32 ಮಂದಿ ಬಲಿ ಪಡೆದ ಕಾಬುಲ್ ಉಗ್ರರ ದಾಳಿ: ಭಾರತ ತೀವ್ರ ಖಂಡನೆ

ಅಫ್ಘಾನಿಸ್ತಾನದ ಕಾಬುಲ್ ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 32 ಮಂದಿ ಬಲಿಯಾಗಿದ್ದು, ದಾಳಿಗೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಫ್ಘಾನಿಸ್ತಾನದ ಕಾಬುಲ್ ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 32 ಮಂದಿ ಬಲಿಯಾಗಿದ್ದು, ದಾಳಿಗೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. 

ದಾಳಿ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯ, ಭಯೋತ್ಪಾದನೆ ವಿರುದ್ಧ ಅಂತರಾಷ್ಟ್ರೀಯ ಸಮುದಾಯ ಒಗ್ಗೂಡಬೇಕು.  ಹಾಗೂ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವವನ್ನು ಗಣನೆಗೆ ತೆಗೆದುಕೊಂಡು ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿದೆ. 

ಕಾಬುಲ್'ನ ಶಹೀದ್ ಮಜಾರಿ ಅವರನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ನಡೆದಿರುವ ಭೀಕರ ಉಗ್ರರ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ. ಕಾರ್ಯಕ್ರಮದಲ್ಲಿ ಹಲವಾರು ಹಿರಿಯ ರಾಜಕೀಯ ನಾಯಕರಿದ್ದರು. ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡವರ ಕುರಿತು ಭಾರತ ಸಂತಾಪ ಸೂಚಿಸುತ್ತದೆ. ಗಾಯಾಳುಗಳು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆಂದು ತಿಳಿಸಿದೆ. 

ಕಾಬುಲ್ ನಲ್ಲಿ ಅಫ್ಘಾಸ್ತಾನದ ಪ್ರಮುಖ ರಾಜಕೀಯ ಪಕ್ಷದ ಹೆಜ್ಬ್-ಇ-ವಹ್ದತ್'ನ ನಾಯಕರಾಗಿದ್ದ ಅಬ್ದುಲ್ ಅಲಿ ಮಜಾರಿ ಅವರ ಮರಣ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಹಲವು ರಾಜಕೀಯ ಪ್ರಮುಖರು ಭಾಗವಿಸಿದ್ದರು, ಈ ಕಾರ್ಯಕ್ರಮವನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ 32 ಮಂದಿ ಸಾವನ್ನಪ್ಪಿ, 61 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಇತ್ತೀಚೆಗಷ್ಟೇ ಅಮೆರಿಕಾ ಹಾಗೂ ತಾಲಿಬಾನ್ ನಡುವೆ ಶಾಂತಿ ಒಪ್ಪಂದ ನಡೆದಿತ್ತು. ಒಪ್ಪಂದದಲ್ಲಿ ಕೆಲ ಷರತ್ತುಗಳನ್ನು ತಿಳಿಸಲಾಗಿತ್ತು. ಆದರೆ, ಆರಂಭದಲ್ಲಿ ಒಪ್ಪಂದಕ್ಕೆ ಒಪ್ಪಿಕೊಂಡಿದ್ದ ಅಫ್ಘಾನ್ ಅಧ್ಯಕ್ಷ ನಂತರ ದಿನಗಳಲ್ಲಿ ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಕ್ಯಾತೆ ತೆಗೆದಿದ್ದರು. ಇದರಿಂದ ಕೆಂಡಾಮಂಡಲಗೊಂಡಿದ್ದ ತಾಲಿಬಾನ್ ಉಗ್ರರು ಮತ್ತೆ ತಮ್ಮ ದಾಳಿಯನ್ನು ಮುಂದುವರೆಸಿ, ನಮ್ಮ ಶಾಂತಿ ಒಪ್ಪಂದವೇನಿದ್ದರೂ ಅಮೆರಿಕಾದ ಜೊತೆಗೆಯೇ ಹೊರತು ಆಫ್ಘಾನ್ ಜೊತೆಗಲ್ಲ, ಅಫ್ಘಾನ್ ಭದ್ರತಾಪಡೆಗಳ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಘೋಷಣೆ ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com