್ ಗಳಿಗೆ ಇಂಥಹದ್ದೇ ಅನುಭವಗಳು ತಮಗೂ ಆಗಿವೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.  ಫೇಸ್ ಬುಕ್ ಪೋಸ್ಟ್ ವೈರಲ್ ಆಗತೊಡಗಿದ್ದು ಈ ವರೆಗೂ 5,300 ಜನರು ಲೈಕ್ ಮಾಡಿದ್ದಾರೆ.  
 
ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com